Advertisement

ಬಳ್ಳಾರಿಯಲ್ಲಿ ಮತ್ತೆ 28 ಪ್ರಕರಣ ದೃಢ

11:49 AM Jun 25, 2020 | Naveen |

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಜಿಂದಾಲ್‌ ಕೈಗಾರಿಕೆಯ ಐವರು ನೌಕರರು, ಜಿಂದಾಲ್‌ ಓಪಿಜೆ ಫೀವರ್‌ ಕ್ಲೀನಿಕ್‌ನ ಆರೋಗ್ಯ ಸಿಬ್ಬಂದಿ ಸೇರಿ ಬುಧವಾರ ಪುನಃ 28 ಕೋವಿಡ್‌ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 537ಕ್ಕೆ ಏರಿಕೆಯಾಗಿದೆ.

Advertisement

ಜಿಲ್ಲೆಯ ಸಂಡೂರು ತಾಲೂಕಿನಲ್ಲಿ 9, ಬಳ್ಳಾರಿ 7, ಹೊಸಪೇಟೆ 3, ಸಿರುಗುಪ್ಪ 3, ಕೂಡ್ಲಿಗಿ 3, ಹಗರಿಬೊಮ್ಮನಹಳ್ಳಿ 1, ನೆರೆಯ ಆಂಧ್ರದ ರಾಯದುರ್ಗದಲ್ಲಿ ಒಬ್ಬರಿಗೆ ಸೇರಿ 28 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಐವರು ಜಿಂದಾಲ್‌ ಕೈಗಾರಿಕೆ ಉದ್ಯೋಗಿಗಳಾಗಿದ್ದಾರೆ. ನಾಲ್ವರು ಐಎಲ್‌ಐ ಸೋಂಕಿತರಾಗಿದ್ದು, ಒಬ್ಬರು ಜಿಂದಾಲ್‌ನ ಓಪಿಜೆ ಫೀವರ್‌ ಕ್ಲೀನಿಕ್‌ನ ಆರೋಗ್ಯ ಸಿಬ್ಬಂದಿಯಾಗಿದ್ದಾರೆ. ಒಬ್ಬರ ಸಂಪರ್ಕವನ್ನು ಪತ್ತೆಹಚ್ಚಲಾಗುತ್ತಿದ್ದು, ಇಬ್ಬರು ದುರ್ಬಲ ವರ್ಗದ (ಎಎನ್‌ಸಿ) ಸೋಂಕಿತರಾಗಿದ್ದಾರೆ.

ಇನ್ನುಳಿದವರು ಪಿ.7862, ಪಿ.7706, ಪಿ.6440, ಪಿ.6455, ಪಿ.9068, ಪಿ.7413, ಪಿ.7967, ಪಿ.9072 ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next