Advertisement
ವಿಶ್ವ ಮಾತೃ ದಿನ ಹಾಗೂ ವಿಶ್ವ ಕುಟುಂಬ ದಿನಾಚರಣೆ ಅಂಗವಾಗಿ ನಡೆದ ಆನ್‌ಲೈನ್ ಕವಿಗೋಷ್ಠಿಯಲ್ಲಿ ನಾಡಿನ 18ಕ್ಕೂ ಹೆಚ್ಚು ಕವಿ-ಕವಿಯತ್ರಿಯರು ಕವಿತೆ ವಾಚಿಸಿದರು. ಅಮ್ಮನನ್ನು ಕೊಂಡಾಡುವ, ಮಾತೆಯ ತ್ಯಾಗ, ಮಮತೆ, ವಾತ್ಸಲ್ಯವನ್ನು ಹೆಚ್ಚು ಜನರು ವರ್ಣಿಸಿದರೆ ಒಬ್ಬರು ಅಪ್ಪನನ್ನು ಹೊಗಳಿ ಕವಿತೆ ವಾಚಿಸಿದ್ದು ವಿಶೇಷವಾಗಿತ್ತು. ಬಿಜಾಪುರದ ಅಶೋಕ ನಡುವಿನಮನಿ, ಸುಮಾ ಗಾಜರೆ, ಕೋಲಾರದ ಟಿ. ಸುಬ್ಬರಾಮಯ್ಯ, ಹೂವಿನ ಹಡಗಲಿಯ ನಾಗಮಂಜುಳ ಜೈನ, ಶೋಭ ಮಲ್ಕಿ ಒಡೆಯರ್, ಪೀರ್ ಸಾಹೇಬ್ ಬೀರಬ್ಬಿ, ಮಡಿಕೇರಿಯ ಹೇಮಲತಾ ಪೂರ್ಣ ಪ್ರಕಾಶ್, ಕೊಪ್ಪಳದ ಪ್ರವೀಣ ಕಿತ್ತೂರ್, ಮಹಮ್ಮದ್ ಅಲಿ ಆರ್, ಹಗರಿಬೊಮ್ಮನಹಳ್ಳಿಯ ಕೆ.ಶಾರದಾ, ಯಾದಗಿರಿಯ ಮಶಾಕ ತಾಳಿಕೋಟೆ, ಚಿಕ್ಕಬಳ್ಳಾಪುರದ ಉದಯ್ ಕಿರಣ್ ಬಿ, ಉತ್ತರ ಕನ್ನಡದ ಡಾ| ಕವಿತಾ ಹೆಬ್ಟಾರ್, ಕೊಡಗಿನ ವೀಣಾ ಎಸ್. ರಾವ್, ದಾವಣಗೆರೆಯ ಲಲಿತಾ ಯೋಗೀಶ್, ಚಿತ್ರದುರ್ಗದ ಜೆ.ಆರ್. ಶಿವಕುಮಾರ್, ಬಳ್ಳಾರಿಯ ಸರೋಜಾ ಬ್ಯಾತನಾಳ್, ಕೆ.ನೀಲಮ್ಮ, ಎಸ್.ಕೌಸ್ತುಭ ಭಾರದ್ವಾಜ್, ರಾಯಚೂರಿನ ಕೆ.ಎಂ. ಮುರುಗೇಶ್ ಮತ್ತು ಜಮಖಂಡಿಯ ದಾಮೋದರ ಬಡಿಗೇರ ಸ್ವರಚಿತ ಕವಿತೆಗಳನ್ನು ವಾಚಿಸಿದರು.