Advertisement
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆ ನಡೆದ ದಿನದಂದು ನಾನು ನಡೆದುಕೊಂಡು ಹೋಗುತ್ತಿದ್ದೆ. ನಗರದ ವಝೇ ಗಲ್ಲಿಯಲ್ಲಿ ಎರಡು ವರ್ಷದ ಮಗು ಬಾವಿಗೆ ಬಿದ್ದಿತ್ತು. ಆಗ ಅಲ್ಲಿ ನೆರೆದವರು ನನ್ನನ್ನು ಕರೆದು ಮಗು ಬಿದ್ದಿರುವುದನ್ನು ಗಮನಕ್ಕೆ ತಂದರು. ರಕ್ಷಿಸುವಂತೆ ಕೋರಿದರು. ಕೂಡಲೇ ನಾನು ನೇರವಾಗಿ ಬಾವಿಗೆ ಇಳಿದೆ. ಕತ್ತಲು ತುಂಬಿದ್ದ ಆ ಬಾವಿಯಲ್ಲಿ ಮಗು ತೇಲಾಡುತ್ತಿತ್ತು. ಮೊದಲು ಮಗುವನ್ನು ರಕ್ಷಿಸಿ ತೊಡೆಯ ಮೇಲೆ ಇಟ್ಟುಕೊಂಡು ಹೊಟ್ಟೆ ಹಿಸುಕಿ ನೀರು ಹೊರ ತೆಗೆದೆ. ಆಗ ಮಗುವಿನ ಪ್ರಾಣ ಉಳಿಸಿದ ಸಾರ್ಥಕ ಭಾವ ನನ್ನಲ್ಲಿ ಬಂತು ವಿನಾ ಯಾವುದೇ ಪ್ರಶಸ್ತಿ ನಿರೀಕ್ಷೆ ನನ್ನಲ್ಲಿರಲಿಲ್ಲ ಎಂದರು.
Related Articles
ಬೆಳಗಾವಿ: ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿ ನಿಖೀಲ ಜಿತೂರಿ ಅವರನ್ನು ನಗರದ ರೈಲು ನಿಲ್ದಾಣದಲ್ಲಿ ಬರಮಾಡಿಕೊಂಡು ಸ್ವಾಗತಿಸಲಾಯಿತು. ಎಸ್‌ಎಸ್‌ಕೆ ಸಮಾಜ, ವಸಂತರಾವ್ ಪೋತದಾರ ಪಾಲಿಟೆಕ್ನಿಕ್ ಸಿಬ್ಬಂದಿ ಹಾಗೂ ವಿವಿಧ ಸಾಮಾಜಿಕ ಕಾರ್ಯಕರ್ತರು, ಸಂಘ-ಸಂಸ್ಥೆಗಳ ಕಾರ್ಯಕರ್ತರು ನಿಖೀಲ್‌ಗೆ ಪುಷ್ಪಗುಚ್ಛ ನೀಡಿ, ಹಾರ ಹಾಕಿ ಸ್ವಾಗತಿಸಿಕೊಂಡರು. ವಸಂತರಾವ್ ಪೋತದಾರ ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್.ಕೆ. ಅಂಬೇಕರ, ಎಚ್.ಡಿ. ಕಾಟವಾ, ಪ್ರಭಾಕರ ಚೌಧರಿ, ಗಿರೀಶ ಧೋಂಗಡಿ, ರಮೇಶ ಧೋಂಗಡಿ, ಜಿ.ಡಿ. ಕಾಟವಾ, ಅರುಣ ಕೋಸಣದಾರ, ರಾಧಾ ಜಿತೂರಿ ಸೇರಿದಂತೆ ಇತರರು ಇದ್ದರು.
Advertisement