Advertisement

Belagavi: ಮೂರು ವರ್ಷದ ಮಗುವಿನ “ಹತ್ಯಾಚಾರಿ’ಗೆ ಗಲ್ಲು ಶಿಕ್ಷೆ

01:32 AM Sep 28, 2024 | Team Udayavani |

ಬೆಳಗಾವಿ: ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಬಳಿಕ ಮಗುವಿನ ಮೂಗು, ಕಣ್ಣಲ್ಲಿ ಮಣ್ಣು ಹಾಕಿ ಹತ್ಯೆಗೈದಿದ್ದ ದುರುಳನಿಗೆ ಜಿಲ್ಲಾ ಪೋಕ್ಸೋ ನ್ಯಾಯಾಲಯ ಶುಕ್ರವಾರ ಗಲ್ಲು ಶಿಕ್ಷೆ ವಿಧಿ ಸಿದೆ. ಇದು ಪೋಕ್ಸೋ ಕಾಯ್ದೆಯಡಿ ರಾಜ್ಯದಲ್ಲಿ ಗಲ್ಲು ಶಿಕ್ಷೆ ವಿಧಿಸಿದ ಮೊದಲ ಪ್ರಕರಣ ಎನ್ನಲಾಗಿದೆ.

Advertisement

ಗುರುವಾರವಷ್ಟೇ ಅರುಣಾಚಲ ಪ್ರದೇಶದ ಗುವಾಹಾಟಿಯ ಸರಕಾರಿ ಹಾಸ್ಟೆಲ್‌ನ 21 ಮಕ್ಕಳ ಮೇಲೆ ಅತ್ಯಾಚಾರ ಎಸಗಿದ್ದ ವಾರ್ಡ್‌ನ್‌ಗೆ ಅಲ್ಲಿನ ವಿಶೇಷ ನ್ಯಾಯಾಲಯ ಪೋಕ್ಸೋ ಕಾಯ್ದೆಯಡಿ ಗಲ್ಲು ಶಿಕ್ಷೆ ವಿಧಿಸಿತ್ತು. ಇದು ಪೋಕ್ಸೋ ಕಾಯ್ದೆಯಡಿ ಗಲ್ಲು ಶಿಕ್ಷೆ ವಿಧಿಸಿದ ದೇಶದ ಮೊದಲ ಪ್ರಕರಣ ಎನ್ನಲಾಗಿತ್ತು. ಈಗ ರಾಜ್ಯದಲ್ಲಿ ಪೋಕ್ಸೋ ಕಾಯ್ದೆಯಡಿ ಬೆಳಗಾವಿ ವ್ಯಕ್ತಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ.

ರಾಯಬಾಗ ತಾಲೂಕಿನ ಹಾರೂಗೇರಿ ಕುರುಬ ಗೋಡಿಯ ಉದ್ದಪ್ಪ ರಾಮಪ್ಪ ಗಾಣಿಗೇರ (32) ಎಂಬಾತನಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೋ  ನ್ಯಾಯಾಲಯ-1ರ ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ಅವರು ಗಲ್ಲು ಶಿಕ್ಷೆ ಹಾಗೂ 45 ಸಾವಿರ ರೂ. ದಂಡ ವಿಧಿ ಸಿದ್ದಾರೆ. ಜತೆಗೆ ಬಾಲಕಿಯ ಪಾಲಕರಿಗೆ ಮೂರು ಲಕ್ಷ ರೂ. ಪರಿಹಾರವನ್ನು ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಪಡೆಯಲು ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next