Advertisement
ಕಾಡಿನಲ್ಲಿ ನಕ್ಸಲರ ಕುರುಹು, ಶಸ್ತ್ರಾಸ್ತ್ರ, ನೆಲ ಬಾಂಬ್, ಅಪಾಯಕಾರಿ ವಸ್ತುಗಳನ್ನು ಪತ್ತೆ ಮಾಡಿ ಎಎನ್‌ಎಫ್(ನಕ್ಸಲ್ ನಿಗ್ರಹದಳ) ಪಡೆಗೆ ನೆರವಾಗಲು ಸಿಆರ್‌ಪಿಎಫ್( ಕೇಂದ್ರ ಸಶಸ್ತ್ರ ಪೊಲೀಸ್ ಪಡೆ) ನಿಂದ ವಿಶೇಷ ತರಬೇತಿ ಪಡೆದು ಬರಲಿವೆ. ದಟ್ಟ ಅರಣ್ಯ, ಗುಡ್ಡಗಾಡಿನಲ್ಲಿ ಕೂಂಬಿಂಗ್ ನಡೆಸುವಾಗ, ನಕ್ಸಲ್ ವಿರುದ್ಧದ ಕಾರ್ಯಾಚರಣೆಯಲ್ಲಿ ಎಎನ್‌ಎಫ್ಗೆ ನೆರವಾಗಲು 4 ಬೆಲ್ಜಿಯಂ ಶೆಫರ್ಡ್‌ನ್ನು ಎಎನ್‌ಎಫ್ಗೆ ಸರಕಾರ ನೀಡಿದೆ.
ಒಂದು ತಿಂಗಳಿನಿಂದ 4 ಶ್ವಾನಗಳಿಗೆ ಬೆಂಗಳೂರಿನ ಸಿಆರ್‌ಪಿಎಫ್ ಘಟಕದಲ್ಲಿ ತರಬೇತಿ ನೀಡಲಾಗುತ್ತಿದೆ. 3ರಿಂದ 4 ತಿಂಗಳು ತರಬೇತಿ ನಡೆಯಲಿದೆ. ತರಬೇತಿ ಪೂರ್ಣಗೊಂಡ ಬಳಿಕ ಈ ಶ್ವಾನಗಳು ಎಎನ್‌ಎಫ್ ಪಡೆಯ ಭಾಗವಾಗಿ ಕರ್ತವ್ಯ ನಿರ್ವಹಿಸಲಿವೆ. ಅಲ್ಲದೇ ಇಲ್ಲಿನ 8 ಮಂದಿ ಸಿಬಂದಿ ಹ್ಯಾಂಡ್ಲರ್‌ಗಳಾಗಿ ನೇಮಕಗೊಂಡಿದ್ದು, ಅವರಿಗೂ ತರಬೇತಿ ನಡೆಯುತ್ತಿದೆ. ಅರಣ್ಯದಲ್ಲಿ ಕಾರ್ಯನಿರ್ವಹಿಸುವ ಬಗೆ, ಶಸ್ತ್ರಾಸ್ತ್ರ, ಶಂಕಿತರ ಕುರುಹು ಪತ್ತೆ ಹಚ್ಚುವ ಬಗೆ, ಸಾಹಸ ಪ್ರವೃತ್ತಿಗಳನ್ನು ಶ್ವಾನಗಳಿಗೆ ಕಲಿಸಿಕೊಡಲಾಗುತ್ತದೆ. ಬೆಲ್ಜಿಯಂ ಶೆಫರ್ಡ್
ಬೆಲ್ಜಿಯಂ ಶೆಫರ್ಡ್ ಮಿಲೆನಿಯೋಸ್ ತಳಿಯ ಶ್ವಾನ ಅತ್ಯಂತ ಸೂಕ್ಷ್ಮಗ್ರಾಹಿ, ವಾಸನೆಗಳನ್ನು ಗ್ರಹಿಸುವಲ್ಲಿ ಎತ್ತಿದ ಕೈ. ತಾಳ್ಮೆ, ವೇಗ, ಬುದ್ಧಿಮತ್ತೆಯಲ್ಲಿ ಸೈ ಎನಿಸಿಕೊಂಡಿವೆ. ಸೈನ್ಯ, ಅರೆಸೇನಾ ಪಡೆಗಳಲ್ಲಿ ಈ ತಳಿಯ ಶ್ವಾನವನ್ನು ಬಳಕೆ ಮಾಡಲಾಗುತ್ತಿದೆ. ಬೆಲ್ಜಿಯಂ ಶೆಫರ್ಡ್ ಶ್ವಾನಗಳನ್ನು ಹೊಂದಿದ್ದ ಅಮೆರಿಕದ ವಿಶೇಷ ಕಮಾಂಡೊ ಪಡೆ ಉಗ್ರ ಲಾಡೆನ್ ಕಾರ್ಯಚರಣ್ತೆ. ಭಾರತೀಯ ಸೈನ್ಯ, ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್, ಸಿಆರ್‌ಪಿಎಫ್ಗಳಲ್ಲಿ ಶ್ವಾನಗಳು ಈಗಾಗಲೆ ಕರ್ತವ್ಯ ನಿರ್ವಹಿಸುತ್ತಿವೆ. ಯಶಸ್ವಿಯಾಗಿ ಗುರಿ ಮುಟ್ಟುವ ಸಾಮರ್ಥ್ಯ ಹೊಂದಿರುವ ಈ ಶ್ವಾನಗಳು ಎಂತಹ ಪರಿಸ್ಥಿತಿ, ಪ್ರತಿಕೂಲ ಹವಾಮಾನದಲ್ಲಿಯೂ ಅತ್ಯಂತ ಚುರುಕುತನದಿಂದ ಕಾರ್ಯನಿಭಾಯಿಸುತ್ತವೆ.
Related Articles
ಕಾರ್ಕಳ ರಾಮಸಮುದ್ರದಲ್ಲಿ ಎಎನ್‌ಎಫ್ ಕೇಂದ್ರ ಘಟಕವಿದ್ದು, ಇಲ್ಲಿಯೇ ಶ್ವಾನಗಳನ್ನು ಇರಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. 22 ಲಕ್ಷ ರೂ.ವೆಚ್ಚದಲ್ಲಿ ಶ್ವಾನಗೃಹ ನಿರ್ಮಾಣವಾಗುತ್ತಿದೆ. 1,200 ಚದರ ಅಡಿ ವಿಸೀರ್ಣದಲ್ಲಿ ಈ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, 2-3 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಅಷ್ಟರಲ್ಲಿ ಶ್ವಾನಗಳಿಗೂ ತರಬೇತಿ ಮುಗಿದಿರುತ್ತದೆ ಎಂದು ಎಎನ್‌ಎಫ್ ಅಧಿಕಾರಿಗಳು ಹೇಳಿದ್ದಾರೆ.
Advertisement
ಎಎನ್‌ಎಫ್ ಸುರಕ್ಷೆಗೆ ಅಗತ್ಯಬೆಲ್ಜಿಯಂ ಶೆಫರ್ಡ್ ಮಿಲೆನಿಯೋಸ್ ತಳಿಯ 4 ಶ್ವಾನಗಳಿಗೆ ಬೆಂಗಳೂರಿನ ಸಿಆರ್‌ಪಿಎಫ್ ಘಟಕದಲ್ಲಿ ತರಬೇತಿ ನಡೆಯುತ್ತಿದ್ದು, ಶೀಘ್ರದಲ್ಲೇ ಎಎನ್‌ಎಫ್ಗೆ ಸೇರಲಿದೆ. ಸ್ಫೋಟಕ ಮತ್ತು ಕುರುಹುಗಳನ್ನು ಪತ್ತೆ ಮಾಡಲು, ಎಎನ್‌ಎಫ್ ಪಡೆಯ ಸುರಕ್ಷತೆಗಾಗಿ ಶ್ವಾನದಳ ಸಹಕಾರಿಯಾಗಲಿದೆ.
– ಬೆಳ್ಳಿಯಪ್ಪ
ಡಿವೈಎಸ್‌ಪಿ, ನಕ್ಸಲ್ ನಿಗ್ರಹ ದಳ ಕಾರ್ಕಳ