ಬೆಳಗಾವಿ: ತನ್ನ ಇಬ್ಬರು ಮಕ್ಕಳೊಂದಿಗೆ ತಾಯಿ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಸವದತ್ತಿ ತಾಲೂಕಿನ ನವಿಲುತೀರ್ಥ ಜಲಾಶಯದಲ್ಲಿ ನಡೆದಿದೆ.
ಸೌದತ್ತಿ ಪೊಲೀಸ್ ಠಾಣೆಯ ವ್ಯಾಪ್ತಿಯ ವಟ್ನಾಳ ಗ್ರಾಮ ಹದ್ದಿಯಲ್ಲಿ ಇರುವ ನವಿಲುತೀರ್ಥ ಜಲಾಶಯದ ಹಿನ್ನೀರಿನಲ್ಲಿ ಈ ದುರ್ಘಟನೆ ನಡೆದಿರುವುದು ಬೆಳಕಿಗೆ ಬಂದಿದ್ದು ಮೃತ ದುರ್ದೈವಿಗಳನ್ನು ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ ಶಶಿಕಲಾ (ತನುಜಾ) ಪರಸಪ್ಪ ಗೋಡಿ (೩೨) ಹಾಗೂ ಮಕ್ಕಳಾದ ಸುದೀಪ್ (ನಾಲ್ಕು ವರ್ಷ) ಹಾಗೂ ರಾಧಿಕಾ (ಮೂರು ವರ್ಷ) ಎಂದು ಗುರುತಿಸಲಾಗಿದೆ.
ಸಂಸಾರಿಕ ಜೀವನದ ತಾಪತ್ರಯದಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನ ಮಕ್ಕಳನ್ನು ಕರೆದುಕೊಂಡು ನವಿಲು ತೀರ್ಥ ಜಲಾಶಯದ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಕುರಿತು ಸೌದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಿಸಿದ್ದು ತನಿಖೆ ಮುಂದುವರಿದಿದೆ.
Related Articles
ಇದನ್ನೂ ಓದಿ: 7 ನೇ ವೇತನ ಆಯೋಗ ರಚನೆಗೆ ಸಿಎಂ ಅನುಮೋದನೆ: ಮೂವರು ಸದಸ್ಯರ ನೇಮಕ