Advertisement
ಯುರೋಪಿನ ಪುಟಾಣಿ ದೇಶ ಬೆಲ್ಜಿಯಂನಲ್ಲಿ ಇರೋದು ಕೇವಲ ಒಂದು ಕೋಟಿ ಜನಸಂಖ್ಯೆ. ಬಲಿಷ್ಠ ಯುರೋಪಿನ ರಾಷ್ಟ್ರಗಳ ದಾಳಿಗೆ ಆಗಾಗ ತುತ್ತಾಗುತ್ತಲೇ ಸ್ವತಂತ್ರವಾದ ಈ ದೇಶದಲ್ಲಿ ಈಗಲೂ ರಾಜನೇ ಸಾರ್ವಭೌಮ. ಕೃಷಿ ಮತ್ತು ವಾಣಿಜ್ಯೋದ್ಯಮ ಎರಡರಲ್ಲೂ ಅಪಾರ ಬೆಳವಣಿಗೆ ಸಾಧಿಸಿರುವ ದೇಶ ಬೆಲ್ಜಿಯಂ. ಬ್ರಸೆಲ್ಸ್ ಇದರ ರಾಜಧಾನಿ. ಇದು ವಜ್ರದ ಅತಿದೊಡ್ಡ ವ್ಯಾಪಾರ ಕೇಂದ್ರ ಕೂಡ. ಬೆಲ್ಜಿಯಂನಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳು ಹಾಗೂ ಪುರಾತನ ಸ್ಮಾರಕಗಳಿವೆ. ನೀವು ಬ್ರಸೆಲ್ಸ್ ನಗರವನ್ನು ಪ್ರವೇಶಿಸುತ್ತಿದ್ದಂತೆ, ನಿಮ್ಮನ್ನು ಅಟೋಮಿಯಂ ಎಂಬ ಸ್ಮಾರಕ ಸ್ವಾಗತಿಸುತ್ತದೆ. ಇಲ್ಲಿ ನಡೆದ ಜಾಗತಿಕ ವಾಣಿಜ್ಯ ಮೇಳದ ನೆನಪಿನಲ್ಲಿ ಅಣುವಿನ (ಆಟಂ) ಬೃಹತ್ ಮಾದರಿ ಈಗ ಜನಾಕರ್ಷಣೆಯ ಕೇಂದ್ರಬಿಂದುವಾಗಿದೆ.
ಈ ಗೋಳ ರಚನೆಯಾದಾಗಿನಿಂದ ಬೆಲ್ಜಿಯಂ ಬೆಳೆದ ರೀತಿ ಹಾಗೂ ಐವತ್ತು ವರ್ಷದ ಇತಿಹಾಸವನ್ನು ಮೊದಲೆರಡು ಗೋಳಗಳು ಸಾರುತ್ತವೆ. ಇಲ್ಲಿರುವ ಚಿತ್ರಗಳು, ಮಾದರಿಗಳು, ವಿಡಿಯೊ ತುಣುಕುಗಳು ಪ್ರವಾಸಿಗರನ್ನು ಐವತ್ತು ವರ್ಷದಲ್ಲಿ ಬೆಲ್ಜಿಯಂ ಬೆಳೆದ ಬಗೆಯನ್ನು ಇಂಚಿಂಚಾಗಿ ವಿವರಿಸುತ್ತವೆ. ಏಳನೇ ಗೋಳದಲ್ಲಿ 1958ರಲ್ಲಿ ಈ ಗೋಳದಿಂದ ಕಾಣುತ್ತಿದ್ದ ಬೆಲ್ಜಿಯಂ ಹಾಗೂ ಈಗಿನ ಬೆಲ್ಜಿಯಂ ಅನ್ನು ನೊಡಬಹುದು. ಇಲ್ಲಿ ಬ್ರಸೆಲ್ಸ್‌ನ ಸಂಪೂರ್ಣ ಮಾಹಿತಿ ನಿಮಗೆ ಲಭ್ಯ. ಅಣುವಿನ ರಚನೆಯನ್ನು ಅಭ್ಯಸಿಸುವ ವಿಜ್ಞಾನದ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಸ್ಥಳ.
