Advertisement
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಬೆಳ್ತಂಗಡಿ ತಾ| ಘಟಕದ ವತಿಯಿಂದ ಅಳದಂಗಡಿಯ ಪಾಂಡ್ಯಪ್ಪ ಅರಸರಾದ ಕೃಷ್ಣರಾಜ ಅಜಿಲ ವೇದಿಕೆಯಲ್ಲಿ ಜರಗಿದ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ಸಮಾ ರೋಪ ಭಾಷಣ ಮಾಡಿ, ಗುರುಹಿರಿಯರ ಒಳ್ಳೆಯ ದನ್ನು ಮುಂದಿನ ಪೀಳಿಗೆಗೆ ದಾಟಿಸುವವರು ನಾವಾಗ ಬೇಕು. ಒಳ್ಳೆ ಯತನವನ್ನು ಕಾಣುವ ಕಣ್ಣುಗಳು ನಮ್ಮದಾಗಬೇಕು ಎಂದು ತಿಳಿಸಿದರು. ಸಮ್ಮೇಳನದ ಸರ್ವಾ ಧ್ಯಕ್ಷ ಪ. ರಾಮಕೃಷ್ಣ ಶಾಸ್ತ್ರಿ ಮಚ್ಚಿನ ಅವರು ಮಾತನಾಡಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಎಸ್. ಪ್ರದೀಪ್ ಕುಮಾರ ಕಲ್ಕೂರ ಅವರು ಮಾತನಾಡಿ, ನಾವು ಪ್ರಭುತ್ವದಿಂದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿದ್ದೇವೆ. ಆದರೆ ದೇಶದಲ್ಲಿ ನಡೆಯಬಾರದ ಘಟನೆಗಳು ನಡೆಯುತ್ತಿವೆ. ಶಾಲೆ ಗಳಲ್ಲಿ ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿ ಯಾಗಬೇಕು. ನಮ್ಮ ಸಂಸ್ಕೃತಿಯಂತೆ ಬದುಕಲು ಸಾಹಿತ್ಯಗಳು ಪ್ರೇರಣೆ ಆಗಿವೆ ಎಂದು ತಿಳಿಸಿದರು. ಸಮ್ಮೇಳನ ಸಂಯೋಜನ ಸಮಿತಿ ಗೌರವಾಧ್ಯಕ್ಷ ಡಾ| ಪದ್ಮಪ್ರಸಾದ ಅಜಿಲರು, ಬೆಳ್ತಂಗಡಿ ಕ.ಸಾ.ಪ. ಅಧ್ಯಕ್ಷ ಡಾ| ಬಿ. ಯಶೋವರ್ಮ, ಅಳದಂಗಡಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ತಾ.ಪಂ. ಸದಸ್ಯೆ ವಿನುಷಾ ಪ್ರಕಾಶ್, ಸ.ಸಂ.ಸ. ಕೋಶಾ ಧ್ಯಕ್ಷ ಪ್ರಕಾಶ್ ಶೆಟ್ಟಿ ನೊಚ್ಚ, ಕಾರ್ಯ ದರ್ಶಿಗಳಾದ ರಾಮಕೃಷ್ಣ ಭಟ್ ಬೆಳಾಲು, ಅಶ್ರಫ್ ಆಲಿ ಕುಂಞಿ, ಜಿಲ್ಲಾ ಕಸಾಪ ಗೌರವ ಕಾರ್ಯ ದರ್ಶಿ ಡಾ| ಎಂ.ಪಿ. ಶ್ರೀನಾಥ್ ಮತ್ತಿತರರು ಉಪಸ್ಥಿತರಿದ್ದರು. ಸಂದೀಪ್ ಎಸ್.ಎನ್. ಸುಶೀಲಾ, ಮಂಗಳಾ, ಮೋಹನ ದಾಸ ಸಮ್ಮಾನಪತ್ರ ವಾಚಿಸಿದರು.
Related Articles
Advertisement
ಸಮ್ಮಾನ ಸಮ್ಮೇಳನಾಧ್ಯಕ್ಷ ಪ. ರಾಮಕೃಷ್ಣ ಶಾಸ್ತ್ರಿ ಮಚ್ಚಿನ ದಂಪತಿಯನ್ನು ಸಮ್ಮಾನಿಸಲಾಯಿತು. ಸಮಿತಿ ಗೌರವಾಧ್ಯಕ್ಷ ನೀಡಿದ ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ| ಪದ್ಮಪ್ರಸಾದ ಅಜಿಲ ಅವರನ್ನು ಗೌರ ವಿಸಲಾಯಿತು. ವಿವಿಧ ಕ್ಷೇತ್ರ ಗಳ ಸಾಧಕರಾದ ಶಶಿಧರ ಶೆಟ್ಟಿ (ಉದ್ಯಮ), ಸುಂದರ ದೇವಾಡಿಗ (ಸ್ಯಾಕ್ಸೋಫೋನ್ ಕಲಾವಿದ), ಡೊಂಬ ನಲ್ಕೆ (ಜಾನಪದ), ವಿ. ಮಹಮ್ಮದ್ (ಜೀವರಕ್ಷಕ), ರಘುನಾಥ ರೈ (ಶಿಕ್ಷಣ, ಸಮಾಜಸೇವೆ), ಡಾ| ವೇಣುಗೋಪಾಲ ಶರ್ಮ (ವೈದ್ಯಕೀಯ), ರವಿಚಂದ್ರ ಕನ್ನಡಿಕಟ್ಟೆ (ಯಕ್ಷಗಾನ), ವಿಜಯ ಕುಮಾರ್ ನಾವರ (ಕಲಾ ಸಂಘಟನೆ), ವಿಶ್ವನಾಥ ಗೌಡ ಕೆ. (ಮಿಶ್ರಕೃಷಿ), ಪ್ರಶಾಂತ್ (ಕ್ರೀಡಾ ಶಿಕ್ಷಣ), ಅಶ್ವಲ್ ರೈ (ಕ್ರೀಡಾಸಾಧಕ) ಅವರ ಪರವಾಗಿ ಅವರ ತಂದೆಯನ್ನು ಸಮ್ಮಾನಿಸಲಾಯಿತು. ಸಾರ್ಥಕ
ಸಾಹಿತ್ಯ ಸಮ್ಮೇಳನಗಳಿಂದ ಕನ್ನಡ ಭಾಷೆ, ಓದಿನ ಬಗ್ಗೆ ಉತ್ತಮ ಭಾವನೆ ಬರಬೇಕು. ಆಗ ಸಮ್ಮೇಳನಗಳು ಸಾರ್ಥಕವಾಗುತ್ತವೆ. ಸಾಹಿತಿ ಮತ್ತು ಸಾಹಿತ್ಯಗಳನ್ನು ಗುರುತಿಸುವ ಕಾರ್ಯ ಈ ಸಮ್ಮೇಳನಗಳಿಂದ ಆಗುತ್ತಿದ್ದು, ಸಾಹಿತ್ಯಪ್ರಜ್ಞೆ ಮೂಡಿಸುವ ಇಂತಹ ಕೆಲಸ ನಿರಂತರ ನಡೆಯಲಿ.
– ಪ. ರಾಮಕೃಷ್ಣ ಶಾಸ್ತ್ರಿ ಮಚ್ಚಿನ
ಸಮ್ಮೇಳನದ ಸರ್ವಾಧ್ಯಕ್ಷರು