Advertisement

ಬೆಳ್ತಂಗಡಿ: ಬಿಜೆಪಿ ಯುವಮೋರ್ಚಾ

04:46 PM Jan 01, 2018 | Team Udayavani |

ಬೆಳ್ತಂಗಡಿ: ಪ್ರಧಾನಿ ಮೋದಿ ಅವರ ಕೇಂದ್ರ ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯನಡೆಯಬೇಕು ಎಂದು ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಹೇಳಿದರು. ಅವರು ರವಿವಾರ ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲ ಇದರ ವತಿಯಿಂದ ಬಿಜೆಪಿ ಪಂಚಾಯತ್‌ ಸಮಿತಿ ಕುವೆಟ್ಟು ಇದರ ಸಹಕಾರದೊಂದಿಗೆ ಗುರುವಾಯನಕೆರೆ ನಮ್ಮ ಮನೆ ಹವ್ಯಕ ಭವನದಲ್ಲಿ ನಡೆದ ‘ಮನ್‌ ಕೀ ಬಾತ್‌ ಚಾಯ್‌ ಕೆ ಸಾಥ್‌’ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಪತ್‌ ಬಿ. ಸುವರ್ಣ, ಕೇಂದ್ರ ಸರಕಾರ ಅನೇಕ ಮಹತ್ತರ ಯೋಜನೆ ಗಳನ್ನು ಹಮ್ಮಿಕೊಂಡಿದೆ. ಆದರೆ ಇದರ ಮಾಹಿತಿ ಎಲ್ಲರಿಗೂ ತಲುಪಿಲ್ಲ. ಗ್ರಾಮ ಸಮಿತಿ, ಬೂತ್‌ ಸಭೆಗಳಲ್ಲಿ ಮನ್‌ ಕಿ ಬಾತ್‌ ಕೇಳಿಸುವ ಕಾರ್ಯ ನಮ್ಮ ಕಾರ್ಯಕರ್ತರಿಂದ ನಡೆಯ
ಬೇಕು. ಇದರ ಮೂಲಕ ಅನೇಕ ವಿಚಾರಗಳನ್ನು ಮೋದಿ ಅವರು ನೇರವಾಗಿ ಹಂಚಿಕೊಳ್ಳುತ್ತಿದ್ದಾರೆ. ಸ್ವಚ್ಛ ಭಾರತ್‌, ಮುದ್ರಾ ಯೋಜನೆ ಸಹಿತ ಅನೇಕ ವಿಚಾರಗಳ ಮಾಹಿತಿ ಜನರಿಗೆ ತಲುಪಿಸಬೇಕು ಎಂದರು.

 ಬಿಜೆಪಿ ತಾ| ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ ಕಾರ್ಯಕ್ರಮ ಉದ್ಘಾಟಿಸಿದರು. ತಾ.ಪಂ. ಸದಸ್ಯ ಸುಧಾಕರ ಬಿ.ಎಲ್‌., ಕುವೆಟ್ಟು ಪಂ. ಅಧ್ಯಕ್ಷ ಅಶೋಕ್‌ ಕೋಟ್ಯಾನ್‌, ಲಾೖಲ ಪಂಚಾಯತ್‌ ಉಪಾಧ್ಯಕ್ಷ ಗಿರೀಶ್‌ ಡೋಂಗ್ರೆ, ಕಚೇರಿ ಕಾರ್ಯದರ್ಶಿ ಜಿ. ನಾರಾಯಣ ಆಚಾರ್‌, ರಾಜರಾಜೇಶ್ವರಿ ಭಜನ ಮಂಡಳಿಯ ರಾಜಗೋಪಾಲ ಭಟ್‌ ಮೊದಲಾದವರು ಉಪಸ್ಥಿತರಿದ್ದರು. ಅರ್ಧ ಗಂಟೆ ಕಾಲ ಪ್ರಧಾನಿಯವರ ಮನ್‌ ಕಿ ಬಾತ್‌ ಕಾರ್ಯಕ್ರಮದ ನೇರಪ್ರಸಾರವನ್ನು ಕೇಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next