Advertisement
ಸಚಿವರ ನಿರ್ದೇಶನದಂತೆ ಈ ಓವರ್ ನಿರ್ಮಾಣದ ವಿವರವಾದ ಯೋಜನಾ ವರದಿ ಈಗಾಗಲೇ ಸಿದ್ಧವಾಗಿದೆ. ಈ ಮೊದಲುಲೋಕೋಪಯೋಗಿ ಇಲಾಖೆ ವತಿಯಿಂದ ಇದರ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿತ್ತು. ಆದರೆ ಹಣಕಾಸಿನ ಲಭ್ಯತೆ ಕೊರತೆಯಿಂದ ಈಗ ಕಾಮಗಾರಿಯ ಜವಾಬ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವಹಿಸಿಕೊಡಲಾಗಿದೆ. ಎಲ್ಲವೂ
ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ಸಿಗಲಿದೆ.
ತೆಗೆದಿಟ್ಟಿದ್ದರು. ಆದರೆ ಯೋಜನೆ ಕಾರ್ಯಗತಕ್ಕೆ ಬರಲಿಲ್ಲ. ಇದಕ್ಕೆ ನಿಗದಿಯಾಗಿದ್ದ 100 ಕೋಟಿ ಅನುದಾನವನ್ನು ಬೇರೆ ಯೋಜನೆಗೆ ಬಳಸಲಾಯಿತು. ಫ್ಲೈಓವರ್ ಯೋಜನೆ ನನೆಗುದಿಗೆ ಬಿದ್ದಿತು. ನಂತರ ಬಿಜೆಪಿ ಸರಕಾರದ ಅವಧಿಯಲ್ಲಿ ಇದರ ಬಗ್ಗೆ ಹೆಚ್ಚು ಚರ್ಚೆಯಾಗಲೇ ಇಲ್ಲ.
Related Articles
ವಿಸ್ತ್ರತ ಯೋಜನಾ ವರದಿ ತಯಾರಿಸುವ ಮೊದಲೇ ನನೆಗುದಿಗೆ ಬಿದ್ದಿತು. ನಂತರ ಯೋಜನೆಯಲ್ಲಿ ಸಾಕಷ್ಟು ಬದಲಾವಣೆಗಳಾದರೂ ಪ್ರಯೋಜನವಾಗಲಿಲ್ಲ. ಗಾಂಧಿನಗರ ಜಂಕ್ಷನ್, ಮಹಾಂತೇಶ ನಗರ ಜಂಕ್ಷನ್, ಅಶೋಕ ಸರ್ಕಲ್
ಜಂಕ್ಷನ್ ಮತ್ತು ತರಕಾರಿ ಮಾರುಕಟ್ಟೆ ಜಂಕ್ಷನ್ ಈ ಮೊದಲಿನ ಯೋಜನೆ ಒಳಗೊಂಡಿತ್ತು. ಆದರೆ ಅಂದುಕೊಂಡಂತೆ ಆಗಲಿಲ್ಲ.
Advertisement
ಈಗ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಯೋಜನೆಗಾಗಿ ವಿಶೇಷ ಆಸಕ್ತಿ ವಹಿಸಿದ್ದು ಮತ್ತೆ ಫ್ಲೈಓವರ್ ಯೋಜನೆಗೆ ಮರುಜೀವ ನೀಡಲು ಮುಂದಾಗಿದ್ದಾರೆ. ಈ ಸಂಬಂಧ ಈಗಾಗಲೇ ಲೋಕೋಪಯೋಗಿ ಇಲಾಖೆ ಮತ್ತು ರಾಷ್ಟ್ರೀ ಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಸಚಿವರು 350 ಕೋಟಿ ರೂ ವೆಚ್ಚದ ಯೋಜನೆಗೆ ಶೀಘ್ರದಲ್ಲೇಚಾಲನೆ ನೀಡುವ ಭರವಸೆ ನೀಡಿದ್ದಾರೆ. ನವೀಕೃತ ಯೋಜನೆಯಂತೆ ಗಾಂಧಿನಗರದಿಂದ ಆರಂಭವಾಗಲಿರುವ ಫ್ಲೈ ಓವರ್‌ನ ಮೊದಲ ವಿಂಗ್ ಕಾಮಗಾರಿ ಕೇಂದ್ರ ಬಸ್ ನಿಲ್ದಾಣದವರೆಗೆ ನಡೆಯಲಿದೆ. ಎರಡನೇ ವಿಂಗ್ ಯೋಜನೆಯಲ್ಲಿ ಅಶೋಕ ವೃತ್ತದಿಂದ ಆರ್‌ಟಿಒ ವೃತ್ತ, ಚನ್ನಮ್ಮ ವೃತ್ತ ನಂತರ ಬೋಗಾರ್ ವೇಸ್‌ವರೆಗೆ ಫ್ಲೈ ಓವರ್ ನಿರ್ಮಾಣವಾಗಲಿದೆ ಎಂಬುದು ಅಧಿಕಾರಿಗಳ ಹೇಳಿಕೆ. ಸಂಚಾರ ದಟ್ಟಣೆ ನಿವಾರಣೆ
