ಕುರುಗೋಡು: ಪಟ್ಟಣ ಸಮಿಪದ ಕುಡುತಿನಿ 6ನೇ ವಾರ್ಡಿನ ನಿವಾಸಿ ವಾಲ್ಮೀಕಿ ತಿಮ್ಮಪ್ಪ ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗದ ಸಂಡೂರು ತಾಲೂಕಿನ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ಕರ್ನಾಟಕ ಪ್ರದೇಶದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಪುಟ್ಟ ಸ್ವಾಮಿ ಗೌಡ ಆದೇಶದ ಮೇರೆಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ನ ಕಾರ್ಮಿಕ ವಿಭಾಗದ ಅಧ್ಯಕ್ಷ ಲಕ್ಷ್ಮಣ ತಿಳಿಸಿದ್ದಾರೆ.
ನೂತನವಾಗಿ ಆಯ್ಕೆಯಾದ ತಿಮ್ಮಪ್ಪ ಅವರನ್ನು ಕುಡುತಿನಿ ಪಟ್ಟಣದ ಕಾಂಗ್ರೆಸ್ ನ ಮುಖಂಡರು ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು ಸನ್ಮಾನಿಸಿ ಗೌರವಿಸಿದ್ದಾರೆ.
ನೂತನ ಅಧ್ಯಕ್ಷ ತಿಮ್ಮಪ್ಪ ಮಾತನಾಡಿ, ನನ್ನನ್ನು ಸಂಡೂರು ತಾಲೂಕಿನ ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗದ ಅಧ್ಯಕ್ಷ ರಾಗಿ ಆಯ್ಕೆ ಆಗುವುದಕ್ಕೆ ಸಹಕರಿಸಿದ ಶಾಸಕ ಈ. ತುಕಾರಾಂ, ಮಾಜಿ ಸಚಿವ ಸಂತೋಷ್ ಲಾಡ್, ಮಾಜಿ ಶಾಸಕ ಅನಿಲ್ ಲಾಡ್ ಹಾಗೂ ಪಟ್ಟಣದ ಕಾಂಗ್ರೆಸ್ ಮುಖಂಡರಿಗೂ ಅಭಿನಂದನೆ ಸಲ್ಲಿಸಿದರು. ಅದರಂತೆ ನನ್ನ ಮೇಲೆ ವಿಸ್ವಾಸ ಹಿಟ್ಟು ತಾಲೂಕು ಅಧ್ಯಕ್ಷರಾಗಿ ಮಾಡಿದ ಕಾರಣ ಪಕ್ಷದ ನಿಯಮವಳಿಗಳಿಗೆ ಚ್ಯುತಿ ಬರದಂತೆ ಪ್ರಾಮಾಣಿಕ ವಾಗಿ ಕೆಲಸ ಮಾಡಿ ಪಕ್ಷದ ಬಲವರ್ಧನೆಗೆ ಶ್ರಮಿಸಲಾಗುವುದು ಜೊತೆಗೆ ರೈತರ ಪರ ಕೂಡ ಕೆಲಸ ಮಾಡುವುದಾಗಿ ತಿಳಿಸಿದರು.