Advertisement

ಬೆಳಗಾವಿ ಚಲೋ: ವೈದ್ಯರ ನಿರ್ಧಾರ

06:00 AM Nov 06, 2017 | Team Udayavani |

ಬೆಂಗಳೂರು: ಖಾಸಗಿ ಆಸ್ಪತ್ರೆಗಳಿಗೆ ನಿಯಂತ್ರಣ ಹೇರಲು ಸರಕಾರ ಜಾರಿಗೊಳಿಸಲು ಹೊರಟಿರುವ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ (ಕೆಪಿಎಂಇ) ಮಸೂದೆ-2017ಕ್ಕೆ  ಸಂಬಂಧಿಸಿದಂತೆ ರಾಜ್ಯ ಸರಕಾರ ಮತ್ತು ಖಾಸಗಿ ವೈದ್ಯರ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದೆ.

Advertisement

ಕೆಪಿಎಂಇ ಮಸೂದೆ ಜಾರಿ ಮಾಡಬಾರದು. ಸರಕಾರವೇ ನೇಮಿಸಿದ್ದ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಮ್‌ಜಿತ್‌ ಸೇನ್‌ ಸಮಿತಿ ಸಲ್ಲಿಸಿದ ವರದಿ ಅನುಷ್ಠಾನ ಗೊಳಿಸಬೇಕು ಎಂದು ಆಗ್ರಹಿಸಿ ನ.13ರಂದು ಬೆಳಗಾವಿ ಚಲೋ ನಡೆಸಲು ಖಾಸಗಿ ವೈದ್ಯರ ಸಂಘ ತೀರ್ಮಾನಿಸಿದೆ.

ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರಕಾರ ಕೆಪಿಎಂಇ ತಿದ್ದುಪಡಿ ಮಸೂದೆ ಮಂಡಿಸುವ ಸಾಧ್ಯತೆ ಇದೆ. ಹೀಗಾಗಿ ಬೆಳಗಾವಿ ಚಲೋಗೆ ನಿರ್ಧರಿಸಲಾಗಿದೆ. ಅಂದು ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆಗಳ 25 ಸಾವಿರಕ್ಕೂ ಅಧಿಕ ವೈದ್ಯರು ಹಾಗೂ ಅರೆವೈದ್ಯಕೀಯ ಸಿಬಂದಿ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಗೌರವ ರಾಜ್ಯ ಕಾರ್ಯದರ್ಶಿ ಡಾ| ಬಿ. ವೀರಣ್ಣ ಹೇಳಿದ್ದಾರೆ.

ಪ್ರತಿಭಟನೆ ವೇಳೆ ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆ, ಕ್ಲಿನಿಕ್‌, ನರ್ಸಿಂಗ್‌ ಹೋಂಗಳಲ್ಲಿ  ಹೊರ ರೋಗಿ ವಿಭಾಗದ ಸೇವೆ ಸ್ಥಗಿತಗೊಳ್ಳಲಿದೆ. ತುರ್ತು ಸೇವೆ ಹಾಗೂ ಒಳರೋಗಿಗಳ ಸೇವೆಯಲ್ಲಿ ವ್ಯತ್ಯಯ ಇರುವುದಿಲ್ಲ. ಆ ಮೂಲಕ ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆಗಳ ವೈದ್ಯರು ಒಂದಾಗಿ ಸರಕಾರದ ಮೇಲೆ ಒತ್ತಡ ಹೇರ ಲಿದ್ದೇವೆ ಎಂದು ತಿಳಿಸಿದರು.

