ಬೆಳಗಾವಿ: ರಾಜ್ಯದಲ್ಲಿ ನಿತ್ಯ ಸುಮಾರು 200 ಕೋಟಿ ರೂ. ವಹಿವಾಟು ನಡೆಸುತ್ತಿರುವ ಹೋಟೆಲ್ ಉದ್ಯಮ ದೇಶದ ಆರ್ಥಿಕತೆಗೂ ಗಮನಾರ್ಹವಾದ ಕೊಡುಗೆ ನೀಡುತ್ತಿದೆ. ಲಕ್ಷಾಂತರ ಜನರಿಗೆ ಹೋಟೆಲ್ ಉದ್ಯಮ ಬದುಕನ್ನು ನೀಡುತ್ತಿದೆ ಎಂದು ಉತ್ತರ ಕ್ಷೇತ್ರದ ಮಾಜಿ ಶಾಸಕ ಫಿರೋಜ ಸೇಠ ಹೇಳಿದರು.
ಇಲ್ಲಿಯ ಆಟೋ ನಗರದಲ್ಲಿ ನವೀಕರಣಗೊಂಡಿರುವ ಶುದ್ಧ ಶಾಕಾಹಾರಿ ಹರ್ಷಾ ರೆಸ್ಟೊರೆಂಟ್ ನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿ, ಬೆಳಗಾವಿ ಪ್ರಮುಖ ವಾಣಿಜ್ಯ ಮತ್ತು ಔದ್ಯಮಿಕ ಕ್ಷೇತ್ರವಾಗಿದೆ. ಇಲ್ಲಿ ಬರುವವರಿಗೆ ಒಳ್ಳೆಯ ಆತಿಥ್ಯ ಹೊಟೇಲ್ ಉದ್ಯಮ ನೀಡುವುದರಿಂದ ಬೆಳಗಾವಿ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತದೆ ಎಂದರು.
ಹರ್ಷಾ ಹೋಟೆಲ್ ನವೀಕರಣ ಅತ್ಯಂತ ಸೌಂದರ್ಯಭರಿತವಾ ದೆ. ಆಕರ್ಷಕವಾದ ಈ ಹೊಟೇಲ್ ಗ್ರಾಹಕರ ಅಚ್ಚುಮೆಚ್ಚಿನ ಉಪಹಾರಗೃಹವಾಗಲಿದೆ ಎಂದರು. ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,
ಬಹುತೇಕ ಉದ್ಯಮಗಳು ಸ್ವಾರ್ಥದಿಂದ ಕೂಡಿವೆ. ಹೊಟೇಲ್ ಉದ್ಯಮ ಸ್ವಾರ್ಥ ಮತ್ತು ನಿಸ್ವಾರ್ಥದ ಸಮ್ಮಿಶ್ರಣವಾಗಿವೆ. ಇಲ್ಲಿ ಗಳಿಕೆಯ ಜೊತೆಗೆ ಸೇವೆಯೂ ಅಡಗಿದೆ. ಶುದ್ಧ ಆಹಾರ ಸೇವನೆಯಿಂದ ದೇಹ ಮತ್ತು ಮನಸ್ಸು ಕೂಡ ಶುದ್ಧವಾಗಿರುತ್ತದೆ ಎಂದರು.
- ಕಾರಂಜಿ ಮಠದ ಶ್ರೀ ಗುರುಸಿದ್ದ ಸ್ವಾಮೀಜಿ
ಮಾತನಾಡಿ, ಉದ್ಯಮಿ ಸುರೇಶ ನಾಯಿರಿ ಅವರದು ಸಾತ್ವಿಕ ವ್ಯಕ್ತಿತ್ವ. ಹಣ ಗಳಿಕೆಯ ಜೊತೆಗೆ ಗ್ರಾಹಕರ ಆರೋಗ್ಯ ಅವರಿಗೆ ಮುಖ್ಯ ಎಂದು ಭಾವಿಸಿದವರು. ನೈರ್ಮಲ್ಯಕ್ಕೆ ಹೆಚ್ಚು ಒತ್ತು ಕೊಡುತ್ತಾರೆ ಎಂದರು.
ಹೋಟೆಲ್ ಉದ್ಯಮಿ ವಿಠuಲ ಹೆಗಡೆ ಮಾತನಾಡಿ, ಹೋಟೆಲ್ ಉದ್ಯಮ ತುಂಬಾ ಸವಾಲಿನದು. ಅಲ್ಲಿ ಸ್ಥಿರವಾಗಿ ನೆಲೆ ನಿಂತವರು ಮಾತ್ರ ಸಾಧಕರಾಗುತ್ತಾರೆ.
Related Articles
ನಗರದ ಸರ್ವಾಂಗೀ ಣ ಅಭಿವೃದ್ಧಿಯಲ್ಲಿ ಹೋಟೆಲ್ ಉದ್ಯಮ ಪ್ರಮುಖ ಪಾತ್ರವಹಿಸುತ್ತದೆ. ಸರ್ಕಾರ ಹೋಟೆಲ್ ಉದ್ಯಮದ ಉನ್ನತೀಕರಣಕ್ಕೆ ಹೆಚ್ಚು ಗಮನ ಕೊಡಬೇಕು ಎಂದರು.
ಕಟ್ಟಡದ ಮಾಲೀಕ ಎನ್.ಎಸ್. ಚೌಗುಲೆ, ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ, ಬೆಳಗಾವಿ ಹೊಟೇಲ್ ಸಂಘದ ಅಧ್ಯಕ್ಷ ಅಜಯ ಪೈ, ಹರ್ಷಾ ಹೊಟೇಲ್ ವಿನ್ಯಾಸಕ ಆನಂದ ರಾಯಕರ್, ಕೆಐಎಡಿಬಿ ಅಧ್ಯಕ್ಷ ಸುರೇಶ ಯಾದವ, ನಿವೃತ್ತ ಅರಣ್ಯಾಧಿ ಕಾರಿ ಕೆ. ಸಂಜೀವ ನಾಯಿರಿ, ಮಾಜಿ ಮೇಯರ್ ಎನ್.ಬಿ. ನಿರ್ವಾಣಿ ಇತರರು ಇದ್ದರು. ಹರ್ಷಾ ರೆಸ್ಟೊರೆಂಟ್ ಮಾಲೀಕ ಸುರೇಶ ನಾಯಿರಿ ಸ್ವಾಗತಿಸಿದರು. ಡಾ. ನಾರಾಯಣ ನಾಯ್ಕ ನಿರೂಪಿಸಿದರು.