ಬೆಳ್ತಂಗಡಿ: ನ್ಯಾಯತರ್ಪು ಗ್ರಾಮದ ಜಾರಿಗೆಬೈಲು ಎಂಬಲ್ಲಿ ಮೇ 16 ರಂದು ಬೆಳಗ್ಗಿನ ಜಾವ ಮೆಸ್ಕಾಂ ಇಲಾಖೆಯ ನಿವೃತ್ತ ಉದ್ಯೋಗಿ ಕೆ.ಹಮೀದ್ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಿಂದಿನ ಬಾಗಿಲಿನ ಬೀಗ ಒಡೆದು 95 ಸಾವಿರ ರೂ. ಮೌಲ್ಯದ ಚಿನ್ನಾಭರಣ ಸಹಿತ ಸೊತ್ತುಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಕೆ.ಹಮೀದ್ ಅವರ ಪತ್ನಿ ಅನಾರೋಗ್ಯವಾಗಿದ್ದರಿಂದ ಮೇ 15 ರಂದು ಮಂಗಳೂರು ಆಸ್ಪತ್ರೆಗೆ ತೆರಳಿ ರಾತ್ರಿ ಮಂಗಳೂರಿನ ತನ್ನ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಜಾರಿಗೆಬೈಲು ಮನೆಯಲ್ಲಿ ಮನೆಯಲ್ಲಿ ಹಮೀದ್ ಅವರ ಮಗ ಸುಝೂನ್ ಮನೆಯಲ್ಲಿದ್ದು ರಾತ್ರಿ ಸಮೀಪದ ತನ್ನ ಅಜ್ಜಿ ಮನೆಯಲ್ಲಿ ಉಳಿದಕೊಂಡಿದ್ದ. ಮರುದಿನ ಮನೆಗೆ ಬಂದಾಗ ಕಳವು ಪ್ರಕರಣ ಬೆಳಕಿಗೆ ಬಂಧಿದೆ.
80,000 ರೂ. ನಗದು, ಡಬ್ಬಿಯಲ್ಲಿರಿಸಿದ 5,000 ರೂ. ಮೌಲ್ಯದ ನಾಣ್ಯಗಳು ಹಾಗೂ ವಿವಿಧ ಕಂಪೆನಿಯ ಸುಮಾರು 10,000 ರೂ., ಮೌಲ್ಯದ 5 ವಾಚ್‌ಗಳು ಸೇರಿ ಒಟ್ಟು 95,000 ರೂ. ಮೌಲ್ಯದ ನಗದು ಹಾಗೂ ಸೊತ್ತುಗಳು ಕಳವಾಗಿರುವ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಇದನ್ನೂ ಓದಿ:ಕಣ್ಣು ಆಪರೇಷನ್ ಮಾಡಿದರೆ ಹಣ ನೀಡುತ್ತೇವೆಂದು ನಂಬಿಸಿ ಮಹಿಳೆಯ 5 ಲಕ್ಷದ ಚಿನ್ನ ದೋಚಿದ ಆಸಾಮಿ
ಕಳ್ಳತನ ನಡೆದ ಮನೆಗೆ ದ.ಕ.ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್‌ಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ವೃತ್ತ ನಿರೀಕ್ಷಕರಾದ ಬಿ.ಶಿವಕುಮಾರ್, ಉಪ ನಿರೀಕ್ಷಕ ನಂದಕುಮಾರ್ ಎಂ.ಎಂ., ಪ್ರೊಬೆಶನರಿ ಎಸ್.ಐ. ಮುರಳಿಧರ್, ಎ.ಎಸ್.ಐ ಗಳಾದ ದೇವಪ್ಪ, ತಿಲಕ್ ಇದ್ದರು.