Advertisement

ಸರ್ವಜ್ಞನ ವಚನಗಳಲ್ಲಿ ಮಾನವತೆಯ ಸಂದೇಶ: ಪೂಂಜ

06:16 AM Feb 21, 2019 | |

ಬೆಳ್ತಂಗಡಿ : ಸರ್ವಜ್ಞನ ವಚನಗಳು ಮಾನವತೆಯ ಸಂದೇಶ ನೀಡುವುದರೊಂದಿಗೆ ಜನಸಾಮಾನ್ಯರ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಯತ್ನವನ್ನೂ ಮಾಡಿವೆ. ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ಸಮಾಜಕ್ಕೆ ಮಾರ್ಗ ದರ್ಶಕವಾಗಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಹೇಳಿದರು.

Advertisement

ಬುಧವಾರ ಗುರುವಾಯನಕೆರೆ ಕುಲಾಲ ಮಂದಿರದಲ್ಲಿ ಬೆಳ್ತಂಗಡಿ ತಾ| ಆಡಳಿತದ ವತಿಯಿಂದ ತಾ| ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಸಹಯೋಗದಲ್ಲಿ ನಡೆದ ಸರ್ವಜ್ಞ ಜಯಂತಿ ಆಚರಣೆ-2019 ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಅಧ್ಯಕ್ಷೆ ದಿವ್ಯ ಜ್ಯೋತಿ ಮಾತನಾಡಿ, ಸರಕಾರ ಸಾಧಕರ ಜಯಂತಿ ಆಚರಿಸುವುದರ ಜತೆಗೆ ಅವರು ಹುಟ್ಟಿದ ಸಮುದಾಯದ ಬೆಳವಣಿಗೆಗೂ ಕೊಡುಗೆ ನೀಡುತ್ತಿದೆ ಎಂದರು.

ರಾಜ್ಯ ಕುಂಬಾರರ ಮಹಾ ಸಂಘದ ಸಂಘಟನ ಕಾರ್ಯದರ್ಶಿ ಎಚ್‌. ಪದ್ಮಕುಮಾರ್‌ ಉಪನ್ಯಾಸ ನೀಡಿ, ಸರ್ವಜ್ಞ ಅವರು ಸಮಾಜದ ಜಾತಿ ವ್ಯವಸ್ಥೆ, ವರ್ಣಭೇದ ನೀತಿಯನ್ನು ದೂರ ಮಾಡುವ ನಿಟ್ಟಿನಲ್ಲಿ ಸರಳ ಕನ್ನಡದ ಮೂಲಕ ಸಾಹಿತ್ಯ ರಚಿಸಿ, ಸಾಕಷ್ಟು ಬದಲಾವಣೆಗೂ ಕಾರಣವಾಗಿದ್ದರು ಎಂದರು. ಬಂದಾರಿನ ರಾಷ್ಟ್ರ ಮಟ್ಟದ ಕ್ರೀಡಾಪಟು ಚಿತ್ರಾ ಅವರನ್ನು ಸಮ್ಮಾನಿಸಲಾಯಿತು. ಹುತಾತ್ಮ ವೀರ ಯೋಧರಿಗೆ ಗೌರವ ಸಲ್ಲಿಸಲಾಯಿತು.

ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿನ್‌, ಸದಸ್ಯರಾದ ಗೋಪಿನಾಥ್‌ ನಾಯಕ್‌, ಕೃಷ್ಣಯ್ಯ ಆಚಾರ್ಯ, ವಸಂತಿ, ನ.ಪಂ. ಸದಸ್ಯ ಜನಾರ್ದನ್‌, ಕುವೆಟ್ಟು ಗ್ರಾ.ಪಂ. ಅಧ್ಯಕ್ಷ ಅಶೋಕ್‌ ಕೋಟ್ಯಾನ್‌, ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಹರೀಶ್‌ ಕಾರಿಂಜ ಉಪಸ್ಥಿತರಿದ್ದರು.

ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ್‌ ಬಿ. ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಸುಭಾಸ್‌ ಜಾಧವ್‌ ವಂದಿಸಿದರು. ಬಂದಾರು ಗ್ರಾ.ಪಂ. ಅಧ್ಯಕ್ಷ ಉದಯಕುಮಾರ್‌ ಬಿ.ಕೆ. ಕಾರ್ಯಕ್ರಮ ನಿರೂಪಿಸಿದರು.

Advertisement

ಕುಲಾಲ ಭವನಕ್ಕೆ ನಿಧಿ
ಸ್ಥಳೀಯ ಕುಲಾಲ ಭವನಕ್ಕೆ ತನ್ನ ಶಾಸಕ ನಿಧಿಯಿಂದ 5 ಲಕ್ಷ ರೂ. ಅನುದಾನ ಮೀಸಲಿಡಲಾಗಿದ್ದು, ಸಂಸದರ ನಿಧಿಯಿಂದಲೂ ಅನುದಾನ ದೊರಕಿಸಿ ಕೊಡುವ ಪ್ರಯತ್ನ ಮಾಡುವೆ.
 - ಹರೀಶ್‌ ಪೂಂಜ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next