ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ನಡೆಸಲಾಗಿದೆ ಎಂದು ಬಾಲಕಿಯ ತಂದೆ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಕಲ್ಮಡ್ಕದ ಚಿದಾನಂದನನ್ನು ಬಂಧಿಸಿದ್ದಾರೆ.
Advertisement
ಇದೀಗ ವಿಚಾರಣೆ ಮುಂದುವರಿಸಿದ ಪೊಲೀಸರು ಬಾಲಕಿಯಿಂದ ಹೇಳಿಕೆ ಪಡೆಯುತ್ತಿರುವ ಸಂದರ್ಭ ಆಕೆ ಬೇರೆ ಬೇರೆ ಸಮಯದಲ್ಲಿ ಇನ್ನಿಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ ಹಿನ್ನೆಲೆಯಲ್ಲಿ ಇನ್ನಿಬ್ಬರನ್ನು ಬಂಧಿಸಿದ್ದಾರೆ. ಕೊಡಿಯಾಲದ ಚೇತನ್ ಕಾಯರ್ತಡ್ಕ, ದರ್ಶನ್ ಕಾಯರ್ತಡ್ಕ ಬಂಧಿತ ಆರೋಪಿಗಳು. ಬೆಳ್ಳಾರೆ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.