Advertisement

Bellary: ದರ್ಶನ್ ನನ್ನು ಭೇಟಿಯಾದ ವಕೀಲ ಸುನೀಲ್; ಹಲವು ವಿಚಾರಗಳ ಬಗ್ಗೆ ಚರ್ಚೆ

06:04 PM Sep 24, 2024 | Team Udayavani |

ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ದರ್ಶನ್ ನನ್ನು ವಕೀಲ ಸುನೀಲ್ ಸೆ.24ರ ಮಂಗಳವಾರ ಭೇಟಿ ಮಾಡಿದ್ದಾರೆ.

Advertisement

ಬಳ್ಳಾರಿ ಜೈಲಿನ ಕೊಠಡಿಯಲ್ಲಿ ದರ್ಶನ್ ನನ್ನು ವಕೀಲ ಸುನೀಲ್ ವಿಚಾರಿಸಿಕೊಂಡರು. ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

ಜೈಲಲ್ಲಿರುವ ದರ್ಶನ್ ಗೆ ಹೊಸ ಮ್ಯಾನುವಲ್‌ ಪ್ರಕಾರ ಸೌಲಭ್ಯ ನೀಡಲು ಜೈಲಾಧಿಕಾರಿಗೆ ವಕೀಲರಿಂದ ಬೇಡಿಕೆ ಸಲ್ಲಿಸಿದ್ದು, 2 ದಿನದಲ್ಲಿ ಮೂಲ ಸೌಲಭ್ಯ ನೀಡದಿದ್ದರೆ ಮಾನವ ಹಕ್ಕುಗಳ‌ ಆಯೋಗಕ್ಕೆ ದೂರು ನೀಡಲಾಗುವುದು ಎಂದರು.

ಹೊಸ ಮ್ಯಾನುವಲ್ ಪ್ರಕಾರ ಮೆಡಿಕಲ್ ಬೆಡ್ ಮತ್ತು ದಿಂಬು ಕೊಡಲು ಅವಕಾಶ ಇದೆ. ನ್ಯಾಯಾಲಯದಿಂದ ಬಂದಿರುವ ಆದೇಶದ ಬಗ್ಗೆ ಜೈಲು ಅಧಿಕಾರಿಗೆ ವಕೀಲ ಸುನೀಲ್‌ ಮನವರಿಕೆ ಮಾಡಿ‌ಕೊಟ್ಟರು.

ಸೆಷನ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ‌ ಸಲ್ಲಿಕೆ ಮಾಡಲಾಗಿದ್ದು, ಸೆ.27 ರಂದು ವಿಚಾರಣೆ ಇದೆ. ಶನಿವಾರ ಜಾಮೀನಿಗೆ ಅರ್ಜಿ ಹಾಕಿದ್ದು, ಪಬ್ಲಿಕ್ ಪ್ರಾಸಿಕ್ಯೂಷನ್ ಟೈಮ್ ತಗೊಂಡಿದ್ದಾರೆ. ಬೇಲ್ ಅರ್ಜಿ ರಿಜೆಕ್ಟ್ ಆದರೆ ಹೈಕೋರ್ಟ್ ಗೆ ಹೋಗುತ್ತೇವೆ ಎಂದು ಹೇಳಿದರು.

Advertisement

ನಮಗೆ ನೂರಕ್ಕೆ ನೂರು ಜಾಮೀನು ಸಿಗುತ್ತೆ ಎಂಬ ವಿಶ್ವಾಸ ಇದೆ. ಈಗಾಗಲೇ ಮೂವರಿಗೆ ಜಾಮೀನು ಸಿಕ್ಕಿದೆ. ನಮಗೆ ಕೆಲವೊಂದು ಡೌಟ್ಸ್ ಇತ್ತು, ಎಲ್ಲಾ ಕ್ಲಾರಿಫಿಕೇಷನ್ ತಗೊಂಡಿದ್ದೇವೆ ಎಂದರು.

ದರ್ಶನ್ ಗೆ ಬೆನ್ನು ನೋವು ಹೆಚ್ಚಾಗಿದೆ. ಹೀಗಾಗಿ ಮೆಡಿಕಲ್ ಅವಕಾಶಗಳನ್ನು ಕನ್ಸಿಡರ್ ಮಾಡುವುದಕ್ಕೆ ಜೈಲು ಅಧಿಕಾರಿಗಳಿಗೆ ಹೇಳಿದ್ದೇವೆ. ಮೂಲಭೂತ ಸೌಲಭ್ಯ ಕೊಡಿ ಎಂದು ಹೇಳಿದ್ದೇವೆ. ಹೊಸ ಮ್ಯಾನುವಲ್ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಹೇಳಿದರು.

2021ರ ಮ್ಯಾನುವಲ್ ಪ್ರಕಾರ ಖೈದಿಗೆ ಮೂಲಭೂತ ಸೌಲಭ್ಯಗಳನ್ನು ಕೊಡಬೇಕಾಗುತ್ತದೆ. ಮೀಡಿಯಾದಲ್ಲಿ ಬರುತ್ತೆ ಎಂದು ಸೌಲಭ್ಯ ತಿರಸ್ಕಾರ ಮಾಡುವಂತಿಲ್ಲ. ಅದರ ಬಗ್ಗೆ ಜೈಲರ್ ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದ ಅವರು, ನಮ್ಮ ಬೇಡಿಕೆ ತಿರಸ್ಕಾರ ಮಾಡಿದರೆ ನ್ಯಾಯಲಯದ ಗಮನಕ್ಕೆ ತರುತ್ತೇವೆ ಎಂದರು.

ಮೇಲಾಧಿಕಾರಿಗಳ ಜೊತೆ ಚರ್ಚೆ ಮಾಡುವುದಾಗಿ ಜೈಲು ಅಧಿಕಾರಿ ಹೇಳಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next