ಬೆಳ್ತಂಗಡಿ : ಲಾೖಲ ಗ್ರಾಮದ ಕಾಶಿಬೆಟ್ಟು ಸಮೀಪ ನಿಯಂತ್ರಣ ತಪ್ಪಿದ ಕಾರೊಂದು ಹೊಂಡಕ್ಕೆ ಬಿದ್ದು ಕಾರಿನಲ್ಲಿದ್ದ ಮಹಿಳೆಯ ತಲೆಗೆ ಗಾಯವಾದ ಘಟನೆ ಮೇ 25ರಂದು ಸಂಭವಿಸಿದೆ.
ತುಮಕೂರು ಮೂಲದ ಮಮತಾ(36) ಗಾಯಗೊಂಡವರು.
ಕಾಶಿಬೆಟ್ಟಿನಲ್ಲಿ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ಕೊಡುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಗುಂಡಿಗೆ ಬಿದ್ದಿದೆ. ಕಾರಿನಲ್ಲಿ ನಾಲ್ಕು ಜನ ಇದ್ದು ಅದರಲ್ಲಿ ಮಹಿಳೆಯ ತಲೆಗೆ ಗಾಯವಾಗಿತ್ತು. ತುಮಕೂರು ಜಿಲ್ಲೆಯವರಾದ ನಾಲ್ವರು ಮಗಳನ್ನು ಮೂಡುಬಿದಿರೆ ಕಾಲೇಜೊಂದಕ್ಕೆ ದಾಖಲಿಸಿ ಚಾರ್ಮಾಡಿ ಘಾಟ್ ಆಗಿ ಊರಿಗೆ ಮರಳುತ್ತಿದ್ದಾಗ ಕಾಶಿಬೆಟ್ಟಿನಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : ಕಾಪು : ಪತ್ನಿಗೆ ಕಿರುಕುಳ ನೀಡಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ವಶಕ್ಕೆ