ಬೆಳಗಾವಿ: ಜಮೀನು ವಿವಾದಕ್ಕೆ ಸಂಬಂಧಿಸಿ ಇಬ್ಬರು ಸಹೋದರರು ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡು ಮೃತಪಟ್ಟಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖೋತವಾಡಿಯಲ್ಲಿ ನಡೆದಿದೆ.
ಹನುಮಂತ ಖೋತ (34) ಹಾಗೂ ಖಂಡೋಬಾ ಖೋತ (32) ಮೃತಪಟ್ಟ ದುರ್ದೈವಿಗಳು.
ಕಳೆದ ಹಲವಾರು ವರ್ಷಗಳಿಂದ ಈ ಇಬ್ಬರು ಸಹೋದರರ ನಡುವೆ ಜಮೀನು ವಿವಾದ ಇತ್ತು ಎನ್ನಲಾಗಿದೆ ಅಲ್ಲದೆ ವಿವಾದ ಬಗೆಹರಿಸಲು ರಾಜಿ ಸಂಧಾನ ಮಾಡಿದ್ದರೂ ಯಾವುದೇ ಪ್ರಯೋಜನ ವಾಗಿರಲಿಲ್ಲ.
ಈ ನಡುವೆ ಮತ್ತೆ ಇಬ್ಬರು ಸಹೋದರರ ಮಧ್ಯೆ ಜಗಳ ನಡೆದು ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡು ಗಂಭೀರ ಗಾಯಗೊಂಡಿದ್ದರು, ಗಾಯಗೊಂಡಿದ್ದ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಹೋದರರು ಸಾವನ್ನಪ್ಪಿದ್ದಾರೆ.
ಘಟನೆ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Chikkaballapura: ಇದು ರಾಜಕೀಯ ಬಜೆಟ್ ಅಲ್ಲ, ರಾಷ್ಟ್ರೀಯ ಬಜೆಟ್: ಸಂಸದ ಡಾ.ಕೆ.ಸುಧಾಕರ್