Advertisement

Belagavi: ಕುಂದಾನಗರಿ ರಾಜ್ಯೋತ್ಸವಕ್ಕೆ ಲಕ್ಷೋಪಲಕ್ಷ ಜನ

11:57 PM Nov 01, 2023 | Team Udayavani |

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆ ತಡರಾತ್ರಿವರೆಗೂ ನಡೆದಿದ್ದು, ಮೆರವಣಿಗೆಯಲ್ಲಿ ನಿರೀಕ್ಷೆಗೂ ಮೀರಿ ಜನ ಸೇರಿದ್ದರು. ಲಕ್ಷ ಲಕ್ಷ ಜನರು ಕನ್ನಡ ಹಬ್ಬದಲ್ಲಿ ಕಂಡು ಬಂದಿರುವುದು ವಿಶೇಷವಾಗಿದೆ.

Advertisement

ಎದೆ ನಡುಗಿಸುವಂಥ ಒಂದಕ್ಕಿಂತ ಒಂದು ಡಿಜೆ, ಡಾಲ್ಬಿಗಳ ಅಬ್ಬರ ಜೋರಾಗಿತ್ತು. ಪ್ರತಿಯೊಂದು ಓಣಿ ಓಣಿಗಳಿಂದ ಬಂದ ಡಿಜೆ ಡಾಲ್ಬಿಗಳು ಮೈನವಿರೇಳಿಸುವಂತಿದ್ದವು. ರಾಣಿ ಚನ್ನಮ್ಮ ವೃತ್ತಕ್ಕೆ ಬಂದ ಡಿಜೆ, ಡಾಲ್ಬಿಗಳ ಸದ್ದು ಕಿವಿ ಗುಂಯ್ಯಗುಡಿಸಿತು. ಚನ್ನಮ್ಮ ವೃತ್ತದಲ್ಲಿ ಮರ‍್ನಾಲ್ಕು ಡಿಜೆಗಳು ಸುತ್ತುವರಿದು ಅಬ್ಬರಿಸಿದ ಸಂಗೀತಕ್ಕೆ ಯುವ ಸಮೂಹ ಕುಣಿಯುವ ಸೊಗಸು ನೋಡುವುದೇ ಸಂಭ್ರಮವಾಗಿತ್ತು.

ಮಹಾರಾಷ್ಟ್ರದಿಂದ ಬಂದಿದ್ದ ಡಿಜೆ, ಡಾಲ್ಬಿಗಳ ಸದ್ದಿಗೆ ಯುವ ಸಮೂಹ ಹುಚ್ಚೆದ್ದು ಕುಣಿಯಿತು. ವರ್ಣರಂಜಿತ ಲೈಂಟಿಂಗ್, ಲೇಸರ್‌ಗಳು ಮೆರವಣಿಗೆಗೆ ಮೆರುಗಿ ತಂದವು. ಕನ್ನಡ ಚಿತ್ರಗೀತೆಗಳ ಝೇಂಕರಿಸಿದವು. ಜತೆಗೆ ಅಲ್ಲಲ್ಲಿ ಹಿಂದಿ, ತೆಲುಗು, ಮರಾಠಿ ಹಾಡುಗಳೂ ಮೂಡಿ ಬಂದವು. ಬಹುಸಂಸ್ಕೃತಿಯ ನಗರಿ ಬೆಳಗಾವಿಯ ಈ ಬಾರಿಯ ಮೆರವಣಿಗೆ ಸುವರ್ಣಆಕ್ಷರದಲ್ಲಿ ಬರೆದಿಡುವಂತಿತ್ತು.

ಈ ಬಾರಿಯ ಮೆರವಣಿಗೆಯಲ್ಲಿ ದಾಖಲೆಯ ಜನ ಪಾಲ್ಗೊಂಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಯಿತು. ಸಹಸ್ರಾರು ಸಂಖ್ಯೆಯ ಜನಸ್ತೋಮ ಜಿಲ್ಲಾಡಳಿತ ಹಾಗೂ ಪೊಲೀಸರನ್ನು ದಿಗ್ಭ್ರಮೆಗೊಳಿಸಿತು. ಅಲ್ಲಲ್ಲಿ ಸಣ್ಣ ಪುಟ್ಟ ಜಗಳ ಬಿಟ್ಟರೆ ಬಹುತೇಕ ಶಾಂತಿಯುತ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next