Advertisement

ಬೆಳ್ತಂಗಡಿ: ಪೊಲೀಸರ ಎಚ್ಚರಿಕೆ ಬೆನ್ನಲೇ ವೇಶ್ಯಾವಾಟಿಕೆ: ಐವರು ಮಹಿಳೆಯರು ಸೇರಿ 7 ಮಂದಿ ಬಂಧನ

09:07 PM Feb 07, 2023 | Team Udayavani |

ಬೆಳ್ತಂಗಡಿ: ಅನೈತಿಕ ಚಟುವಟಿಕೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಉಜಿರೆಯ ಲಾಡ್ಜ್ ವೊಂದರ ಕುರಿತು ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ನೀಡಿದ ಮಾಹಿತಿ ಆಧರಿಸಿ ಬೆಳ್ತಂಗಡಿ ಪೊಲೀಸರು ಮಂಗಳವಾರ ಸಂಜೆ ದಾಳಿ ನಡೆಸಿದ್ದಾರೆ.

Advertisement

ದಾಳಿ ವೇಳೆ ಐವರು ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ವಶಕ್ಕೆ ಪಡೆಯಲಾಗಿದೆ.

ಫೆ.6 ರಂದು ರಾತ್ರಿ ಪೊಲೀಸ್ ವರಿಷ್ಠಾಧಿಕಾರಿ ಅಮಟೆ ವಿಕ್ರಮ್ ಮಾರ್ಗದರ್ಶನದಲ್ಲಿ ಬಂಟ್ವಾಳ ಪೊಲೀಸ್ ಉಪ ವಿಭಾಗದ ಡಿವೈಎಸ್ ಪಿ ಪ್ರತಾಪ್ ಸಿಂಗ್ ಥೋರಟ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಜತೆಗೆ ಇಂದು ಮಧ್ಯಾಹ್ನವಷ್ಟೆ ಬೆಳ್ತಂಗಡಿ ವೃತ್ತನಿರೀಕ್ಷಕರ ಸಮ್ಮುಖದಲ್ಲಿ ಲಾಡ್ಜ್ ಮಾಲೀಕರನ್ನು ಕರೆಸಿ ಸಭೆ ನಡೆಸಿ ಎಚ್ಚರಿಕೆ ನೀಡಲಾಗಿತ್ತು. ಆದರೆ ಬೃಹತ್ ಜಾಲವಿರುವ ದಂಧೆ ಮತ್ತೆ ವೇಶ್ಯವಾಟಿಕೆಯನ್ನು ರಾಜಾರೋಶವಾಗಿ ನಡೆಸಲು ಮುಂದಾಗಿದೆ.

ಈ ಕುರಿತು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಪ್ರಮುಖರ ಮಾಹಿತಿ ಆಧರಿಸಿ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದ್ದಾರೆ. ಉಜಿರೆಯ ಎಂ. ಎಸ್. ಎಸ್. ಲಾಡ್ಡಿನಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರೆದಿದ್ದು ಇನ್ನಷ್ಟು ಹೆಚ್ಚಿನ‌ ವಿವರ ತಿಳಿದು ಬರಬೇಕಿದೆ.

ಇದನ್ನೂ ಓದಿ: ತಾಕತ್ತಿದ್ದರೆ ನಾನು ಹೇಳಿದ ವ್ಯಕ್ತಿಯನ್ನೇ ಸಿಎಂ ಅಭ್ಯರ್ಥಿಯೆಂದು ಘೋಷಿಸಿ: ಹೆಚ್ ಡಿಕೆ ಸವಾಲು

Advertisement
Advertisement

Udayavani is now on Telegram. Click here to join our channel and stay updated with the latest news.

Next