Advertisement

ಪೋಕ್ಸೋ ಪ್ರಕರಣದ ಆರೋಪಿ ಪತ್ತೆಗೆ ಸಹಕರಿಸುವಂತೆ ಮನವಿ

10:36 PM Mar 27, 2023 | Team Udayavani |

ಬೆಳ್ತಂಗಡಿ: ಕುಕ್ಕೇಡಿ ಗ್ರಾಮದ ಉಳ್ತೂರು ಮನೆ ನಿವಾಸಿ ಮಹಮ್ಮದ್‌ ಅವರ ಪುತ್ರ ಆಸಿಮ್‌ (29) 2015ರಲ್ಲಿ ಪೋಕ್ಸೋ ಪ್ರಕರಣದ ಆರೋಪಿತ ತಲೆಮರೆಸಿಕೊಂಡಿದ್ದು, ಈತನ ಪತ್ತೆಗಾಗಿ ಪೊಲೀಸ್‌ ಇಲಾಖೆ ಸಾರ್ವಜನಿಕ ಪ್ರಕಟನೆ ಹೊರಡಿಸಿದೆ.

Advertisement

ಪೋಕ್ಸೋ ಪ್ರಕರಣದಲ್ಲಿ ಈತ ಮಂಗಳೂರು ಜಿಲ್ಲಾ ಜೈಲಿನಲ್ಲಿದ್ದು, ಇದೇ ವೇಳೆ ಜೈಲಿನಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿ ಅಲ್ಲಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ. ಆತನ ವಿರುದ್ಧ ಮಂಗಳೂರು ಪೋಕ್ಸೋ ನ್ಯಾಯಾಲಯ ಪತ್ತೆಯ ಬಗ್ಗೆ ಉದ್ಘೋಷಣೆ ಹೊರಡಿಸಿದೆ.

ಆರೋಪಿತ ಆಸಿಮ್‌ನ ಕುರಿತು ಸುಳಿವು ಸಿಕ್ಕಲ್ಲಿ ವೇಣೂರು ಪೊಲೀಸ್‌ ಠಾಣೆ ಉಪನಿರೀಕ್ಷಕರ ದೂರವಾಣಿ 9480805372 ಅಥವಾ ಠಾಣೆ ಸಂಖ್ಯೆ 08256-286232 ಸಂಪರ್ಕಿಸುವಂತೆ ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next