Advertisement

ಬೆಳಗಾವಿ: ಬಸವಾದಿ ಶರಣರ ತತ್ವಾದರ್ಶ ಇಂದಿಗೂ ಪ್ರಸ್ತುತ- ಚೇತನ

06:43 PM Jul 20, 2023 | Team Udayavani |

ಬೆಳಗಾವಿ: 12ನೇ ಶತಮಾನದಲ್ಲಿ ಇಡೀ ಭಾರತ ಖಂಡದಲ್ಲಿಯೇ ಅಪ್ರತಿಮ ಕ್ರಾಂತಿ ಮಾಡಿದ ಬಸವಾದಿ ಶಿವಶರಣರ ತತ್ವಾದರ್ಶಗಳು ಈ 21ನೇ ಶತಮಾನದಲ್ಲಿಯೂ ಪ್ರಸ್ತುತವಾಗಿವೆ. ಅವರ ತತ್ವಗಳನ್ನು ಇಂದಿನ ಸಮಾಜಕ್ಕೆ
ಮುಟ್ಟಿಸುವಲ್ಲಿ ಅನೇಕ ಶರಣರ ತ್ಯಾಗ, ಪರಿಶ್ರಮವಿದೆ ಎಂದು ಕಣಕುಂಬಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ| ಬಿ.ಟಿ.ಚೇತನ ಹೇಳಿದರು.

Advertisement

ಅಖಿಲ ಭಾರತ ವೀರಶೆ„ವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕವು ನಗರದ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಅಮಾವಾಸ್ಯೆಅನುಭಾವ ಗೋಷ್ಠಿಯಲ್ಲಿ ಬಸವೋತ್ತರ ಕಾಲದ ಶರಣರ ಕ್ರಾಂತಿ ವಿಷಯ ಕುರಿತು ಮಾತನಾಡಿದ ಅವರು, 12 ರಿಂದ 15ನೇ ಶತಮಾನದಲ್ಲಿ ಹರಿಹರ, ಪಾಲ್ಕುರಿಕೆ ಸೋಮನಾಥ, ಭೀಮಕವಿ, ವಿಜಯನಗರದ ಅರಸ ಪ್ರೌಢದೇವರಾಯ ಬಸವ ತತ್ವ ಪ್ರಸಾರದಲ್ಲಿ ಮಹತ್ತರ ಕಾರ್ಯ ಮಾಡಿದ್ದಾರೆ.

15ನೇ ಶತಮಾನದಲ್ಲಿ ಎಡೆಯೂರು ತೋಂಟದ ಸಿದ್ಧಲಿಂಗ ಶಿವಯೋಗಿಗಳು ಅಳಿವಿನಂಚಿನಲ್ಲಿದ್ದ ಶರಣ ಪರಂಪರೆ ಮತ್ತು ಸಂಸ್ಕೃತಿಯನ್ನು ಪುನರುತ್ಥಾನ ಮಾಡಿದ್ದಾರೆ ಎಂದರು. ಹಲವಾರು ಶರಣರ ಅನನ್ಯ ಕೊಡುಗೆಯೇ ಇಂದಿನ ವೀರಶೈವ ಲಿಂಗಾಯತ ಸಮಾಜದ ಭದ್ರ ಬುನಾದಿಯಾಗಿದೆ.

ಅದರಂತೆ ಅನೇಕಾನೇಕ ಮಹಾತ್ಮರ ದಿವ್ಯದೃಷ್ಟಿ, ಕಾರ್ಯಕ್ಷಮತೆ, ಸೇವೆ ಮತ್ತು ಸಾಮಾಜಿಕ ಕ್ರಾಂತಿಯ ಫಲವೇ ಇಂದಿನ ಸದೃಢವಾದ ಶರಣ ಪರಂಪರೆಯ ವೀರಶೈವ ಲಿಂಗಾಯತ ಸಮಾಜ ರೂಪಗೊಳ್ಳಲು ಸಾಧ್ಯವಾಯಿತು ಎಂದರು. ಅಧ್ಯಕ್ಷತೆ ವಹಿಸಿದ್ದ ರತ್ನಪ್ರಭಾ ಬೆಲ್ಲದ ಅವರು ಮಾತನಾಡಿ, ಬಸವಾದಿ ಪ್ರಮಥರ ವಿಚಾರಗಳನ್ನು ನೂರಾರು ವರ್ಷಗಳ
ವರೆಗೆ ಅತ್ಯಂತ ನಿಷ್ಠೆಯಿಂದ ಅನೇಕ ಪುಣ್ಯಪುರುಷರು, ಕವಿಗಳು, ಮಠಾಧೀಶರು ಮುಂದುವರೆಸಿಕೊಂಡು ಹೋದ
ಫಲವೇ ನಾವು ಇಂದು ನಾಡಿನಲ್ಲಿ ಬಹುದೊಡ್ಡ ಸಮಾಜವಾಗಿ ರೂಪಗೊಂಡಿದ್ದೇವೆ ಎಂದರು.

ಆಶೀರ್ವಚನ ನೀಡಿದ ಕಾರಂಜಿಮಠದ ಗುರುಸಿದ್ಧ ಸ್ವಾಮಿಗಳು ನವ ಸಮಾಜಕ್ಕೆ 12ನೇ ಶತಮಾನದ ನಂತರದ ಅನೇಕ ಮಹಾಂತರ ಕೊಡುಗೆ ಅನುಪಮವೆನಿಸಿದೆ. ವೀರಶೈವ ಲಿಂಗಾಯತ ಸಮಾಜಕ್ಕೆ ಹಗಲಿರುಳು ಶ್ರಮಿಸಿ ಸಮಾಜವನ್ನು ಸುಶಿಕ್ಷಿತರನ್ನಾಗಿ ಮಾಡಿದರು. ಶಿಕ್ಷಣದಿಂದ ಮಾತ್ರಆರ್ಥಿಕ ಸಬಲತೆಯನ್ನು ಪಡೆಯಲು ಸಾಧ್ಯವೆಂದು ಅನೇಕ ಶಿಕ್ಷಣ
ಸಂಸ್ಥೆಗಳ ಸ್ಥಾಪನೆಗೆ ಮಠಮಾನ್ಯಗಳು, ಪುಣ್ಯಪುರುಷರು ಶ್ರಮಿಸಿದರು ಎಂದು ಹೇಳಿದರು.

Advertisement

ಸಿದ್ಧಾರ್ಥ ಎಸ್‌ ಹಂಜಿ ವಚನ ಪ್ರಾರ್ಥನೆ ಮಾಡಿದರು. ಹೇಮಾ ಭರಭರಿ ವಚನ ವಿಶ್ಲೇಷಣೆ ಮಾಡಿದರು. ಸುಮಿತ್ರ ಪರಿಚಯಿಸಿದರು. ಸುರೇಖಾ ಮಾನ್ವಿ ಸ್ವಾಗತಿಸಿದರು. ಭಾರತಿ ರತ್ನಪ್ಪಗೋಳ ವಂದಿಸಿದರು. ಪವಿತ್ರಾ ಅಮಾಸಿ
ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next