Advertisement

Belthangady: ಡಿವೈಡರ್‌ ಗೆ ಬೈಕ್‌ ಢಿಕ್ಕಿ; ಸವಾರ ಸಾ*ವು

01:02 AM Oct 11, 2024 | Team Udayavani |

ಬೆಳ್ತಂಗಡಿ: ಗುರುವಾಯನಕೆರೆ ಶಕ್ತಿನಗರದ ಬಳಿ ಡಿವೈಡರ್‌ಗೆ ಬೈಕ್‌ ಢಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.

Advertisement

ಬೆಳ್ತಂಗಡಿ ತಾಲೂಕು ತೆಂಕಕಾರಂದೂರು ಗ್ರಾಮದ ಕಟ್ಟೆ ನಿವಾಸಿ ಸುಧೀಶ್‌ (30) ಮೃತಪಟ್ಟ ಬೈಕ್‌ ಸವಾರ. ಪೊಲೀಸರು ಘಟನಾ ಸ್ಥಳಕ್ಕಾಗಮಿಸಿದ್ದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಅವರು ಪೈಂಟಿಂಗ್‌ ವೃತ್ತಿ ನಡೆಸುತ್ತಿದ್ದು, ಗುರುವಾರ ಯಾವುದೋ ಕಾರ್ಯನಿಮಿತ್ತ ಉಪ್ಪಿನಂಗಡಿಯಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ನಡೆದಿದೆ. ಡಿವೈಡರ್‌ನ ಎರಡು ವಿದ್ಯುದ್ದೀಪಕ್ಕೆ ಹಾನಿಯಾಗಿದೆ.

ತಲೆಗೆ ಪೆಟ್ಟು ತಗಲಿದ್ದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟರು. ತಂದೆ, ಇಬ್ಬರು ಸಹೋದರಿಯರು, ಇಬ್ಬರು ಸಹೋದರರನ್ನು ಅಗಲಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next