ಬೆಳಗಾವಿ: ಮುನಿರತ್ನನವರಿಗೆ ನಾವು ಬೈಯ್ಯುವಂತೆ ಹೇಳಿದ್ದೇವಾ? ಸಿಕ್ಕ ಸಿಕ್ಕ ಹಾಗೆ ಬಾಯಿಗೆ ಬಂದ ಹಾಗೇ ಬೈಯ್ಯವಂತೆ ಹೇಳಿದ್ವಾ? ಬೈಯ್ಯುವಂತೆ ಕಾಂಗ್ರೆಸ್ ನವರು, ಬಿಜೆಪಿಯವರು, ಜೆಡಿಎಸ್ ನವರು ಹೇಳಿದ್ರಾ? ತರಾತುರಿಯಲ್ಲಿ ನಾವು ಮಾಡಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರೆಸ್ಟ್ ಮಾಡಿದರೆ ಮಾಡಿದ್ದೀರಿ ಅಂತಾರೆ, ಮಾಡಿಲ್ಲ ಅಂದರೆ ಮಾಡಿಲ್ಲ ಎಂದು ಹೇಳುತ್ತಾರೆ ಎಂದರು.
ಪ್ರಧಾನಿ ಭಾಷಣದಲ್ಲಿ ನಾಗಮಂಗಲ ಗಲಾಟೆ ವಿಷಯ ಪ್ರಸ್ತಾಪ ವಿಚಾರಕ್ಕೆ ಮಾತನಾಡಿದ ಅವರು, ಅದನ್ನ ಬಿಟ್ಟು ಅವರಿಗೆ ಬೇರೆ ಎನೂ ಹೇಳುವುದಿದೆ. ರಾಜ್ಯದಲ್ಲಿ ಅರವತ್ತು ಸಾವಿರ ಗಣಪತಿ ಇದ್ದಾವೆ. ಎಲ್ಲೋ ಒಂದು ಆಕಸ್ಮಿಕ ಆಗಿರಬಹುದು, ಪೊಲೀಸರು ಅದನ್ನು ನೋಡಿಕೊಳ್ತಾರೆ. ಅದನ್ಯಾಕೆ ಅಷ್ಟು ಗಂಭೀರವಾಗಿ ತಗೆದುಕೊಳ್ಳಬೇಕು ಎಂದ ಸತೀಶ್ ಜಾರಕಿಹೊಳಿ ಹೇಳಿದರು.
ಮುನಿರತ್ನಗೇ ನಾವು ಹೇಳಿದ್ವಾ?
ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ ಅವರು, ದೇಶದಲ್ಲಿ ದ್ವೇಷದ ರಾಜಕಾರಣ ಯಾರು ಮಾಡುತ್ತಾರೆ. ನಮಗೂ ಎಲ್ಲರಿಗೂ ಗೊತ್ತಿದೆ. ನಾವೇನೂ ಮುನಿರತ್ನ ಅವರಿಗೆ ಬೈಯ್ಯುವಂತೆ ಹೇಳಿದ್ವಾ? ಬ್ಲ್ಯಾಕ್ ಮೇಲ್ ಮಾಡುವಂತೆ ನಾವು ಹೇಳಿದ್ವಾ ನಾವೇನೂ ಹೇಳಿಲ್ವಲ್ಲಾ, ಮಾಡಿದ್ದುಣ್ಣೋ ಮಹಾರಾಯ ಎಂಬಂತಾಗಿದೆ ಎಂದರು.
ಕೆಲವೊಬ್ಬರು ಮಾತಾಡ್ತಾರೆ. ತೊಂಬತ್ತು ಪರ್ಸಂಟ್ ಸತ್ಯಾ ಸತ್ಯತೆ ಪ್ರಮಾಣೀಕರಿಸಿ ನೋಡಬೇಕು. ಇದು ಏನಿದೆ ಅನ್ನೋದು ನಮಗೆಲ್ಲರಿಗೂ ಗೊತ್ತಿದೆ. ಇದಕ್ಕೆ ಕನ್ನಡಿ ಹಿಡಿಯುವ ಅವಶ್ಯಕತೆ ಇಲ್ಲಾ ಎಂದರು.