ಬೆಳ್ತಂಗಡಿ: ಪಟ್ಟಣ ಪಂಚಾಯತ್‌ನ ವಾಣಿಜ್ಯ ಸಂಕೀರ್ಣದಲ್ಲಿರುವ ವಾರ್ತಾಭವನದ ಕೆಳಭಾಗದ ಸ್ಲ್ಯಾಬ್ ಕುಸಿದು ಬೀಳುತ್ತಿದ್ದು, ಮುನ್ನೆಚ್ಚರಿಕೆಯಾಗಿ ತೆರವುಗೊಳಿಸುವ ವೇಳೆ ಒಮ್ಮೆಲೆ ಕುಸಿದು ಇಬ್ಬರು ಕಾರ್ಮಿಕರಿಗೆ ಸಣ್ಣಪುಟ್ಟ ಗಾಯವಾದ ಘಟನೆ ಬುಧವಾರ ನಡೆದಿದೆ.
ಬೆಳ್ತಂಗಡಿ ಕೆಎಸ್‌ಆರ್‌ಟಿ ಬಸ್ ನಿಲ್ದಾಣದ ಬಳಿ ಇರುವ ವಾರ್ತಾ ಭವನ ಕಟ್ಟಡದ ಕೆಳ ಭಾಗ ಕಳೆದ ಒಂದು ವಾರದಿಂದ ಕುಸಿಯುತ್ತಿರುವ ಬಗ್ಗೆ ಪಟ್ಟಣ ಪಂಚಾಯತ್‌ಗೆ ಮೌಖಿಕ ಮಾಹಿತಿ ನೀಡಲಾಗಿತ್ತು.
ಕಟ್ಟಡಕ್ಕೆ 15 ವರ್ಷ ಪೂರೈಸಿದ್ದು, ಈಗಾಗಲೆ ಕೆಎಸ್‌ಆರ್‌ಟಿಸಿ ನೂತನ ಕಟ್ಟಡ ನಿರ್ಮಾಣ ಕಾರ್ಯದ ನಿಮಿತ್ತ ಕಟ್ಟಡ ಸ್ಥಳವನ್ನು ಬಿಟ್ಟುಕೊಡಲಾಗಿದೆ.
ಪಟ್ಟಣ ಪಂಚಾಯತ್‌ನಿಂದ ದುರಸ್ತಿ ಕಾರ್ಯ ನಿರ್ವಹಿಸಲು ಮುಂದಾದ ಸಂದರ್ಭದಲ್ಲಿ ಕಟ್ಟಡಕ್ಕೆ ಅಳವಡಿಸಿದ ಕಬ್ಬಿಣದ ಶೀಟ್ ಕುಸಿದು ಬಿದ್ದಿದೆ. ಗಾಯಳುಗಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
Related Articles
ಕಟ್ಟಡ ಕಾಮಗಾರಿ ಕಳಪೆಯಾಗಿರಿವುದು ಮೇಲ್ನೋಟಕ್ಕೆ ಕಂಡುಬಂದಿದೆ.