Advertisement

ಬೆಳವಟ್ಟಿಯಲ್ಲಿ ಕಂಡಿದ್ದು ಬೆಳಗಾವಿ ಚಿರತೆನಾ?

05:56 PM Aug 18, 2022 | Team Udayavani |

ಬೆಳಗಾವಿ: ಜಾಧವ ನಗರದಲ್ಲಿ ಕಾರ್ಮಿಕನ ಮೇಲೆ ದಾಳಿ ನಡೆಸಿ ಗಾಲ್ಫ್ ಮೈದಾನದಲ್ಲಿ ಅವಿತುಕೊಂಡಿರುವ ಚಿರತೆ ಇನ್ನೂ ಪ್ರತ್ಯಕ್ಷವಾಗಿಲ್ಲ. ಗಾಲ್ಫ್  ಮೈದಾನದಿಂದ ಸುಮಾರು 18 ಕಿ.ಮೀ. ದೂರದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಅದು ಇದೇ ಚಿರತೆಯೋ ಅಥವಾ ಮತ್ತೊಂದು ಚಿರತೆಯೋ ಎಂಬುದು ಚರ್ಚೆಗೆ ಗ್ರಾಸವಾಗಿದೆ.

Advertisement

ಆ. 5ರಂದು ಬೆಳಗಾವಿಯ ಜಾಧವ ನಗರದಲ್ಲಿ ಮಧ್ಯಾಹ್ನ 12 ಗಂಟೆಗೆ ಕಾಣಿಸಿಕೊಂಡ ಚಿರತೆ ಕಟ್ಟಡ ಕಾರ್ಮಿಕನ ಮೇಲೆ ದಾಳಿ ಮಾಡಿ ಮಾಯವಾಗಿದೆ. ಇದರ ಶೋಧಕ್ಕೆ ಹಗಲು ರಾತ್ರಿ ಎನ್ನದೇ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದು ಬಿಟ್ಟರೆ ಇನ್ನೂ ಚಿರತೆ ಕಾಣಿಸಿಕೊಂಡಿಲ್ಲ. ಹೀಗಾಗಿ ಆತಂಕ ಹೆಚ್ಚಾಗುತ್ತಿದೆ. ಚಿರತೆಯ ಶೋಧಕ್ಕಾಗಿ ಅರಣ್ಯ ಇಲಾಖೆ ನಡೆಸಿರುವ ಪ್ರಯತ್ನಗಳಿಗೆ ಇನ್ನೂ ಫಲ ಸಿಕ್ಕಿಲ್ಲ. ಆದರೆ ಇನ್ನೂ ಪ್ರಯತ್ನ ಮುಂದುವರಿದಿದೆ. ಚಿರತೆಯ ಭಯದಿಂದಾಗಿ ರಜೆ ನಿಇಡಿದ್ದ 22 ಶಾಲೆಗಳು ಆ. 16ರಿಂದ ಪುನರಾರಂಭಗೊಂಡಿವೆ. ಆದರೆ ಪಾಲಕರು ಮತ್ತು ಮಕ್ಕಳಲ್ಲಿ ಭಯ ದೂರವಾಗಿಲ್ಲ.

ಆ. 13ರಿಂದ ಆ. 16ರ ವರೆಗೂ ಹಿಂಡಲಗಾ ರಸ್ತೆಯಲ್ಲಿರುವ ಗಾಲ್ಫ್ ಮೈದಾನದಿಂದ ಚಿರತೆ ಅತ್ತಿತ್ತ ಓಡಾಡಿದ ಬಗ್ಗೆ ವದಂತಿ ಹಬ್ಬುತ್ತಲೇ ಇವೆ. ರಾತ್ರಿ 12ರ ಸುಮಾರಿಗೆ ರೇಸ್‌ ಕೋರ್ಸ್‌ ಮೈದಾನದ ಗೋಡೆ ಹಾರಿ ಹೋಗಿದ್ದನ್ನು ನೋಡಿದ್ದಾಗಿ ಕೆಲವರು ಹೇಳುತ್ತಿದ್ದಾರೆ. ಆದರೆ ಪೊಲೀಸರ ಎದುರಾಗಲೀ ಅಥವಾ ಅರಣ್ಯ ಇಲಾಖೆ ಅಧಿ ಕಾರಿಗಳ ಎದುರು ಯಾರೂ ಹೇಳಲು ಮುಂದೆ ಬರುತ್ತಿಲ್ಲ.

ತಾಲೂಕಿನ ಪಶ್ಚಿಮ ಭಾಗದ ಬೆಳವಟ್ಟಿ ಗ್ರಾಮದ ಹೊಲದಲ್ಲಿ ಚಿರತೆ ನೋಡಿರುವ ಬಗ್ಗೆ ಶಿವಾಜಿ ನಲವಡೆ ಎಂಬ ರೈತ ದಂಪತಿ ಹೇಳುತ್ತಿದ್ದಾರೆ. ತಮ್ಮ ಮೊಬೆ„ಲ್‌ನಲ್ಲಿ ಇದರ ಫೋಟೋ ತೆಗೆದಿದ್ದಾರೆ. ಬೆಳವಟ್ಟಿ ಹಾಗೂ ಸುತ್ತಮುತ್ತಲಿನ ಅನೇಕ ಗ್ರಾಮಸ್ಥರೂ ಬೆಳವಟ್ಟಿ ಬಳಿಯ ಕವಳೇವಾಡಿ ಕ್ರಾಸ್‌ ಹತ್ತಿರ ಇರುವ ನಲವಡೆ ಅವರ ಹೊಲದಲ್ಲಿ ಚಿರತೆ ಕಾಣಿಸಿಕೊಂಡಿದ್ದನ್ನು ಹೇಳುತ್ತಿದ್ದಾರೆ. ಶಿವಾಜಿ ನಲವಡೆ ಅವರು ರವಿವಾರ ಬೆಳಗ್ಗೆ ಪತ್ನಿಯೊಂದಿಗೆ ಹೊಲಕ್ಕೆ ಹೋದಾಗ ಚಿರತೆ ಕಾಣಿಸಿದೆ.

ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಬೆಳಗಾವಿಯಲ್ಲಿ ಮಾಯವಾಗಿರುವ ಚಿರತೆ ಬೆಳವಟ್ಟಿಯನ್ನು ತಲುಪಲು 15ರಿಂದ 20 ನಿಮಿಷ ಬೇಕಾಗುತ್ತದೆ. ಶಿವಾಜಿ ಅವರು ಫೋಟೊ ತೆಗೆದ ನಂತರ ಆ ಚಿರತೆ ಅಲ್ಲಿಂದ ಕಬ್ಬಿನ ಬೆಳೆಯಲ್ಲಿ ನುಸುಳಿಕೊಂಡು ಹೋಗಿದೆ. ಗಾಲ್ಫ್ ಕ್ಲಬ್‌ ಚಿರತೆಯೇ ಬೆಳವಟ್ಟಿಗೆ ಹೋಗಿದೆಯೊ ಅಥವಾ ಬೇರೆ ಮತ್ತೂಂದು ಚಿರತೆ ಅಲ್ಲಿ ಕಾಣಿಸಿಕೊಂಡಿದೆಯೋ ಎಂಬುದರ ಬಗ್ಗೆ ನಿಖರವಾಗಿ ಗೊತ್ತಾಗುತ್ತಿಲ್ಲ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next