Advertisement

Didupe ದರ್ಕಾಸು ಕೆಮ್ಮಟೆಯಲ್ಲಿ ಪಾಲದಲ್ಲೇ ಓಡಾಟ; ರೋಟರಿ ತಂಡದಿಂದ ಕಾಲುಸಂಕ ಭರವಸೆ

01:16 PM Oct 16, 2024 | Team Udayavani |

ಬೆಳ್ತಂಗಡಿ: ಮಲವಂತಿಗೆ ಗ್ರಾಮದ ದಿಡುಪೆ ದರ್ಕಾಸು ಸಾಗುವ ರಸ್ತೆಯ ಕೆಮ್ಮಟೆ ಸಮೀಪ ಶಾಶ್ವತ ಕಾಲುಸಂಕ ವಿಲ್ಲದೆ ಅಡಿಕೆ ಪಾಲದಲ್ಲಿ ಓಡಾಡುತ್ತಿದ್ದ ಕುರಿತು ‘ಉದಯವಾಣಿ ಸುದಿನ ವರದಿ’ ಆಲಿಸಿದ ಬೆಳ್ತಂಗಡಿ ರೋಟರಿ ತಂಡವು ಕಾಲುಸಂಕ ನಿರ್ಮಾಣದ ಭರವಸೆಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಅಂದಾಜು ವೆಚ್ಚದ ಕುರಿತು ವರದಿ ಸಿದ್ಧಪಡಿಸಿದೆ.

Advertisement

ಬೆಳ್ತಂಗಡಿ ಗ್ರಾಮದ ಅಂಚಿನಲ್ಲಿರುವ ಮಲವಂತಿಗೆ ಗ್ರಾಮದ ದಿಡುಪೆ ಐದು ಸೆಂಡ್ಸ್‌ ಮಾರ್ಗವಾಗಿ ದರ್ಕಾಸು ಕೆಮ್ಮಟೆ ಸಾಗುವಲ್ಲಿ ಹಿಂದೆ ನಂದಿಕಾಡು ಹೊಳೆಗೆ ಅಡ್ಡಲಾಗಿ ಕಿರು ಸೇತುವೆಯೊಂದು ಮಂಡಲ ಪಂಚಾಯತ್‌ ಅವಧಿಯಲ್ಲಿ ನಿರ್ಮಾಣವಾಗಿತ್ತು. ಆದರೆ 2019ರ ನೆರೆ ಅದನ್ನು ಕೊಚ್ಚಿ ತನ್ನ ಪಾಲಾಗಿಸಿತ್ತು. ಬಳಿಕ ದಿನನಿತ್ಯದ ಓಡಾಟಕ್ಕೆ ಅಡಿಕೆ ಪಾಲದ ಕಾಲುಸಂಕ ರಚಿಸಿ ದಿನ ಸಾಗಿಸುತ್ತಿದ್ದರು. ಈ ಕುರಿತು ‘ಉದಯವಾಣಿ ಸುದಿನ’ ಸ್ಥಳೀಯರ ಸಮಸ್ಯೆ ಬಗ್ಗೆ ವರದಿ ಬಿತ್ತರಿಸಿತ್ತು.

ಸೇವೆಯಲ್ಲಿ ಸದಾ ಮುಂದು, ಸಮಾಜಕ್ಕಾಗಿ ಸದಾ ತುಡಿಯುವ ರೋಟರಿ ಸೇವಾ ಸಂಸ್ಥೆಯು ವರದಿ ಓದಿ ಇನ್ನಿತರ ಸಂಘ ಸಂಸ್ಥೆಯೊಂದಿಗೆ ಜತೆಗೂಡಿ ಇದೇ ಮೊದಲಬಾರಿಗೆ ರೋಟರಿ ಅಧ್ಯಕ್ಷ ಪೂರನ್‌ ವರ್ಮಾ ಅವರ ಮುತುವರ್ಜಿಯೊಂದಿಗೆ ಕಾಲು ಸಂಕ ನಿರ್ಮಾಣದತ್ತ ಚಿಂತಿಸಿದೆ. ಈ ಸಲುವಾಗಿ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯರಿಂದ ಮಾಹಿತಿ ಪಡೆದು ವರದಿ ಪಡೆದಿದ್ದು, ಮುಂದೆ ಎಂಜಿನಿಯರ್‌ಗಳ ತಂಡವು ಅಂದಾಜು ವೆಚ್ಚದ ಬಗ್ಗೆ ಪಟ್ಟಿ ಸಿದ್ಧಪಡಿಸಿ ಅನುದಾನ ಹೊಂದಿಸಲು ಮುಂದಾಗಿದೆ.

ಈ ಪ್ರದೇಶದಲ್ಲಿ 15ರಿಂದ 20 ಮನೆಗಳಿವೆ. ಇಲ್ಲಿನ 10ಕ್ಕೂ ಅಧಿಕ ಅಂಗನವಾಡಿ ಮಕ್ಕಳು, ಅಂಗವಿಕಲರು, ವೃದ್ಧರು ಇದೇ ಕಾಲು ಸಂಕ ಅನುಸರಿಸಬೇಕಿದೆ. ಸುಮಾರು 20 ಅಡಿ ಉದ್ದ, 15 ರಿಂದ 20 ಅಡಿ ಆಳವಿರುವ ಈ ಕಾಲು ಸಂಕದಲ್ಲೇ ಅಗತ್ಯ ಕಾರ್ಯಗಳಿಗೆ ದಿಡುಪೆಗೆ ಓಡಾಡ ಬೇಕಾಗಿರುವುದರಿಂದ ಕಾಲುಸಂಕ ಅಗತ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next