ಸಂಚಾರ ದಟ್ಟಣೆ ಕಡಿಮೆ ಮಾಡಲು ನಗರದ ಸಂಕಮ್ ಹೋಟೆಲ್ ಬಳಿಯಿಂದ ಫ್ಲೈಓವರ್ ನಿರ್ಮಾಣ ಆರಂಭವಾಗಲಿದೆ. ಹೆದ್ದಾರಿಯ ಎರಡೂ ಕಡೆಯಿಂದ ಬಸ್ ನಿಲ್ದಾಣ, ಆರ್‌ಟಿಒ ವೃತ್ತ ಸೇರಿದಂತೆ ನಗರ ಪ್ರವೇಶಿಸುವ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿರ್ವಹಣೆ ಮಾಡುವುದು ಫ್ಲೈ ಓವರ್ ಮುಖ್ಯ ಉದ್ದೇಶವಾಗಿರಬೇಕು. ಅದೇ ರೀತಿಯಲ್ಲಿ ವಿನ್ಯಾಸ ರೂಪಿಸಬೇಕು. ನಂತರ ಪೀರನವಾಡಿಯವರೆಗೆ ವಿಸ್ತರಿಸುವ ಬಗ್ಗೆ ಪರಿಶೀಲಿಸಬಹುದು ಎಂಬುದು ಸಚಿವ ಸತೀಶ ಜಾರಕಿಹೊಳಿ ಅವರ ಹೇಳಿಕೆ. ಈ ಫ್ಲೆ$çಓವರ್ ನಿರ್ಮಾಣಕ್ಕೆ ಸದ್ಯ ಯಾವುದೇ ಭೂ ಸ್ವಾಧೀನ ಸಮಸ್ಯೆ ಇಲ್ಲ. ಒಂದೆರಡು ಕಡೆ ಮಾತ್ರ ಅತೀ ಸಣ್ಣ ಪ್ರಮಾಣದಲ್ಲಿ ಭೂ ಸ್ವಾಧೀನಪಡಿಸಿಕೊಳ್ಳಬೇಕಾಗಬಹುದು. ಇದು ಯೋಜನೆಗೆ ಯಾವುದೇ ತೊಂದರೆಯುಂಟು ಮಾಡಲ್ಲ. ನಾಲ್ಕು ಪಥಗಳಲ್ಲಿ ಈ ಮೇಲ್ಸೇತುವೆ ನಿರ್ಮಾಣವಾಗಲಿದೆ. ನಗರದ ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡುವುದು ಮತ್ತು ಸಾರ್ವಜನಿಕರ ಬಹು ದಿನಗಳ ಬೇಡಿಕೆಯಂತೆ ಫ್ಲೈ ಓವರ್ ನಿರ್ಮಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಈಗಾಗಲೇ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಅಂದಾಜು 350 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ಸಿದ್ಧವಾಗಿದೆ. ಆದಷ್ಟು ಬೇಗ ಇದಕ್ಕೆ ಚಾಲನೆ ನೀಡಲಾಗುವುದು.
*ಸತೀಶ ಜಾರಕಿಹೊಳಿ,
ಲೋಕೋಪಯೋಗಿ ಸಚಿವರು. ಫ್ಲೈಓವರ್ ನಿರ್ಮಾಣ ಯೋಜನೆ ಬಹುತೇಕ ಅಂತಿಮಗೊಂಡಿದೆ. ಸಣ್ಣ ಪುಟ್ಟ ಬದಲಾವಣೆ ಹೊರತುಪಡಿಸಿ ಯೋಜನೆ ಪ್ರಕಾರ ಈಗ ರಾಷ್ಟ್ರೀಯ ಹೆದ್ದಾರಿ ನಾಲ್ಕರಿಂದ ಬೋಗಾರ್ ವೇಸ್ ವರೆಗೆ ಸುಮಾರು ನಾಲ್ಕು ಕಿಲೋಮೀಟರ್ ವರೆಗೆ ಫ್ಲೈ ಓವರ್ ನಿರ್ಮಿಸುವ ಉದ್ದೇಶವಿದೆ. ಒಂದು ವಿಂಗ್‌ದಲ್ಲಿ ಬಸ್ ನಿಲ್ದಾಣದವರೆಗೆ ಹಾಗೂ ಎರಡನೇ ವಿಂಗ್‌ದಲ್ಲಿ ಬೋಗಾರ್‌ವೆಸ್‌ವರೆಗೆ ಫ್ಲೈಓವರ್ ನಿರ್ಮಾಣವಾಗಲಿದೆ.
ಎಸ್.ಎಸ್.ಸೊಬರದ
ಕಾರ್ಯ ನಿರ್ವಾಹಕ ಎಂಜನಿಯರ್, ಪಿಡಬ್ಲ್ಯುಡಿ *ಕೇಶವ ಆದಿ