Advertisement

Belagavi: ವಿದ್ಯಾರ್ಥಿ ಜೀವನದಲ್ಲಿ ಶ್ರಮಪಟ್ಟು ಯಶಸ್ಸು ಸಾಧಿಸಿ

03:30 PM Sep 13, 2023 | Team Udayavani |

ಬೈಲಹೊಂಗಲ: ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ವ್ಯರ್ಥ ಸಮಯ ಕಳೆಯದೆ ನಿರಂತರ ಪರಿಶ್ರಮಪಟ್ಟು ಬದುಕಿನಲ್ಲಿ
ಯಶಸ್ಸು ಕಾಣಬೇಕು. ತಂದೆ-ತಾಯಿ ಮತ್ತು ಗುರುಗಳ ಮಾರ್ಗದರ್ಶನದಲ್ಲಿ ಸಂಸ್ಕಾರ ಮತ್ತು ಸರಳತೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

Advertisement

ತಾಲೂಕಿನ ದೊಡವಾಡ ಗ್ರಾಮದಲ್ಲಿ ಶ್ರೀ ಗ್ರಾಮ ದೇವತೆ ದೇವಸ್ಥಾನ ಟ್ರಸ್ಟ್‌ ಮತ್ತು ಸೇವಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಿ ಅವರು ಮಾತನಾಡಿದರು.

ಸಮಾಜದಲ್ಲಿನ ಉತ್ತಮ ವ್ಯಕ್ತಿಗಳನ್ನು ಮತ್ತು ಪ್ರತಿಭಾನ್ವಿತರನ್ನು ಗುರುತಿಸಿ ಗೌರವಿಸುವುದು ಶ್ರೇಷ್ಠ ಕೆಲಸ. ಹೀಗಾಗಿ ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸುತ್ತಿರುವ ಗ್ರಾಮದೇವತೆ ಗುಡಿಯ ಸೇವಾ ಸಮಿತಿ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ನವಲಗುಂದ ಗವಿಮಠದ ಶ್ರೀ ಅಭಿನವ ಬಸವಲಿಂಗ ಸ್ವಾಮಿಗಳು ಮಾತನಾಡಿ, ಶಿಕ್ಷಣ ಪ್ರೇಮಿಗಳಾಗಿರುವ ಶಾಸಕ ಮಹಾಂತೇಶ ಕೌಜಲಗಿಯವರಿಂದ ದೊಡವಾಡ ಗ್ರಾಮ ಸಮಗ್ರ ಅಭಿವೃದ್ಧಿ ಕಾಣಲಿ ಎಂದರು.

ಸರಕಾರಿ ವೈದ್ಯಕೀಯ ಸೀಟು ಪಡೆದ ಶಿವಾನಂದ ಚೌಡನ್ನವರ, ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ
ಐಶ್ವರ್ಯ ಉಪ್ಪಿನ ಹಾಗೂ ಸ್ಥಳೀಯ ಶಾಲೆಗಳ ಎಸ್‌ಎಸ್‌ಎಲ್‌ಸಿ, ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಿತಿಯವರು ಶಾಸಕರು ಹಾಗೂ ನವಲಗುಂದ ಶ್ರೀಗಳನ್ನು ಸನ್ಮಾನಿಸಿ, ಗೌರವಿಸಿದರು. ಸಮಿತಿ ಅಧ್ಯಕ್ಷ ವಿಠuಲ ಗಾಬಿ, ಗ್ರಾಮದ ಮುಖಂಡರಾದ ನಿಂಗಪ್ಪ ಚೌಡಣ್ಣವರ, ವೀರೇಂದ್ರ ಸಂಗೊಳ್ಳಿ, ಬಸವರಾಜ ಅಂದಾನಶೆಟ್ಟಿ, ನಾನೇಶ ನಾನನ್ನವರ, ಮಹಾದೇವಪ್ಪ ಶೆಟ್ಟರ, ಆನಂದ ಹೆಬ್ಬಳ್ಳಿ, ಪೀರಪ್ಪ ಕಾಟೆನ್ನವರ, ಮುಖ್ಯ ಶಿಕ್ಷಕಿ
ಬಿ.ಆರ್‌. ಹುತಮಲ್ಲನವರ, ಶ್ರೀ ಗ್ರಾಮದೇವತೆ ದೇವಸ್ಥಾನ ಟ್ರಸ್ಟ್‌ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು. ಗಾಯಕಿ ಸುಧಾ ಹಿರೇಮಠ ಪ್ರಾರ್ಥಿಸಿದರು. ಪತ್ರಕರ್ತ ಮಾಧವಾನಂದ ಬೆಳವಡಿ ಸ್ವಾಗತಿಸಿ, ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next