ಬೆಳಗಾವಿ: ಗುಣಮಟ್ಟದ ಮತ್ತು ಕೌಶಲ್ಯರಹಿತ ಶಿಕ್ಷಣದ ಫಲವಾಗಿ ಜಾಗತಿಕ ಮಟ್ಟದಲ್ಲಿ ಮೊದಲ 100 ಸ್ಥಾನಗಳಲ್ಲಿ ಭಾರತದ ಒಂದು ವಿಶ್ವ ವಿದ್ಯಾಲಯ ಸ್ಥಾನ ಪಡೆಯಲು ಸಾಧ್ಯವಾಗುತ್ತಿಲ್ಲ. ಗುಣಮಟ್ಟದ ಉನ್ನತ ಶಿಕ್ಷಣ, ಪ್ರಚಲಿತ ಪಠ್ಯಕ್ರಮ ಮತ್ತು
ಮೌಲ್ಯಾಧಾರಿತ ಸಂಶೋಧನೆಗೆ ಆದತ್ಯೆ ನೀಡುವ ಅವಶ್ಯಕತೆಯಿದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ಹೇಳಿದರು.
Advertisement
ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ನಗರದ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಶೋಧನೆ ಮತ್ತು ಪ್ರಕಟಣೆಯಲ್ಲಿನ ಪ್ರಚಲಿತ ಪ್ರವೃತ್ತಿಗಳು ವಿಷಯ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿ ವರ್ಷ 18 ಲಕ್ಷ ಪ್ರತಿಭಾನ್ವಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುತ್ತಿದ್ದಾರೆ. ಅತ್ಯುನ್ನತ ಮತ್ತು ಗುಣಮಟ್ಟದ ಸಂಶೋಧನೆ ನಮ್ಮ ದೇಶದಲ್ಲೇ ನೀಡಿದಾಗ ಮಾತ್ರ ಪ್ರತಿಭಾ ಪಲಾಯನ ತಡೆಯಲು ಸಾಧ್ಯವಿದೆ ಎಂದರು.
ಪಡೆಯಲು ಮುಂದಾಗಬೇಕು. ವೈದ್ಯ, ವಕೀಲ, ಶಿಕ್ಷಕ, ಪೌರಕಾರ್ಮಿಕ, ರೈತ ಮತ್ತು ವ್ಯಾಪಾರಿ ಹೀಗೆ ಎಲ್ಲ ವೃತ್ತಿಗಳು ಸಮಾಜದಲ್ಲಿ ಸಮಾನ ಮಹತ್ವ ಪಡೆದಿವೆ ಎಂದು ಹೇಳಿದರು.
Related Articles
Advertisement
ಅಧ್ಯಕ್ಷತೆ ವಹಿಸಿದ್ದ ರಾಣಿ ಚನ್ನಮ್ಮ, ವಿಶ್ವವಿದ್ಯಾಲಯ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಮಾತನಾಡಿ, ಅವಿರತವಾದ ಪರಿಶ್ರಮದಿಂದ ಯಶಸ್ಸು ಸಾಧ್ಯ. ಆದ್ದರಿಂದ ಸಂಶೋಧನಾರ್ಥಿಗಳು ಮೂರು ವರ್ಷ ಶ್ರದ್ಧೆ ಮತ್ತು ಆಸಕ್ತಿವಹಿಸಿ ಉತ್ತಮ ಮೌಲ್ಯಯುತ ಸಂಶೋಧನೆಗೆ ಮುಂದಾಗಬೇಕು. ಹುದ್ದೆ ಬಡ್ತಿ ಮತ್ತು ಪಿಎಚ್‌ಡಿ ಪದವಿಗಾಗಿ ಸಂಶೋಧನೆ ಮಾಡುವ ಬದಲಾಗಿ, ಮನುಕುಲ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಸಂಶೋಧನೆಗಳ ಪರಿಹಾರ ನೀಡವಂತಾಗಬೇಕು ಎಂದರು.
ಪಠ್ಯಕ್ರಮ ಪರಿಷ್ಕರಣೆ ಸಮಿತಿಯ ಮುಖ್ಯಸ್ಥ ಪ್ರೊ| ಎಂ.ಜಿ.ಹೆಗಡೆ ಮತ್ತು ಅಜೀಂ ಪ್ರೇಮಜಿ ವಿವಿಸಲಹೆಗಾರರಾದ ಪ್ರೊ. ದೇವಕಿ ಲಕ್ಷ್ಮಿನಾರಾಯಣ ಅವರು ಸಂಶೋಧನೆ ಮತ್ತು ಪ್ರಕಟಣೆ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ಸಂಶೋಧನೆ ಮತ್ತು ಸಂಶೋಧನಾ ಲೇಖನ ಮಂಡಿಸಲು ವಿದೇಶಕ್ಕೆ ತೆರಳುತ್ತಿರುವ ಇಂಗ್ಲಿಷ್ ವಿಭಾಗದ ಪ್ರೊ| ನಾಗರತ್ನಾ ಪರಾಂಡೆ ಮತ್ತು ಡಾ| ಪೂಜಾ ಹಲ್ಯಾಳ್ ಅವರನ್ನು ಗೌರವಿಸಲಾಯಿತು.
ಮೌಲ್ಯಮಾಪನ ಕುಲಸಚಿವ ಪ್ರೊ.ರವೀಂದ್ರನಾಥ ಕದಂ, ಹಣಕಾಸು ಅಧಿಕಾರಿ ಪ್ರೊ. ಎಸ್.ಬಿ. ಆಕಾಶ, ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಪ್ರೊ. ಬಸವರಾಜ ಪದ್ಮಶಾಲಿ, ವಿಶೇಷಾಧಿಕಾರಿ ಪ್ರೊ. ವಿಶ್ವನಾಥ ಆವಟಿ, ಪ್ರೊ. ಜೆ. ಮಂಜಣ್ಣ, ಪ್ರೊ.ಬಾಲಚಂದ್ರ ಹೆಗಡೆ, ಪ್ರೊ.ಎಂ. ಸಿ. ಯರಿಸ್ವಾಮಿ ಉಪಸ್ಥಿತರಿದ್ದರು. ಕುಲಸಚಿವೆ ರಾಜಶ್ರೀ ಜೈನಾಪೂರ ಪರಿಚಯಿಸಿದರು. ರಾಘವೇಂದ್ರ ಶೇಟ್ ಸ್ವಾಗತಿಸಿದರು. ಅರ್ಚನಾ ಪೂಜಾರ ವಂದಿಸಿದರು ಮತ್ತು ಪ್ರಿಯಾ ಬೀಳಗಿ ನಿರೂಪಿಸಿದರು.