Advertisement

ಡಂಭಾಚಾರದ ವಿರುದ್ಧ ಧ್ವನಿ ಎತ್ತಿದ ಚೌಡಯ್ಯ

04:13 PM Jan 22, 2023 | Team Udayavani |

ಬೆಳಗಾವಿ: ಅಂಬಿಗರ ಚೌಡಯ್ಯನವರಿಗೆ ಇನ್ನೊಂದು ಹೆಸರು ನಿಜಶರಣರು. ಆಗಿನ ಕಾಲದಲ್ಲಿ ಯಾವುದೇ ವಿಷಯಕ್ಕೆ ರಾಜಿಯಾಗದೇ ಸತ್ಯ ಮತ್ತು ನಿಷ್ಠುರತನದಿಂದ ತಮ್ಮ ವಿಚಾರಗಳನ್ನು ಸಮಾಜಕ್ಕೆ ತಿಳಿಸಿದವರು. ಸಮಾನತೆ ಪ್ರತಿಪಾದಿಸುವ ಮೂಲಕ ಎಲ್ಲರ ಗಮಸೆಳೆದರು ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

Advertisement

ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನರ ಪಾಲಿಕೆ ವತಿಯಿಂದ ಶನಿವಾರ ನಡೆದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಾರುತಿ ಶಾಲೆಮನೆ ವಿಶೇಷ ಉಪನ್ಯಾಸ ನೀಡಿದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯನವರು ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಬಸವಣ್ಣವರು ಹಾಕಿಕೊಟ್ಟಂತಹ ಅನುಭವ ಮಂಟಪದಲ್ಲಿ ಕ್ರಾಂತಿಕಾರಿ ವಚನಗಾರರಾಗಿ ಪ್ರಸಿದ್ಧಿ ಹೊಂದಿದ ಅಂಬಿಗರ ಚೌಡಯ್ಯನವರು ವಚನಗಳನ್ನು ಬರೆದು ಸಮಾಜ ಸುಧಾರಣೆಗೆ ಪ್ರಯತ್ನಿಸಿದರು. ವೈಯಕ್ತಿಕ ಬದುಕನ್ನು ಬದಿಗಿಟ್ಟು ಸಮಾಜದ ಸಲುವಾಗಿ ಶ್ರಮಿಸಿದ ಕೀರ್ತಿ ಅಂಬಿಗರ ಚೌಡಯ್ಯನವರಿಗೆ ಸಲ್ಲುತ್ತದೆ ಎಂದರು.

ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಬೆಳಗಾವಿ ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷ ದಿಲೀಪ್‌ ಕುರಂದವಾಡೆ, ಗಂಗಾಧರ ತಳವಾರ ಹಾಗೂ ಸಮುದಾಯದ ಮುಖಂಡರು ಇದ್ದರು.

ಭವ್ಯ ಮೆರವಣಿಗೆ: ನಗರದ ಕೋಟೆ ಕೆರೆಯಿಂದ ಕುಮಾರ ಗಂಧರ್ವ ಕಲಾಮಂದಿರದವರೆಗೆ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರವನ್ನು ಅಂಬಾರಿಯ ಮೇಲಿಟ್ಟುಕೊಂಡು ಭವ್ಯ ಮೆರವಣಿಗೆ ನಡೆಯಿತು. ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಸಂಸದೆ ಮಂಗಳಾ ಅಂಗಡಿ ಇತರರು ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಕಲಾತಂಡಗಳು, ಪೂರ್ಣಕುಂಭ ಹೊತ್ತ ಮಹಿಳೆಯರು ಹಾಗೂ ಅಂಬಾರಿ ಹೊತ್ತ ಆನೆ ಗಮನಸೆಳೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next