Related Articles
ಒಂಬತ್ತು ಗೋಲಾಕಾರದ ಮೂಲಕ ನಿರ್ಮಿಸಿದ ಅಣುವಿನ ಮಾದರಿ ಇದಾಗಿದ್ದು, ನೀಲಾಕಾಶದ ಹಿನ್ನೆಲೆಯಲ್ಲಿ ಇದನ್ನು ನೋಡುವುದೇ ಒಂದು ಆನಂದ. ಒಂಬತ್ತು ಗೋಲಗಳಲ್ಲಿ ಎಂಟು ಗೋಲಗಳನ್ನು ಒಂದೊಂದು ಅಂತಸ್ತಿಗೆ ಬರುವಂತೆ ಕಟ್ಟಲಾಗಿದೆ. 1958ರಲ್ಲಿ ಈ ಗೋಲಗಳಲ್ಲಿ ಅಂತಾರಾಷ್ಟ್ರೀಯ ವಸ್ತುಪ್ರದರ್ಶನವೂ ನಡೆದಿದೆ ಎಂದರೆ, ಅದರ ಗಾತ್ರ ಎಷ್ಟಿರಬಹುದೆಂದು ನೀವೇ ಊಹಿಸಿ. ಅತ್ಯಂತ ಮೇಲಿನ ಎಂಟನೇ ಅಂತಸ್ತಿನ ಗೋಲದಿಂದ ಬ್ರಸೆಲ್ಸ್‌ನ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು. ಪ್ರತಿ ಗೋಲವೂ 92 ಮೀಟರ್ ವ್ಯಾಸವಿದೆ. ಎಂಟನೇ ಅಂತಸ್ತಿನಲ್ಲಿರುವ ಗೋಲದಲ್ಲಿ ಹೋಟೆಲ್ ಕೂಡಾ ಇದ್ದು ರಾತ್ರಿ ಹನ್ನೊಂದರವರೆಗೂ ತೆಗೆದಿರುತ್ತದೆ. ಹಗಲು ಸೂರ್ಯನ ಕಿರಣಗಳಿಂದ ಪ್ರತಿಫಲನಗೊಳ್ಳುವ ಗೋಲಗಳು, ರಾತ್ರಿಯಾಗುತ್ತಲೇ 2970 ಎಲ್‌ಇಡಿ ದೀಪಗಳಿಂದ ಬೆಳಗುವುದನ್ನು ನೋಡಲು ಎರಡು ಕಣ್ಣು ಸಾಲದು.
Advertisement
ವಾತಾವರಣ ಸ್ವತ್ಛವಾಗಿದ್ದರೆ, ಮೇಲಿನ ಗೋಲದಿಂದ ಅನ್rವಾರ್ಪ್ ಕೆತೆಡ್ರಲ್ ಹಾಗೂ ಅಲ್ಲಿರುವ ಬಂದರನ್ನು ಕೂಡ ನೋಡಬಹುದು. ಈ ರಚನೆಯ ಮುಂದಿರುವ ಹಸಿರು ಹುಲ್ಲಿನ ರಾಶಿ, ಟ್ಯೂಲಿಪ್ ಮತ್ತಿತ್ತರ ಹೂವಿನ ಗಿಡಗಳು ಹಾಗೂ ಕಾರಂಜಿ ಇದರ ಸೌಂದರ್ಯವನ್ನು ಇನ್ನಷ್ಟು ಇಮ್ಮಡಿಗೊಳಿಸಿವೆ. ಮೇಲಿನ ಗೋಲಕ್ಕೆ ಹೋಗಬೇಕಿದ್ದರೆ, ಸಂಜೆ 6:30ರೊಳಗೆ ಹೋಗಬೇಕು. ಬ್ರಸೆಲ್ಸನ ಸೆಂಟ್ರಲ್ ಬಸ್ ನಿಲ್ದಾಣದಿಂದ ಇಲ್ಲಿಗೆ ಬಸ್, ಮೆಟ್ರೋ ಹಾಗೂ ಟ್ರಾಮ್ಸ್‌ನ ಸೌಲಭ್ಯವಿದೆ. ಬ್ರಸೆಲ್ಸ್‌ನ ಯಾವುದೇ ಪ್ರದೇಶದಲ್ಲಿ ನಿಂತರೂ ಈ ಆಟೋಮಿಯಂ ನಿಮ್ಮನ್ನು ತನ್ನತ್ತ ಕೈಬೀಸಿ ಕರೆಯುತ್ತದೆ, ತನ್ನ ಅದ್ಭುತ ರಚನೆ, ವಿನ್ಯಾಸದಿಂದ ಪ್ರವಾಸಿಗರನ್ನು ಚಕಿತಗೊಳಿಸುತ್ತದೆ.
ಇಲ್ಲೇನಿದೆ ವಿಶೇಷ?– ಬೆಲ್ಜಿಯಂ ಬೆಳೆದ ರೀತಿ ಹಾಗೂ ಐವತ್ತು ವರ್ಷದ ಇತಿಹಾಸವನ್ನು ಮೊದಲೆರಡು ಗೋಳಗಳು ಸಾರುತ್ತವೆ.
– ಇಲ್ಲಿರುವ ಚಿತ್ರಗಳು, ಮಾದರಿಗಳು, ವಿಡಿಯೊ ತುಣುಕುಗಳು ಪ್ರವಾಸಿಗರನ್ನು ಐವತ್ತು ವರ್ಷದಲ್ಲಿ ಬೆಲ್ಜಿಯಂ ಬೆಳೆದ ಬಗೆಯನ್ನು ಇಂಚಿಂಚಾಗಿ ವಿವರಿಸುತ್ತವೆ.
– ಏಳನೇ ಗೋಳದಲ್ಲಿ 1958ರಲ್ಲಿ ಈ ಗೋಳದಿಂದ ಕಾಣುತ್ತಿದ್ದ ಬೆಲ್ಜಿಯಂ ಹಾಗೂ ಈಗಿನ ಬೆಲ್ಜಿಯಂ ಅನ್ನು ನೊಡಬಹುದು.
– ಅಣುವಿನ ರಚನೆಯನ್ನು ಅಭ್ಯಸಿಸುವ ವಿಜ್ಞಾನದ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಸ್ಥಳ. – ಪ್ರಕಾಶ್ ಕೆ. ನಾಡಿಗ್