Advertisement

Belthangady ಬೈಕ್‌ ಢಿಕ್ಕಿ: ಶಾಲಾ ಬಾಲಕಿ ಸಾವು

12:12 AM Oct 28, 2023 | Team Udayavani |

ಬೆಳ್ತಂಗಡಿ: ಉಜಿರೆ ಸಮೀಪದ ಬದನಾಜೆಯಲ್ಲಿ ಬೈಕ್‌ ಢಿಕ್ಕಿ ಹೊಡೆದು ಶಾಲಾ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.

Advertisement

ಮೃತ ಬಾಲಕಿ ಸ್ಥಳೀಯ ನಿವಾಸಿ ಅಶೋಕ್‌ ಮತ್ತು ಜಯಶ್ರೀ ದಂಪತಿಗಳ ಪುತ್ರಿ ಮೂರನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಅಂಕಿತಾ (8) ಎಂಬಾಕೆಯಾಗಿದ್ದು, ರಸ್ತೆ ದಾಟುವಾಗ ಬೈಕ್‌ ಢಿಕ್ಕಿ ಹೊಡೆದಿತ್ತು. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಸವಾರ ವಿಕಾಸ್‌ ವಿರುದ್ಧ ದೂರು ದಾಖಲಾಗಿದೆ. ಮೃತ ಬಾಲಕಿ ತಾಯಿ, ಅವಳಿ ಸಹೋದರಿ ಹಾಗೂ ಸಹೋದರನನ್ನು ಅಗಲಿ¨ªಾಳೆ.

Advertisement

Udayavani is now on Telegram. Click here to join our channel and stay updated with the latest news.

Next