ಬೆಳ್ತಂಗಡಿ: ನೆರಿಯ ಗ್ರಾಮದ ನೆಕ್ಕರೆ ಎಂಬಲ್ಲಿ ವ್ಯಕ್ತಿಯೊಬ್ಬರು ಮನೆಯೊಳಗೆ ಬಿದ್ದು ಮೃತಪಟ್ಟು ಮೂರು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ನೆರಿಯ ಗ್ರಾಮದ ನೆಕ್ಕರೆ ನಿವಾಸಿ ಗೋಪಾಲಕೃಷ್ಣ ಟಿ.ಎನ್. (60) ಮೃತಪಟ್ಟವರು.
ವಿಪರೀತ ಅಮಲು ಪದಾರ್ಥ ಸೇವಿಸುವ ಚಟ ಹೊಂದಿದ್ದ ಅವರು ಇದೇ ವಿಚಾರದಲ್ಲಿ ಪತ್ನಿಯೊಂದಿಗೆ ಸಾಂಸಾರಿಕ ಜೀವನದಲ್ಲಿ ವೈಮನಸ್ಸು ಹೊಂದಿ ಒಬ್ಬರೇ ನೆರಿಯ ಗ್ರಾಮದ ನೆಕ್ಕರೆ ಎಂಬಲ್ಲಿ ವಾಸವಾಗಿದ್ದರು. ಪುತ್ರ ಮತ್ತು ಪತ್ನಿ ಸುಲ್ಕೇರಿಯಲ್ಲಿ ವಾಸವಾಗಿದ್ದರು.
ಜ. 8ರಂದು ಮನೆಯ ಹತ್ತಿರದ ನಿಶಾಂತ್ ಎಂಬುವರು ಪುತ್ರನಿಗೆ ಕರೆ ಮಾಡಿ ತಂದೆಯವರು ಎರಡು ದಿನದಿಂದ ಕಾಣುತ್ತಿಲ್ಲ ಎಂದು ತಿಳಿಸಿದಂತೆ ಪರಿಶೀಲಿಸಿದಾಗ ಗೋಪಾಲಕೃಷ್ಣ ಅವರು ಮನೆಯೊಳಗೆ ಮಂಚದ ಕೆಳಗೆ ಬಿದ್ದು ಮೃತಪಟ್ಟಿರುವುದು ಖಚಿತವಾಗಿದೆ.
Related Articles
ಒಂದು ವಾರದಿಂದ ಜ್ವರ ಬಂದಿದ್ದು, ಮೃತ ಗೋಪಾಲಕೃಷ್ಣರು ವಿಪರೀತ ಅಮಲು ಪದಾರ್ಥ ಸೇವನೆ ಮಾಡಿ ಮನೆಯೊಳಗೆ ಕುಸಿದು ಬಿದ್ದು ಮೃತಪಟ್ಟಿರಬಹುದೆಂದು ಸಂಶಯಿಸಲಾಗಿದೆ.
ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.