Advertisement

ಬೆಳಗಾವಿ: ನಾವೀನ್ಯತೆ-ಕ್ರಿಯಾಶೀಲತೆ ಮುಖ್ಯ: ಪ್ರೊ. ರುಸಾಕ್‌

04:41 PM Jun 10, 2023 | Team Udayavani |

ಬೆಳಗಾವಿ: ಜಾಗತಿಕ ಬೇಡಿಕೆಗೆ ತಕ್ಕಂತೆ, ಪ್ರತಿ ಕ್ಷಣಕ್ಕೆ ಬದಲಾಗುತ್ತಿರುವ ಅವಶ್ಯಕತೆಗಳಿಗೆ ಹೊಂದಿಕೊಳ್ಳುವ ಬದಲಾವಣೆ ನಿರ್ವಹಣೆ ಇಂದಿನ ಅವಶ್ಯ ಎಂದು ಜರ್ಮನಿಯ ಇನ್ಸ್‌ಟಿಟ್ಯೂಟ್‌ ಆಫ್‌ ಅಟೊಮೇಷನ್‌ ಆ್ಯಂಡ್‌ ಇಂಡಸ್ಟ್ರಿಯಲ್‌ ಮ್ಯಾನೇಜಮೆಂಟ್‌ ನಿರ್ದೇಶಕ ಪ್ರೊ. ಥಾಮಸ್‌ ರುಸಾಕ್‌ ಹೇಳಿದರು.

Advertisement

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಜತ ಮಹೋತ್ಸವ ವರ್ಷಾಚರಣೆಯ ಅಂಗವಾಗಿ ವಿ ಟಿ ಯುನ ಎಂ ಬಿ ಎ ವಿಭಾಗವು ಹಮ್ಮಿಕೊಂಡಿದ್ದ ಜಾಗತಿಕ ವ್ಯಾಪಾರ ಮತ್ತು ತಂತ್ರಜ್ಞಾನದಲ್ಲಿ ಉದಯೋನ್ಮುಖ ಪ್ರವೃತ್ತಿಗಳ ಸವಾಲುಗಳು ಮತ್ತು ಅವಕಾಶಗಳು ಕುರಿತ ಎರಡು ದಿನಗಳ ಅಂತರರಾಷ್ಟ್ರೀ ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಡಿಜಿಟಲ್‌ ತಂತ್ರಜ್ಞಾನಗಳಿಗೆ ತ್ವರಿತವಾಗಿ ಹೊಂದಿಕೊಳ್ಳಲು ನಾವಿನ್ಯತೆ ಹಾಗೂ ಕ್ರಿಯಾಶೀಲತೆ ತುಂಬಾ ಮುಖ್ಯ. ಗ್ರಾಹಕರಿಗೆ ಅವಶ್ಯಕತೆಗಳನ್ನು ಪೂರೈಸುವುದಷ್ಟೇ ಅಲ್ಲದೆ ಅದರ ಮೌಲ್ಯವನ್ನು ತಲುಪಿಸುವುದು ಸಹ ಮುಖ್ಯ ಎಂದು ಹೇಳಿದರು.

ಕೇರಳದ ಕೇಂದ್ರಿಯ ವಿಶ್ವವಿದ್ಯಾಯದ ಪ್ರೊ. ಬಿ. ರಮೇಶ ಮಾತನಾಡಿ, ಮ್ಯಾನೇಜಮೆಂಟ್‌ ಶಿಕ್ಷಣದ ಪರಸ್ಪರ ಬೆಳವಣಿಗೆಗೆ, ವಿಚಾರಗಳು ಮತ್ತು ಆಲೋಚನೆಗಳ ಕುರಿತಂತೆ ಸಂಪರ್ಕ ಮತ್ತು ವಿನಿಮಯಕ್ಕೆ ಈ ರೀತಿಯ ಸಮ್ಮೇಳನಗಳು ನಡೆಯಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಪ್ರೊ. ಬಿ. ಈ. ರಂಗಸ್ವಾಮಿ ಮಾತನಾಡಿ, ಭಾರತವು ಸ್ವಾವಲಂಬಿ ಹಾಗೂ 5 ಟ್ರಿಲಿಯನ್‌ ಆರ್ಥಿಕತೆಯ ರಾಷ್ಟ್ರವಾಗುವ ಗುರಿ ಹೊಂದಿದೆ. ಇದನ್ನು ಸಾಧಿಸಲು ತಂತ್ರಜ್ಞಾನದ ಬೆಳವಣಿಗೆಗಳು ಮತ್ತು ವ್ಯಾಪಾರ ವ್ಯವಸ್ಥೆಗಳು, ಮಾದರಿಗಳು ಸಮಾಜದ ಅವಶ್ಯಕತೆಗಳನ್ನು ಪರಿಣಾಮಕಾರಿಯಾಗಿ ಪೂರೈಸಲು ಕೈಜೋಡಿಸಬೇಕು ಮತ್ತು ಪೂರಕವಾಗಿ ಕೆಲಸ ಮಾಡಬೇಕು ಎಂದರು.

Advertisement

ಕುಲಸಚಿವ (ಮೌಲ್ಯಮಾಪನ) ಪ್ರೊ.ಟಿ.ಎನ್‌. ಶ್ರೀನಿವಾಸ್‌ ಸ್ವಾಗತಿಸಿ ವಿಟಿಯು ವಿದ್ಯಾರ್ಥಿಗಳ ಹಾಗೂ ಮೌಲ್ಯಯುತ ಶಿಕ್ಷಣಕ್ಕೆ ಅನೂಕೂಲವಾಗಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿದರು. ಎಂಬಿಎ ವಿಭಾಗದ ಅಧ್ಯಕ್ಷ ಡಾ| ಎಂ.ಎಂ. ಮುನ್ಷಿ ಅವರು ಸಮ್ಮೇಳನದಲ್ಲಿ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು.

ವಿಟಿಯು ಎಂ ಬಿ ಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಲಕ್ಷ್ಮೀನಾರಾಯಣ ವಂದಿಸಿದರು. ರಕ್ಷಾ ಹಾಗೂ ಪ್ರಗತಿ
ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next