Advertisement

ಬೆಳಗಾವಿ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ : ನಾಲ್ವರ ಬಂಧನ

10:17 PM Jul 27, 2022 | Team Udayavani |

ಬೆಳಗಾವಿ : ಸಮೀಪದ‌ ಸುಳಗಾ – ಹಿಂಡಲಗಾ ರಸ್ತೆಯಲ್ಲಿರುವ ಅಂಬಿಕಾ ಲಾಡ್ಜ್ ಮತ್ತು ಬೋರ್ಡಿಂಗ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾಗ ಬುಧವಾರ ಪೊಲೀಸರು ದಾಳಿ ನಡೆಸಿ ನಾಲ್ವರು ಯುವಕರನ್ನು ಬಂಧಿಸಿದ್ದಾರೆ.

Advertisement

ತಾಲೂಕಿನ ಕಂಗ್ರಾಳಿ ಕೆ.ಎಚ್.‌ ಗ್ರಾಮದ ಶಿವಾಜಿ ಗಲ್ಲಿಯ ರಾಹುಲ್ ಪಾಟೀಲ, ಮಯೂರ ಪಾಟೀಲ, ನಗರದ ಗವಳಿ ಗಲ್ಲಿಯ ಸೋಮನಾಥ ಗವಳಿ ಹಾಗೂ ಮಾರೀಹಾಳ ಗ್ರಾಮದ‌ ರಮೇಶ ತಾರೀಹಾಳ ಎಂಬವರನ್ನು ಬಂಧಿಸಲಾಗಿದೆ.‌ ಮಹಿಳೆಯರನ್ನು ರಕ್ಷಿಸಲಾಗಿದೆ.

ಮಹಿಳಾ ಠಾಣೆ ಇನ್ಸಪೆಕ್ಟರ್ ಶ್ರೀದೇವಿ ಪಾಟೀಲ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದರು. ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಒಂದೇ 15 ಜನರಿಗೆ ಸೋಂಕು : ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲಿ ಹೆಚ್ಚಿದ ಕೋವಿಡ್ ಪ್ರಕರಣ

Advertisement

Udayavani is now on Telegram. Click here to join our channel and stay updated with the latest news.

Next