Advertisement

‌ ಬೈಲಹೊಂಗಲ: ಭಾರತ್ ಬಂದ್ ಬೆಂಬಲಿಸಿ ಪ್ರತಿಭಟನೆ

03:24 PM Sep 27, 2021 | Team Udayavani |

ಬೈಲಹೊಂಗಲ:ಭಾರತ್ ಬಂದ್ ಹಿನ್ನೆಲೆ ಬೈಲಹೊಂಗಲ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

Advertisement

ರೈತರಿಗೆ ಮರಣ ಶಾಸನ ಬರೆಯಲು ಕೇಂದ್ರ ಸರಕಾರ ಸುಗ್ರೀವಾಜ್ಞೆ ಮುಖಾಂತರ ಎಪಿಎಂಸಿ ಕಾಯ್ದೆ ತಿದ್ದುಪಡಿ,ವಿದ್ಯುತ್ ಖಾಸಗೀಕರಣ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ   ವಿರೋಧಿಸಿ ಕಳೆದ 10 ತಿಂಗಳಿನಿಂದ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದು, ದೆಹಲಿಯಲ್ಲಿ ನಡೆದ ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವ ಉದ್ದೇಶದಿಂದ  ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ನಗರದ  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನವರ ಪುತ್ತಳಿಗೆ ಮಾಲಾರ್ಪಣೆ ಮಾಡುವುದರ ಮುಖಾಂತರ ಎಸ್,ಆರ್, ವೃತ್ತದಿಂದ ಮೆರವಣಿಗೆ  ಮುಖಾಂತರ ಸಾಗಿ ಬೆಳಗಾವಿ ,ಧಾರವಾಡ ರಸ್ತೆಯಲ್ಲಿರುವ ಚನ್ನಮ್ಮಾಜಿ ವೃತ್ತದಲ್ಲಿ ಸುಮಾರು 3 ಘಂಟೆಗಳ ಕಾಲ ಸಾರ್ವಜನಿಕ ಸಂಚಾರ ತಡೆದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ  ಜಿಲ್ಲಾ ಕಾರ್ಯಾಧ್ಯಕ್ಷ ರವಿ ಸಿದ್ದಮ್ಮನವರ,ತಾಲೂಕಾ  ಅಧ್ಯಕ್ಷ ಮಹಾಂತೇಶ ಹಿರೇಮಠ ಮಾತನಾಡಿ, ರೈತ ವಿರೋಧಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮುಖಾಂತರ ಜಾರಿಗೊಳಿಸಿರುವುದು ಅಪರಾಧ. ದೆಹಲಿಯಲ್ಲಿ ಸುಮಾರು 300 ದಿನಗಳ ಕಾಲ ರೈತರು ಪ್ರತಿಭಟನೆ ನಡೆಸಿದ್ದು ಪ್ರತಿಭಟನಾಕಾರರ ಸಮಸ್ಯೆ ಆಲಿಸದಿರುವ ಕೇಂದ್ರ ಸರಕಾರಕ್ಕೆ ಕಿಂಚಿತ್ತೂ ರೈತರ ಮೇಲೆ ದಯೆ ಇಲ್ಲ ಎಂದು ಕೇಂದ್ರ ಸರಕಾರದ ರೈತ ವಿರೋಧಿ ನೀತಿಯನ್ನು ದೂರಿದರು.

ರೈತ ಮುಖಂಡರಾದ ಮಲ್ಲಿಕಾರ್ಜುನ್ ಹುಂಬಿ ಮಾತನಾಡಿ,ಅಚ್ಚೆ ದಿನ್ ಎಂದು ಡಂಗುರ ಬಾರಿಸಿ ಕೇಂದ್ರ ಸರಕಾರ ಅಗತ್ಯ ವಸ್ತುಗಳ ಬೆಲೆ ಏರಿಸುವದರ ಮುಖಾಂತರ ಜನ ಸಾಮಾನ್ಯರ ಹಿಡಿಶಾಪಕ್ಕೆ  ಗುರಿಯಾಗಿದೆ ಎಂದರು.

Advertisement

ಜಿಲ್ಲಾ ಪಂಚಾಯಿತಿ ಸದಸ್ಯ ನಿಂಗಪ್ಪ ಅರಕೇರಿ, ಈ ಹೋರಾಟ ಕೇವಲ ರೈತರಿಗೆ ಸಂಬಂಧಿಸಿದ್ದಲ್ಲ ಬದಲಾಗಿ ಇಡೀ ನಮ್ಮ ದೇಶದ ನಾಗರೀಕರಿಗೆ ಸಂಬಂಧಿಸಿದೆ, ಸುಗ್ರೀವಾಜ್ಞೆ ಮೂಲಕ ರೈತ ವಿರೋಧಿ ಕಾಯ್ದೆ ಜಾರಿಗೊಳಿಸಿರುವುದು ಸರಿಯಲ್ಲ ಎಂದರು.

ಪ್ರತಿಭಟನೆ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಸದಾಶಿವಯ್ಯ ತೆಗ್ಗಿನಮಠ ಶಾಸ್ತ್ರಿಗಳು ಮಾತನಾಡಿ, ಮುಂಬರುವ ದಿನಗಳಲ್ಲಿ ರೈತಕುಲ ಉಳಿಯಬೇಕಾದರೆ ಸರಕಾರಗಳು ರೈತರ ಪರವಾಗಿ ಯೋಜನೆಗಳನ್ನು ರೂಪಿಸುವ ಮುಖಾಂತರ ಅನ್ನದಾತರಿಗೆ ಅನುಕೂಲ ಮಾಡಿಕೊಡಬೇಕು.

ಕೃಷಿತೋ ನಾಸ್ತಿ ದುರ್ಭಿಕ್ಷಃ ಎಂಬಂತೆ ರೈತರು ಬೆಳೆ ಬೆಳೆಯದೆ ಹೋದರೆ ಮುಂಬರುವ ದಿನಗಳಲ್ಲಿ ಆಹಾರದ ಹಾಹಾಕಾರ ಎಳಲಿದೆ,ಆದ್ದರಿಂದ ಸರಕಾರಗಳು ಅನ್ನದಾತರ ಅಳಲನ್ನು ಆಲಿಸಬೇಕು ಎಂದು ಸರಕಾರಕ್ಕೆ ಸಂದೇಶ ರವಾನಿಸಿದ್ದಾರೆ. ಇದೇ ವೇಳೆ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ರೈತ ಸಂಘದ ಜಿಲ್ಲಾ ಮಾದ್ಯಮ ಕಾರ್ಯದರ್ಶಿ ಈಶ್ವರ್ ಶಿಲ್ಲೇದಾರ, ತಾಲೂಕು ಪ್ರಧಾನ ಕಾರ್ಯದರ್ಶಿ ಮಡಿವಾಳಪ್ಪ ಹಿರೆಹೊಳಿ,ರೈತ ಮುಖಂಡರಾದ ಬಾಳಪ್ಪ ಚಳಕೊಪ್ಪ,ಬಸವರಾಜ್ ಖಾನಗೌಡರ್, ಈರಪ್ಪ ಎತ್ತಿನಮನಿ,ಈರಪ್ಪ ತೋಟಗಿ, ಬಸು ಕುರಗುಂದ,ರೈತ ಮಹಿಳಾ ಮುಖಂಡರಾದ ಶ್ರೀದೇವಿ ನಾಯ್ಕರ್,ನಾಗಮ್ಮ ಪೂಜೇರಿ,ಸುರೇಖಾ ಖಾನೋಜಿ, ಮಹಾನಂದ ಹಡಪದ ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next