Advertisement

ಬೆಳ್ಳಾರೆ ಪೊಲೀಸ್‌ ಠಾಣೆ: ಅಂತಿಮ ಹಂತದಲ್ಲಿ ಪೊಲೀಸ್‌ ಠಾಣೆ ಕಟ್ಟಡ ಕಾಮಗಾರಿ

11:27 PM Dec 19, 2022 | Team Udayavani |

ಸುಳ್ಯ: ಬೆಳ್ಳಾರೆ ಪೊಲೀಸ್‌ ಠಾಣೆಯ ಹೊಸ ಕಟ್ಟಡ ಕಾಮಗಾರಿ ಕೆಲಸ ಭರದಿಂದ ನಡೆಯುತ್ತಿದ್ದು, ಅಂತಿಮ ಹಂತಕ್ಕೆ ತಲುಪಿದೆ. 1.32 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ.

Advertisement

ಬೆಳ್ಳಾರೆ ಪೊಲೀಸ್‌ ಠಾಣೆ ಮೊದಲು ಸುಳ್ಯ ಪೊಲೀಸ್‌ ಠಾಣೆಯ ಹೊರ ಠಾಣೆಯಾಗಿ ಕಾರ್ಯನಿರ್ವಹಿಸುತ್ತಿತ್ತು. 2016ರ ಆ. 15ರಿಂದ ಪೂರ್ಣ ಪ್ರಮಾಣದ ಪೊಲೀಸ್‌ ಠಾಣೆಯಾಗಿ ಮೇಲ್ದರ್ಜೆಗೇರಿತ್ತು. ಠಾಣೆಯ ಮೊದಲ ಎಸ್‌ಐಯಾಗಿ ಎಂ.ವಿ. ಚೆಲುವಯ್ಯ ಅವರು ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಎಸ್‌ಐ ಯಾಗಿ ಸುಹಾಸ್‌ ಆರ್‌., ಕ್ರೈಂ ಎಸ್‌ಐಯಾಗಿ ಆನಂದ ಎಂ. ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಹೊಸ ಕಟ್ಟಡ
ಬೆಳ್ಳಾರೆ ಪೊಲೀಸ್‌ ಠಾಣೆಯ ನೂತನ ಠಾಣಾ ಕಟ್ಟಡದ ಕಾಮಗಾರಿ ನಡೆಯುತ್ತಿದೆ. ಈಗಿರುವ ಪೊಲೀಸ್‌ ಠಾಣೆಯಿಂದ ಅಲ್ಪ ದೂರದಲ್ಲಿ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಬಳಿಯ ಪೊಲೀಸ್‌ ಇಲಾಖೆಗೆ ಸೇರಿದ ಸ್ವಂತ ಜಾಗದ 0.70 ಎಕ್ರೆಯಲ್ಲಿ ಸ್ವಂತ ಕಟ್ಟಡ ನಿರ್ಮಾಣ ಆಗುತ್ತಿದೆ. ಕರ್ನಾಟಕ ರಾಜ್ಯ ಪೊಲೀಸ್‌ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯ 1.32 ಕೋ. ರೂ. ಅನುದಾನದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಉಡುಪಿಯ ಸನತ್‌ ಕುಮಾರ್‌ ರೈ ಸಂತೆಕಟ್ಟೆ ಕಾಮಗಾರಿ ನಿರ್ವಹಿಸುತ್ತಿ¨ªಾರೆ. 2022ರ ಫೆಬ್ರವರಿಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಮುಂದಿನ ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣ ಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.

