Advertisement

Belagavi: ಹಿಂಡಲಗಾ ಕೇಂದ್ರ ‌ಜೈಲಿನ ಮೇಲೆ ಪೊಲೀಸರ ದಿಢೀರ್ ದಾಳಿ

10:51 AM Mar 31, 2024 | Team Udayavani |

ಬೆಳಗಾವಿ:  ಬೆಳಗಾವಿಯ ಹಿಂಡಲಗಾ ಕೇಂದ್ರ ‌ಕಾರಾಗೃಹದ ಮೇಲೆ 150 ಪೊಲೀಸರು ಮಾ.31ರ ರವಿವಾರ ಬೆಳ್ಳಂಬೆಳಗ್ಗೆ ದಿಢೀರ್ ದಾಳಿ ನಡೆಸಿದರು.

Advertisement

ಹಿಂಡಲಗಾ ಜೈಲಿಗೆ ಆಗಮಿಸಿದ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ನೇತೃತ್ವದಲ್ಲಿ150 ಪೊಲೀಸರು ದಾಳಿ ನಡೆಸಿ ತಪಾಸಣೆ ಮಾಡಿದರು.

ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಿಂಡಲಗಾ ಜೈಲಿನ ಮೇಲೆ ಕಮೀಷನರ್ ಮಾರ್ಗದರ್ಶನದಲ್ಲಿ ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಬೆಳಂಬೆಳಗ್ಗೆ ನಡೆದಿದೆ.

ಡಿಸಿಪಿಗೆ ನಗರದ 5 ವಿಭಾಗದ ಎಸಿಪಿಗಳು ಸಾಥ್ ನೀಡಿದರು. ಎರಡೂವರೆ ಗಂಟೆಗಳ ಕಾಲ ಜೈಲಿನಲ್ಲಿ ತಪಾಸಣೆ ನಡೆಸಲಾಯಿತು. ಈ ಹಿಂದೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕಿರಿಗೆ ಬೆಳಗಾವಿ ಹಿಂಡಲಗಾ ಜೈಲಿನಿಂದ ಜೀವ ಬೆದರಿಕೆ ಕರೆ ಮಾಡಿದ್ದ ಆರೋಪವೂ ಇದೆ.

Advertisement

ಡಿಸಿಪಿ ರೋಹನ್ ಜಗದೀಶ್  ಮಾತನಾಡಿ,  ನಮ್ಮ ಎಸಿಪಿಗಳು ಐದು ಜನ ಇನ್ಸ್ಪೆಕ್ಟರ್ 150 ಸಿಬ್ಬಂದಿಗಳು ತಪಾಸಣೆ ಮಾಡಿದ್ದೇವೆ. ಶ್ವಾನದಳದೊಂದಿಗೆ ಬಂದು ಇಡೀ ಜೈಲು ತಪಾಸಣೆ ಮಾಡಿದ್ದೇವೆ. ಜೈಲಿನೊಳಗೆ ವಾಸ್ತವತೆ ಏನಿದೆ ಎಂದು ತಿಳಿಯಲು ತಪಾಸಣೆ ಮಾಡಿದ್ದೇವೆ. ತಂಬಾಕು, ಬೀಡಿ ಸಿಗರೇಟು ಸಣ್ಣ ಪುಟ್ಟ ಚಾಕಗಳು ಒಳಗಡೆ ಸಿಕ್ಕಿವೆ. ಭದ್ರತೆ ಇದ್ದರೂಒಳಗೆ ಇಂಥವೆಲ್ಲ ಏಕೆ ಹೋಗ್ತಿದೆ ತನಿಖೆ ಮಾಡಬೇಕಾಗಿದೆ. ಸದ್ಯಕ್ಕೆ ಮೊಬೈಲ್ ಗಳು ಯಾವುದೇ ಸಿಕ್ಕಿಲ್ಲ ಮೊಬೈಲ್‌ ಚಾರ್ಜರ್ಗಳು ಸಿಕ್ಕಿವೆ.‌ ಬ್ಲೂಟೂತ್ ಡಿವೈಸ್ ಗಳು ಸಿಕ್ಕಿವೆ ಅದನ್ನ ನಮ್ಮ ವಶಕ್ಕೆ ತೆಗೆದುಕೊಂಡಿದ್ದೆವೆ ಎಂದು ರೋಹನ್ ಜಗದೀಶ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next