Advertisement

Belagavi; ಹಣ ದುಪ್ಪಟ್ಟು ಮಾಡುವುದಾಗಿ ವಂಚಿಸಿದ್ದ ಖತರ್ನಾಕ್‌ ಗ್ಯಾಂಗ್ ಬಂಧನ

09:09 PM Dec 29, 2023 | Team Udayavani |

ಬೆಳಗಾವಿ: ಹಣ ದುಪ್ಪಟ್ಟು ಮಾಡುವುದಾಗಿ 25 ಲಕ್ಷ ರೂ.‌ವಂಚಿಸಿದ್ದ ಮಹಿಳೆ ಸೇರಿ 7 ಜನರ ಖತರ್ನಾಕ್‌ ಗ್ಯಾಂಗ್ ಬಂಧಿಸುವಲ್ಲಿ ಕಾಕತಿ ಪೊಲೀಸರು ಯಶಸ್ವಿಯಾಗಿದ್ದಾರೆ. ‌

Advertisement

ಮೂಲತಃ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಹಾಲಿ ಸಂಕೇಶ್ವರದ ದೀಪಾ ಅವಟಗಿ, ಹುಕ್ಕೇರಿಯ ಶಿವಾನಂದ ಮಠಪತಿ, ಅಪ್ಪಯ್ಯ ಪೂಜಾರಿ, ಸುನಿಲ್ ವಿಭೂತಿ, ಸಚಿನ್ ಕುಮಾರ್ ಅಂಬ್ಲಿ, ಭರತೇಶ ಅಗಸರ, ಶಶಾಂಕ‌ ರಾವಸಾಹೇಬ ದೊಡ್ಡನ್ನವರ ಅವರನ್ನು ಬಂಧಿಸಲಾಗಿದೆ. 11.50 ಲಕ್ಷ ರೂ.‌ನಗದು ಹಣ ಹಾಗೂ ಎರಡು ವಾಹನ ಸೇರಿ ಒಟ್ಟು 22 ಲಕ್ಷ‌ರೂ.‌ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಸಚಿವ ಸತೀಶ ಜಾರಕಿಹೊಳಿ ಅವರ ಆಪ್ತ ಗೋಕಾಕದ ಸಿದ್ದನಗೌಡ ಬಿರಾದಾರ ಎಂಬವರಿಗೆ ದೀಪಾ ಅವಟಗಿ ಪರಿಚಯ ಆಗುತ್ತಾರೆ. ತಮ್ಮ‌ಸಂಬಂಧಿಕರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಧಿಕಾರಿ ಆಗಿದ್ದು, ಕೆಲವೇ ದಿನಗಳಲ್ಲಿ ನಿಮ್ಮ ಹಣ ದುಪ್ಪಟ್ಟು ಮಾಡುವುದಾಗಿ ದೀಪಾ ಅವಟಗಿ ಹೇಳಿ ಸಿದ್ದನಗೌಡ ಅವರನ್ನು‌ ನಂಬಿಸುತ್ತಾಳೆ. ಇದನ್ನು ನಂಬಿದ ಸಿದ್ಧನಗೌಡ ಅವರು 25 ಲಕ್ಷ ರೂ. ಹೂಡಿಕೆ ಮಾಡಲು ಬರುತ್ತಾರೆ.‌ಕಾಕತಿ ಠಾಣೆ ವ್ಯಾಪ್ತಿಯ ಸಾಯಿ ಧಾಬಾ ಹತ್ತಿರ 25 ಲಕ್ಷ ರೂ. ನೀಡುವಾಗ  ಪೊಲೀಸರು(ನಕಲಿ) ಬಂದರು ಎಂದು ಹೆದರಿಸಿ ಹಣ ಕಸಿದುಕೊಂಡು ಹೋಗಿದ್ದರು.

ಈ ಬಗ್ಗೆ ಸಿದ್ದನಗೌಡ ಬಿರಾದಾರ ಕಾಕತಿ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಆರೋಪಿಗಳ ವಿರುದ್ಧ ಕಾಕತಿ ಠಾಣೆಯಲ್ಲಿ 264/23 ಕಲಂ. 419, 420 ಐಪಿಸಿ ಅಡಿ ವಂಚನೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.‌ ಪ್ರಕರಣದ ಬೆನ್ನತ್ತಿದ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next