Advertisement

ಜಂತು ನಿವಾರಣೆ ಮಾತ್ರೆ ಸೇವಿಸಿ

05:49 PM Sep 27, 2019 | Naveen |

ಬಳ್ಳಾರಿ: ಸದೃಢ ಆರೋಗ್ಯಕ್ಕಾಗಿ ಜಂತು ಹುಳು ನಿವಾರಣಾ ಮಾತ್ರೆಯನ್ನು ಮಕ್ಕಳು ಸೇವಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಶಿವರಾಜ ಹೆಡೆ ಹೇಳಿದರು.

Advertisement

ನಗರದ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ ಮಕ್ಕಳಿಗೆ ಮಾತ್ರೆ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

1ರಿಂದ 19 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಅಂಗನವಾಡಿ ಹಾಗೂ ಶಾಲಾ ಕಾಲೇಜುಗಳಲ್ಲಿ ಜಂತುಹುಳು ನಿವಾರಣೆಯ ಅಲ್ಬಂಡಜೋಲ್‌ ಮಾತ್ರೆಗಳನ್ನು ಚೀಪಿಸಿ ಸೇವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಮಾತ್ರೆಯನ್ನು ಉಚಿತವಾಗಿ ನೀಡುತ್ತಿದ್ದು ತಪ್ಪದೇ ಚೀಪಿಸಬೇಕು. ಪ್ರಸ್ತುತ ಜಿಲ್ಲೆಯಲ್ಲಿ ಅಂಗನವಾಡಿ ಮತ್ತು ಶಾಲಾ-ಕಾಲೇಜುಗಳಲ್ಲಿ 1ರಿಂದ 19 ವರ್ಷದೊಳಗಿನ ಒಟ್ಟು 947790 ಮಕ್ಕಳಿಗೆ
ಮಾತ್ರೆ ಚೀಪಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಜಿಲ್ಲೆಯ 2784 ಅಂಗನವಾಡಿ ಕೇಂದ್ರಗಳು, ಸರ್ಕಾರಿ ಹಾಗೂ ಅನುದಾನಿತ 21865 ಮತ್ತು 1130 ಖಾಸಗಿ ಶಾಲೆಗಳಲ್ಲಿ ಮತ್ತು 270 ಕಾಲೇಜ್‌ ಹಾಗೂ ಐಟಿಐಗಳಲ್ಲಿ ಏಕಕಾಲಕ್ಕೆ ಮಾತ್ರೆ ಚೀಪಿಸಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀಧರನ್‌ ಮಾತನಾಡಿ, ಹೆಚ್ಚಿನ ರೋಗಗಳು ಅಶುಚಿತ್ವದ ಕಾರಣದಿಂದಾಗಿ ಹುಟ್ಟಿಕೊಳ್ಳುತ್ತವೆ. ಹಾಗಾಗಿ ಮಕ್ಕಳು ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಬೇಕು. ಆರೋಗ್ಯವೇ ಭಾಗ್ಯ ಎನ್ನುವಂತೆ ಉತ್ತಮ ಆರೋಗ್ಯ ಹೊಂದಿದಲ್ಲಿ ಮಾತ್ರ ಚಟುವಟಿಕೆಯಿಂದ ಇರಲು ಸಾಧ್ಯ. ಆರೋಗ್ಯದ ಕುರಿತು ಎಂದಿಗೂ ನಿರ್ಲಕ್ಷ್ಯ ವಹಿಸದಿರಿ ಹಾಗೂ ಶೌಚದ ನಂತರ ಕೈಗಳನ್ನು ಸಾಬೂನಿನಿಂದ
ತೊಳೆಯುವುದರಿಂದ ಪರೋಕ್ಷವಾಗಿ ಜಂತು ಹುಳು ಸೋಂಕು ತಡೆಯಬಹುದು ಎಂದರು.

Advertisement

ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮಹಾಲಿಂಗನಗೌಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿ ಕಾರಿ ಡಾ| ಇಂದ್ರಾಣಿ, ಜಿಲ್ಲಾ ಸರ್ವೆಕ್ಷಣಾ ಧಿಕಾರಿ ಡಾ| ಮರಿಯಂ ಬಿ, ತಾಲೂಕಾ ಆರೋಗ್ಯಾಧಿಕಾರಿ ಡಾ| ಕೆ.ಜಿ. ವೀರೇಂದ್ರಕುಮಾರ, ವೈದ್ಯಾಧಿಕಾರಿ ಡಾ| ಕರುಣಾ, ಶಿಕ್ಷಣ ಇಲಾಖೆಯ
ಇಸಿಓ ಮೋಹಿನುದ್ದೀನ್‌, ಗಿರಿಮಲ್ಲ, ಉಪನ್ಯಾಸಕರಾದ ಯು. ಶ್ರೀನಿವಾಸ ಮೂರ್ತಿ, ಎ. ಈರಣ್ಣ, ಶ್ಯಾಮಣ್ಣ, ಡಿಎನ್‌ಓ ಸರೋಜ, ಆರ್‌ಬಿಎಸ್‌ಕೆ ಜಿಲ್ಲಾ ಸಂಯೋಜಕ ಮನೋಹರ, ಎವಿಡೆನ್ಸ್‌ ಆಕ್ಷನ್‌ನ ಷಡಾಕ್ಷರಿ, ಟಿಡಿವೈಎಚ್‌ಇಓ ಕೃಷ್ಣಾ ನಾಯ್ಕ, ಶಾಂತವ್ವ ಉಪ್ಪಾರ, ವಿಜಯಲಕ್ಷ್ಮೀ ಕುರಡಪ್ಪನವರ, ಮೇಘರಾಜ್‌, ನೇತ್ರಾ ಸೇರಿದಂತೆ ಶಾಲಾ ವಿಧ್ಯಾರ್ಥಿನಿಯರು ಹಾಗೂ ಉಪನ್ಯಾಸಕರು, ಟ್ಯಾಂಕ್‌ಬಂಡ್‌ ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಇದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿ ಕಾರಿ ಈಶ್ವರ ಎಚ್‌.ದಾಸಪ್ಪವನರ ಸ್ವಾಗತಿಸಿದರು. ಉಪನ್ಯಾಸಕ ಚಾಂದಪಾಶಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next