ಬೆಳಗಾವಿ : ಮನೆಯ ಬಾಗಿಲಿನಲ್ಲಿದ್ದ ನಾಗರ ಹಾವಿನಿಂದ ಕೂದಲೆಳೆ ಅಂತರದಲ್ಲಿ ಬಾಲಕಿಯೊಬ್ಬಳು ಪಾರಾದ ಘಟನೆ ನಡೆದಿದೆ.
ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಬೆಚ್ಚಿ ಬೀಳುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮನೆಯ ಬಾಗಿಲಿನ ಹೊಸ್ತಿಲಿನಲ್ಲಿಯೇ ಹಾವು ಇದ್ದಿದ್ದು, ಹೊರಗಡೆಯಿಂದ ಪಕ್ಕದ ಮನೆಯ ಬಾಲಕಿ ಮನೆಯೊಳಗೆ ಓಡೊಡಿ ಬಂದಿದ್ದಾಳೆ. ಹಾವನ್ನ ಗಮನಿಸದೇ ಮನೆಯೊಳಗೆ ತೆರಳುತ್ತಿದ್ದಾಗ ನಾಗರ ಹಾವು ಹೆಡೆ ಎತ್ತಿದ್ದು, ಹೆದರಿದ ಬಾಲಕ ಮನೆಯೊಳಗೆ ಓಡಿ ಪಾರಾಗಿದ್ದಾಳೆ.
ಹಲಗಾ ನಿವಾಸಿ ಸುಹಾಸ್ ಸೈಬಣ್ಣವರ್ ಎಂಬುವರ ಮನೆಯಲ್ಲಿ ನಡೆದ ಘಟನೆ ನಡೆದಿದ್ದು, ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ವೈರಲ್ ಆಗುತ್ತಿದೆ.
Related Articles
https://www.facebook.com/reel/650393627132920