Advertisement

ಕೊಲೆ ಪ್ರಕರಣ : ವಾರಂಟ್‌ ಆರೋಪಿ ಬಂಧನ

12:39 AM Feb 09, 2023 | Team Udayavani |

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿ ಸ್ನೇಹಿತನನ್ನು ಕೊಲೆ ಮಾಡಿ ಬಂಧನವಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ತಲೆಮರೆಸಿಕೊಂಡಿದ್ದ ವಾರಂಟ್‌ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

Advertisement

ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಂಧನವಾಗಿದ್ದು, ಅನಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಬಳಿಕ ಕಳೆದೊಂದು ವರ್ಷದಿಂದ ಕೋರ್ಟಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್‌ ಆರೋಪಿ ಕೇರಳ ರಾಜ್ಯದ ಉಪ್ಪಳ ಕಾಸರಗೋಡು ಜಿಲ್ಲೆಯ ಮೊಳಿಂಜೆ ಗ್ರಾಮದ ಮಾಹಿ ನಗರದ ಸಿರಾಜ್‌ (28)ನನ್ನು ಫೆ. 7ರಂದು ಆತನ ಮನೆಯ ಸಮೀಪದಿಂದ ಬೆಳ್ತಂಗಡಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಸತ್ಯನಾರಾಯಣ ಕೆ. ಹಾಗೂ ಸಬ್‌ಇನ್‌ಸ್ಪೆಕ್ಟರ್‌ ಅರ್ಜುನ್‌ ಅವರ ಮಾರ್ಗದರ್ಶನದಲ್ಲಿ ಸಿಬಂದಿ ವ್ರಷಭ, ಬೆನ್ನಿಚ್ಚನ್‌, ಬಸವರಾಜ್‌ ಅವರು ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next