ಬೆಳಗಾವಿ: ತಾಲೂಕಿನ ಹೊನ್ನಿಹಾಳ ಹಾಗೂ ಬಾಗೇವಾಡಿ ಮಾರ್ಗದ ಮಧ್ಯೆ ಇರುವ ಹೊಲದಲ್ಲಿ ಮಂಗಳವಾರ ಬೆಳಿಗ್ಗೆ ತರಬೇತಿ ವಿಮಾನವೊಂದು ಭೂಸ್ಪರ್ಶವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಸಮೀಪದ ಸಾಂಬ್ರಾ ಗ್ರಾಮದ ಬಳಿ ಇರುವ ಬೆಳಗಾವಿ ವಿಮಾನ ನಿಲ್ದಾಣದಿಂದ ತರಬೇತಿ ನಡೆಸುತ್ತಿದ್ದ ಪುಟ್ಟ ವಿಮಾನ ಒಂದು ತಾಲೂಕಿನ ಹೊನ್ನಿಹಾಳ ಹೊರವಲಯದ ಮೋದಗಾ- ಬಾಗೇವಾಡಿ ರಸ್ತೆ ಮಧ್ಯದಲ್ಲಿ ತುರ್ತು ಭೂಸ್ಪರ್ಶವಾಗಿದೆ. ಘಟನೆಯಲ್ಲಿ ತರಬೇತುದಾರನ ಕಾಲಿಗೆ ಗಾಯವಾಗಿದೆ.
ಇದನ್ನೂ ಓದಿ:ಐಪಿಎಲ್ ಫೈನಲ್ ವೇಳೆ 2423ಕ್ಕೂ ಹೆಚ್ಚು ಕಾಂಡೋಮ್ ಆರ್ಡರ್: ಸ್ವಿಗ್ಗಿ ಟ್ವೀಟ್ Viral
Related Articles
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾರೀಹಾಳ ಠಾಣೆ ಪೊಲೀಸರು, ವಾಯು ಸೇನೆ ಅಧಿಕಾರಿಗಳು ದೌಡಾಯಿಸಿದ್ದಾರೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.