Advertisement
ಜ. 9ರಂದು ವೇಣೂರಿಗೆ ಭೇಟಿ ನೀಡಿದ ಶಾಸಕರು, ಬಸ್ ನಿಲ್ದಾಣದ ಜಾಗವನ್ನು ವೀಕ್ಷಿಸಿದರು. ಈಗಿರುವ ಶೌಚಾಲಯನ್ನು ತೆಗೆದು ನದಿ ಬದಿಯಲ್ಲಿ ವ್ಯವಸ್ಥಿತವಾಗಿ ನಿರ್ಮಾಣ ಮಾಡುವ ಬಗ್ಗೆ, ಬಸ್ ನಿಲ್ದಾಣ ಕಟ್ಟಡದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿ ಸಲು ಅನುವಾಗುವಂತೆ ಯೋಜನೆ ರೂಪಿಸು ವಂತೆ ಸ್ಥಳದಲ್ಲಿದ್ದ ಖಾಸಗಿ ಎಂಜಿನಿಯರ್‌ಗೆ ಸೂಚಿಸಿದರು. ಇದಕ್ಕೂ ಮೊದಲು ನಿಲ್ದಾಣಕ್ಕೆ ಗೊತ್ತುಪಡಿಸಿದ ಜಾಗದ ಗಡಿಗುರುತು ತಿಳಿಸುವಂತೆ ಪಂ.ಗೆ ಸೂಚಿಸಿದರು.
ಬಸ್ ನಿಲ್ದಾಣದ ಮುಂಭಾಗದಲ್ಲಿ ರಿಕ್ಷಾ ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗುವುದು. ಇದು ಪ್ರಯಾಣಿಕ ರಿಗೆ ಹೆಚ್ಚಿನ ಅನುಕೂಲವಾಗಲಿದೆ. ಬಸ್ ನಿಲ್ದಾಣದ ರೂಪುರೇಷೆ ಬಳಿಕ ರಿಕ್ಷಾ ಪಾರ್ಕಿಂಗ್‌ಗೆ ಸೂಕ್ತ ಜಾಗ ಗೊತ್ತು ಮಾಡಲಾಗುವುದು. ಸಾರ್ವಜನಿಕ ಶೌಚಾಲಯವನ್ನೂ ನೂತನವಾಗಿ ನಿರ್ಮಿಸ ಲಾಗುವುದು. ಶ್ರೀರಾಮ ನಗರದ ರಿಕ್ಷಾ ಮಾಲಕರ ಬೇಡಿಕೆಗೆ ಅನುಗುಣವಾಗಿ ಹೆದ್ದಾರಿ ವಿಸ್ತರಣೆ ಬಳಿಕ ಅಲ್ಲಿನ ನಿಲ್ದಾಣಕ್ಕೂ ಸೂಕ್ತ ವ್ಯವಸ್ಥೆ ಕಲ್ಪಿಸ ಲಾಗುವುದು ಎಂದರು.
Related Articles
Advertisement
ಎರಡೂವರೆ ವರ್ಷಗಳ ಹಿಂದೆ ಇಲ್ಲಿ ಸುಮಾರು 7.85 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯ ವನ್ನು ಇದೀಗ ನೆಲಸಮ ಮಾಡುವ ಬಗ್ಗೆ ಚಿಂತಿಸಲಾಗಿದೆ. ನೆಲಸಮ ಮಾಡಿದ್ದಲ್ಲಿ ಕೇವಲ 3 ವರ್ಷಗಳಲ್ಲೇ ರೂ. 7.85 ಲಕ್ಷ, ರೂ. ಒಂದೂವರೆ ಲಕ್ಷದಷ್ಟು ಕೊಳವೆ ಪೈಪ್ ಕಾಮಗಾರಿಗೆ ವಿನಿಯೋಗಿಸಿದ ಸರಕಾರಿ ಅನುದಾನ ನೀರಿಗೆ ಹೋಮ ಇಟ್ಟಂತಾ ಗುತ್ತದೆ ಎಂಬುದು ನಾಗರಿಕರ ಅಂಬೋಣ.
ವೇಣೂರು ಪ್ರೌಢಶಾಲೆ ಸಳಾಂತರ ವೇಣೂರು ಪ್ರೌಢಶಾಲೆಯನ್ನು ನಗರದ ಹೃದಯಭಾಗದಿಂದ ಸ್ಥಳಾಂತರಿಸುವ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪವಿದೆಯಲ್ಲ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ವೇಣೂರು ಪ್ರೌಢಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ರೂ. 1.30 ಕೋಟಿಯಷ್ಟು ಈಗಾಗಲೇ ಬಿಡುಗಡೆಗೊಂಡಿದೆ. ಇನ್ನಷ್ಟು ಅನುದಾನ ಸಿಗುವ ನಿರೀಕ್ಷೆ ಇದೆ. ಈಗಿರುವ ವೇಣೂರು ಮುಖ್ಯಪೇಟೆಯಲ್ಲಿನ ಶಾಲೆಯಲ್ಲಿ ಕೇವಲ 33 ಸೆಂಟ್ಸ್ ಜಾಗವಿದ್ದು, ನೂತನ ಕಟ್ಟಡ ನಿರ್ಮಾಣಕ್ಕೆ ಜಾಗದ ಕೊರತೆ ಇದೆ. ಅದಕ್ಕಾಗಿ ವೇಣೂರು ಪ್ರೌಢಶಾಲೆಯನ್ನು ಕಾಮೆಟ್ಟು ಬಳಿಗೆ ಸ್ಥಳಾಂತರ ಮಾಡುವ ಬಗ್ಗೆ ಈಗಾಗಲೇ ಚಿಂತಿಸಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ ಎಂದರು.