ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಧರ್ಮಸ್ಥಳ ಎಂಬಲ್ಲಿ ಬಿ.ಎಸ್‌ಎನ್‌ಎಲ್ ಸಂಸ್ಥೆಯ ಉಪಕೇಂದ್ರದಲ್ಲಿದ್ದ ಬಾುಟರಿ ಕಳವು ಮಾಡಲಾಗಿದೆ.
Advertisement
ಉಪಯುಕ್ತಕ್ಕೆ ಬಾರದ ಒಟ್ಟು 24 ಎಕ್ಸೈಡ್ 1000 ಎ.ಎಚ್. ಬ್ಯಾಟರಿಗಳ ಪೈಕಿ ಸುಮಾರು 80,000 ಮೌಲ್ಯದ ಒಟ್ಟು 16 ಎಕ್ಸೆçಡ್ 1000 ಎ.ಎಚ್ ಬ್ಯಾಟರಿಗಳನ್ನು ಉಪಕೇಂದ್ರದ ಮುಖ್ಯ ದ್ವಾರದ ಬೀಗವನ್ನು ಮುರಿದು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಿರಿಯ ದೂರಸಂಪರ್ಕ ಅಧಿಕಾರಿ ಆಶಾ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.