Advertisement

2ಎ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡ ಶಾಸಕರಿಗೆ ಸಚಿವ ಸ್ಥಾನ ಕೈತಪ್ಪಿರುವದು ಖಂಡನಾರ್ಹ

03:50 PM Aug 06, 2021 | Team Udayavani |

ಮೂಡಲಗಿ : ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನವರ ಕುತಂತ್ರದಿoದ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟದಲ್ಲಿ ಭಾಗವಹಿಸಿದ ಶಾಸಕರಿಗೆ ನೂತನ ಮುಖ್ಯ ಮಂತ್ರಿ ಸಿಎಂ ಬಸವರಾಜ ಬೊಮ್ಮಾಯಿಯವರ ಸಂಪುಟದಲ್ಲಿ ಮಂತ್ರಿ ಸ್ಥಾನ ಕೈ ತಪ್ಪುವಂತಾಗಿದೆ. ಮಿಸಲಾತಿ ಸಲುವಾಗಿ ರಾಜ್ಯಾದ್ಯಂತ ಕಾಲ್ನಡಿಗೆ ಮೂಲಕ ಹೋರಾಟ ಕೈಗೊಳ್ಳಲಾಗಿತ್ತು ದುರ್ದೈವವಶಾತ ಹೋರಾಟದಲ್ಲಿ ಪಾಲ್ಗೊಂಡ ಶಾಸಕರಿಗೆ ಸಚಿವ ಸ್ಥಾನ ಕೈತಪ್ಪಿರುವದು ಖಂಡನಾರ್ಹವಾಗಿದೆ ಎಂದು ಮೂಡಲಗಿ ತಾಲೂಕಾ ಪಂಚಮಸಾಲಿ ಲಿಂಗಾಯತ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಆಕ್ರೋಶ ವ್ಯಕ್ತಪಸಿದ್ದಾರೆ.

Advertisement

ಪಂಚಮಸಾಲಿ ಹೋರಾಟ ಸಂದರ್ಭದಲ್ಲಿ ಭಾಗವಹಿಸಿದ ಶಾಸಕರಿಗೆ ಯಾವುದೇ ಮಂತ್ರಿ ಸ್ಥಾನ ನೀಡದೆ, ನಮ್ಮ ಪ್ರತಿಯೊಂದು ಹೋರಾಟದಲ್ಲಿ ಭಾಗವಹಿಸದಂತೆ ಮಾಜಿ ಸಿಎಂ ಯಡಿಯೂರಪ್ಪನವರು ಕುತಂತ್ರ ಮಾಡಿದ್ದಾರೆ ಎಂದು ಶುಕ್ರವಾರದಂದು ಪಟ್ಟಣದ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಾರ್ಯಾಲದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಬಡ ಮಕ್ಕಳ ಭವಷ್ಯಕ್ಕಾಗಿ 2ಎ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಅಧಿಕಾರ ವ್ಯಾಮೋಹವನ್ನು ತೊರೆದು ಹೋರಾಡಿದ್ದ ಬಸನಗೌಡ ಪಾಟೀಲ ಯತ್ನಾಳ, ಸಿದ್ದು ಸವದಿ, ಅರವಿಂದ ಬೆಲ್ಲದ ಮತ್ತು ಆನಂದ ಮಾಮನಿಯವರಿಗೆ ಸಿಗಬೇಕಾದ ಸಚಿವ ಸ್ಥಾನವನ್ನು ಮಾಜಿ ಸಿಎಂ ಯಡಿಯೂರಪ್ಪನವರ ಕುತಂತ್ರದಿoದ ತಪ್ಪಿಸಲಾಗಿದೆ. ನಮ್ಮ ಸಮಾಜದ ನಾಯಕರನ್ನು ತುಳಿಯುವಂತಹ ಕಾರ್ಯ ಯಡಿಯೂರಪ್ಪನವರು ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ : ಬೊಮ್ಮಾಯಿ ಸಂಪುಟ ಕೇವಲ ಸಮಾಧಾನದ ಪರಿಹಾರ..!

ನಮ್ಮ ಸಮಾಜದ ಹೋರಾಟ ಸಂದರ್ಭದಲ್ಲಿ ಆರು ತಿಂಗಳೊಳಗಾಗಿ 2ಎ ಮೀಸಲಾತಿ ನೀಡಲು ಭರವಸೆಯನ್ನು ನೀಡಿದ್ದರು. ರಾಜಕೀಯ ಒಳ ಜಗಳದಿಂದ ಸಿಎಂ ಸ್ಥಾನದಿಂದ ಕೆಳಗೆ ಇಳಿಯಬೇಕಾಯಿತು. ಆದರೆ ನೂತನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಯಡಿಯೂರಪ್ಪನವರು ನೀಡಿರುವ ಭರವಸೆಯಂತೆ 2ಎ ಮೀಸಲಾತಿಯನ್ನು ನೀಡಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮಿಸಲಾತಿಯ ಅವಶ್ಯಕತೆ ಇರುತ್ತದೆ. ರಾಜಕೀಯವಾಗಿ ಪ್ರಾಬಲ್ಯ ಹೊಂದಲು ಅನುಕೂಲವಾಗುವದು ಅಷ್ಟೇ ಅಲ್ಲದೆ ಮುಂದಿನ ಪೀಳಿಗೆಗೆ ಉಪಯುಕ್ತವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ರವಿ ಮಹಾಲಿಂಗಪೂರ ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿಯವರು ಆದಷ್ಟು ಬೇಗ ನಮ್ಮ ಬೇಡಿಕೆಯಾದ 2ಎ ಮಿಸಲಾತಿಯನ್ನು ನೀಡದೆ ಇದ್ದ ಪಕ್ಷದಲ್ಲಿ ಕೂಡಲಸಂಗಮ ಸ್ವಾಮೀಜಿಯವರ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಲಾಗುವುದು, ಆದಷ್ಟೂ ಬೇಗ ಪಂಚಮಸಾಲಿ ಸಮಾಜಕ್ಕಾಗಿ ಹೋರಾಟ ನಡೆಸಿದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವದು ಎಂದು  ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಬಿ.ಜಿ. ನಿಡಗುಂದಿ, ವ್ಹಿ.ಎಸ್. ಮುಗಳಖೋಡ, ಮಹಾದೇವ ಗೋಕಾಕ, ರುದ್ರಪ್ಪ ಬಳಿಗಾರ, ಗುರಲಿಂಗಪ್ಪ ಗೋಕಾಕ, ಅಜ್ಜಪ್ಪ ಬಳಿಗಾರ, ಬಸವರಾಜ ಕುರುಬಗಟ್ಟಿ ಮತ್ತು ಪರಿಶುರಾಮ ಗೋಕಾಕ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ವಿಭಿನ್ನ ಗೆಟಪ್ ನಲ್ಲಿ ಬಂದು ಕೋವಿಡ್ ಲಸಿಕೆ ಪಡೆದ ಗಾಯಕ

Advertisement

Udayavani is now on Telegram. Click here to join our channel and stay updated with the latest news.

Next