ರವಿವಾರ ನಗರದ ಚಾಮರಾಜಪೇಟೆಯ ಭಾರತೀಯ ವೈದ್ಯಕೀಯ ಸಂಘದ ಕಚೇರಿ ಯಲ್ಲಿ ಸಂಘದ ಪದಾಧಿಕಾರಿಗಳ, ವೈದ್ಯಕೀಯ ಸಂಸ್ಥೆ ಮುಖ್ಯಸ್ಥರ ಹಾಗೂ ಆರೋಗ್ಯ ಕ್ಷೇತ್ರದ ಸಂಘಟನೆಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಉಪವಾಸ ಸತ್ಯಾಗ್ರಹ: ಸರಕಾರ ಈ ಹೋರಾಟಕ್ಕೂ ಮಣಿಯದಿದ್ದರೆ ನ. 14ರಿಂದ ಬೆಳಗಾವಿಯಲ್ಲೇ ವೈದ್ಯರ ತಂಡಗಳಿಂದ ಸರಣಿ ಉಪವಾಸ ಸತ್ಯಾಗ್ರಹ ನಡೆಸಲಾಗು ತ್ತದೆ. ಆಸಕ್ತಿ ಇರುವ ವೈದ್ಯರು ತಂಡದ ಮೂಲಕ ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಸ್ಪಂದಿ ಸದೆ ಕೆಪಿಎಂಇ ಮಸೂದೆಯನ್ನು ಸದನದಲ್ಲಿ ಮಂಡಿಸಿದರೆ ಹೋರಾಟ ಇನ್ನಷ್ಟು ತೀವ್ರ ಗೊಳಿಸಲು ನಿರ್ಧರಿಸಲಾಗಿದೆ. ಖಾಸಗಿ ವೈದ್ಯರು ವೈದ್ಯ ವೃತ್ತಿಯನ್ನೇ ತ್ಯಜಿಸಿ ಹೋರಾಟಕ್ಕಿಳಿಯ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

ಮುಖ್ಯಮಂತ್ರಿ ಭೇಟಿ: ಭಾರತೀಯ ವೈದ್ಯಕೀಯ ಸಂಘದ ನೇತೃತ್ವದ ನಿಯೋಗ ಮುಂದಿನ ಮಂಗಳವಾರ ಅಥವಾ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಅವರನ್ನು ಭೇಟಿ ಮಾಡಿ ಕೆಪಿಎಂಇ ಮಸೂದೆಯನ್ನು ತಡೆಹಿಡಿಯಬೇಕೆಂದು ಮನವಿ ಮಾಡಲು ಸಭೆ ನಿರ್ಧರಿಸಿತು.

ಪ್ರಮುಖ ಐದು ನಿರ್ಧಾರ
ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರಿಗೆ ನಿಯಂತ್ರಣ ಹೇರುವ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ (ಕೆಪಿಎಂಇ)-2017 ವಿಚಾರದಲ್ಲಿ ಸಂಘದ ಸಭೆಯಲ್ಲಿ  ಐದು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

1. ಮುಖ್ಯಮಂತ್ರಿ, ಆರೋಗ್ಯ ಸಚಿವರನ್ನು ಭೇಟಿ ಮಾಡಿ ಸದನದಲ್ಲಿ ಮಸೂದೆ ಮಂಡಿಸದಂತೆ ಮನವಿ.
2. ಇದಕ್ಕೆ ಒಪ್ಪದಿದ್ದಲ್ಲಿ  ನ. 13ರಂದು ಹೊರರೋಗಿಗಳ ಸೇವೆ ಸ್ಥಗಿತಗೊಳಿಸಿ ಬೆಳಗಾವಿ ಚಲೋ.
3. ಅದಕ್ಕೂ ಸರಕಾರ ಮಣಿಯದಿದ್ದರೆ  ನ. 14ರಿಂದ ವೈದ್ಯರ ತಂಡದಿಂದ ಉಪವಾಸ ಸತ್ಯಾಗ್ರಹ.
4. ಎಲ್ಲವನ್ನೂ ಮೀರಿ ಸರಕಾರ ಮಸೂದೆಗೆ ಕಾಯ್ದೆ ರೂಪ ನೀಡಿದರೆ ವೈದ್ಯ ವೃತ್ತಿ ತ್ಯಜಿಸುವುದು.
5. ಕಾಯ್ದೆ ಜಾರಿಯಾಗದಂತೆ ನೋಡಿಕೊಳ್ಳಲು ಬೇರೆ ಮಾರ್ಗೋ ಪಾಯ ಹುಡುಕುವುದು.

Advertisement

Udayavani is now on Telegram. Click here to join our channel and stay updated with the latest news.

Next