Advertisement

ಬೆಳಗಾವಿ: ಸುಳೇಭಾವಿ ಗ್ರಾಮದಲ್ಲಿ ಇಬ್ಬರು ಯುವಕರ ಬರ್ಬರ ಹತ್ಯೆ

09:55 PM Oct 06, 2022 | Team Udayavani |

ಬೆಳಗಾವಿ: ತಾಲೂಕಿನ ಸುಳೇಭಾವಿ ಗ್ರಾಮದ ಛತ್ರಪತಿ ಶಿವಾಜಿ ಮಹಾರಾಜ ಪ್ರತಿಮೆ‌ ಎದುರು ಗುರುವಾರ ರಾತ್ರಿ ಹಳೆಯ ದ್ವೇಷ ಹಿನ್ನೆಲೆಯಲ್ಲಿ ಇಬ್ಬರು ಯುವಕರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

Advertisement

ಸುಳೇಭಾವಿ ಗ್ರಾಮದ ರಣಧೀರ ಮಹೇಶ ಅಲಿಯಾಸ್ ರಾಮಚಂದ್ರ ಮುರಾರಿ(26) ಹಾಗೂ ಪ್ರಕಾಶ ನಿಂಗಪ್ಪ ಹುಂಕರಿ ಪಾಟೀಲ(24) ಎಂಬ ಯುವಕರನ್ನು ಹತ್ಯೆ ಮಾಡಲಾಗಿದೆ.

ಹಳೆ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರು ಯುವಕರನ್ನು ಕೊಲೆ ಮಾಡಲಾಗಿದೆ. ಶಿವಾಜಿ‌ಮಹಾರಾಜರ ಪ್ರತಿಮೆ ಎದುರು ಕೊಲೆ ಮಾಡಲಾಗಿದೆ. ಕೊಲೆ ಯಾರು ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲ. ಮಾತೀಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ, ಮಾರಿಹಾಳ ಇನ್ಸ್ಪೆಕ್ಟರ್ ಬಸ್ಸಾಪೂರೆ  ಸೇರಿ  ಪೊಲೀಸರು  ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next