21 ಗ್ರಾಮಗಳ ವ್ಯಾಪ್ತಿ
ಬೆಳ್ಳಾರೆ ಸುಳ್ಯ ತಾ|ನ ಪ್ರಮುಖ ವ್ಯಾವ ಹಾರಿಕ ಕೇಂದ್ರವಾಗಿದ್ದು, ಮುಂದಕ್ಕೆ ಹೋಬಳಿ ಕೇಂದ್ರವಾಗುವ ನಿರೀಕ್ಷೆಯೂ ಇದೆ. ಸುಳ್ಯ ಪೊಲೀಸ್‌ ವೃತ್ತ ವ್ಯಾಪ್ತಿಯಲ್ಲಿರುವ ಬೆಳ್ಳಾರೆ ಪೊಲೀಸ್‌ ಠಾಣೆ ಸುಳ್ಯ ಹಾಗೂ ಕಡಬ ತಾ|ನ ಸವಣೂರು, ಕುದ್ಮಾರು, ಬೆಳಂದೂರು, ಕಾಣಿಯೂರು, ಮುರುಳ್ಯ, ಎಡಮಂಗಲ, ಎಣ್ಮೂರು, ಕಲ್ಮಡ್ಕ, ಮುಪ್ಪೇರಿಯ, ಬಾಳಿಲ, ಕೊಡಿಯಾಲ, ಬೆಳ್ಳಾರೆ, ಪಾಲ್ತಾಡಿ, ಕೊಳ್ತಿಗೆ, ಐವರ್ನಾಡು, ಅಮರಪಟ್ನೂರು, ಅಮರಮುಟ್ನೂರು, ಕಳಂಜ, ಪೆರುವಾಜೆ, ಪುಣcಪ್ಪಾಡಿ, ಕಾಯಿ ಮಣ ಸೇರಿದಂತೆ ಒಟ್ಟು 21 ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿದೆ. ಇಲ್ಲಿ ಪೂರ್ಣಪ್ರಮಾಣದ ಠಾಣೆಯಾಗಬೇಕೆಂಂದು ಪತ್ರಿಕೆ ಸರಕಾರದ ಗಮನವನ್ನು ಬಹಳಷ್ಟು ಹಿಂದೆಯೇ ಸೆಳೆದಿತ್ತು.

ಕ್ವಾಟ್ರರ್ಸ್‌ಗೆ ಬೇಡಿಕೆ
ಪ್ರಸ್ತುತ ಬೆಳ್ಳಾರೆ ಪೊಲೀಸ್‌ ಠಾಣೆ ಇಲಾಖೆಗೆ ಸೇರಿದ ಸಣ್ಣ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಅಲ್ಪ ಜಾಗವನ್ನು ಹೊಂದಿರುವ ಇಲ್ಲಿ ಇಕ್ಕಟ್ಟಿನ ಸ್ಥಿತಿಯಲ್ಲಿ ಕೆಲಸ ನಿರ್ವಹಿಸುವ ಅನಿವಾರ್ಯತೆ ಪೊಲೀಸರದ್ದು. ಠಾಣೆಯಲ್ಲಿ ಎರಡು ಎಸ್‌ಐ ಹು¨ªೆ ಭರ್ತಿಯಾಗಿದ್ದು, 30 ಮಂದಿ ಸಿಬಂದಿ ಇ¨ªಾರೆ. ಪೊಲೀಸರಿಗೆ ವಸತಿ ನಿರ್ಮಾಣಕ್ಕೆ ಜಾಗ ಇದ್ದು ಕಟ್ಟಡ ನಿರ್ಮಾಣ ಆಗಬೇಕಿದೆ.

Advertisement

ನಾಮಫ‌ಲಕ ಅಳವಡಿಕೆ
ಈ ನಡುವೆ ಸುಳ್ಯ ತಾ|ನ ಹೋಬಳಿ ಕೇಂದ್ರವಾಗಿರುವ ಪಂಜ ಗ್ರಾ.ಪಂ.ವ್ಯಾಪ್ತಿಯ ಐವತ್ತೂಕ್ಲು ಗ್ರಾಮದ ಸರ್ವೇ ನಂಬರ್‌ 134-2ರಲ್ಲಿ 0.29 ಎಕ್ರೆ ಜಾಗ ಪೊಲೀಸ್‌ ಇಲಾಖೆಗೆ ಸೇರಿದೆ. ಅದು ಸುಬ್ರಹ್ಮಣ್ಯ ಪೊಲೀಸ್‌ ಠಾಣೆಗೆ ಸಂಬಂಧಿಸಿದ ಜಾಗ. ಪೊಲೀಸ್‌ ಇಲಾಖೆ ವತಿಯಿಂದ ಇದೀಗ ಇಲಾಖೆಗೆ ಸೇರಿದ ಜಾಗ ಎಂದು ನಾಮ ಫ‌‌ಲಕ ಅಳವಡಿಸಲಾಗಿದೆ.

ಹೊರ ಠಾಣೆ ಬೇಡಿಕೆ ಬೆಳೆಯುತ್ತಿರುವ ಪಂಜದಲ್ಲಿ ಪೊಲೀಸ್‌ ಹೊರ ಠಾಣೆ ಬೇಕೆಂಬುದು ಇಲ್ಲಿನ ಜನರ ಆಗ್ರಹ. ಈ ಬಗ್ಗೆ ಸರಕಾರಕ್ಕೂ ಮನವಿ ಸಲ್ಲಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಜಿನ್ನಪ್ಪ ಗೌಡ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next