Advertisement

ಬೆಳಗಾವಿ ಜಿಲ್ಲೆಯಲ್ಲಿ 1592 ಪಾಸಿಟಿವ್ ಪ್ರಕರಣ : ಹೆಚ್ಚಿದ ಆತಂಕ

09:06 PM May 14, 2021 | Team Udayavani |

ಬೆಳಗಾವಿ: ಕೊರೊನಾ ಪಾಸಿಟಿವ್ ಸಂಖ್ಯೆ ಪ್ರಮಾಣದಲ್ಲಿ ಶುಕ್ರವಾರ ದಿಢೀರ್ ಏರಿಕೆ ಆಗಿದ್ದು, ಒಂದೇ ದಿನ 1592 ಜನರಿಗೆ ಸೋಂಕು ತಗುಲಿದೆ.

Advertisement

ಕೆಲ ದಿನಗಳ ಹಿಂದೆ ಸಾವಿರ ಸಮೀಪ ಅಥವಾ ಸಾವಿರದೊಳಗೆ ಪಾಸಿಟಿವ್ ಬರುತ್ತಿದ್ದ ಜಿಲ್ಲೆಯಲ್ಲಿ ಈಗ ಒಂದೇ ದಿನ 1500 ದಾಟಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಒಟ್ಟು 43,557 ಜನರಿಗೆ ಸೋಂಕು ತಗುಲಿದಂತಾಗಿದೆ. ಸದ್ಯ 6583 ಸಕ್ರಿಯ ಪ್ರಕರಣಗಳು ಇವೆ.

ಜಿಲ್ಲೆಯಾದ್ಯಂತ ಒಂದೇ ದಿನ 358 ಜನ ಗುಣಮುಖರಾಗಿದ್ದಾರೆ. ಈವರೆಗೆ 33592 ಜನ ಚೇತರಿಕೆ ಕಂಡಿದ್ದಾರೆ. ಸೋಂಕಿಗೆ ನಾಲ್ವರು ಮೃತಪಟ್ಟಿದ್ದಾರೆ. ಬೆಳಗಾವಿ ನಗರ ಮತ್ತು ಗ್ರಾಮೀಣ ಸೇರಿ ಒಟ್ಟು 802 ಜನರಲ್ಲಿ ಪಾಸಿಟಿವ್ ಬಂದಿದೆ. ಅಥಣಿ 135, ಬೈಲಹೊಂಗಲ 26, ಚಿಕ್ಕೋಡಿ 77, ಗೋಕಾಕ 208, ಹುಕ್ಕೇರಿ 137, ಖಾನಾಪುರ 31, ರಾಮದುರ್ಗ 48, ರಾಯಬಾಗ 67, ಸವದತ್ತಿ 50 ಸೇರಿ ಒಟ್ಟು 1592 ಜನರಿಗೆ ಸೋಂಕು ದೃಢಪಟ್ಟಿದೆ.

ಇದನ್ನೂ ಓದಿ :‘ಕಿಸಾನ್‌ ಸಮ್ಮಾನ್‌’ ನಿಧಿ ಯೋಜನೆಯಡಿ 9.5 ಕೋಟಿ ರೈತರಿಗೆ ಮೊದಲ ಕಂತಿನ ಹಣ ಬಿಡುಗಡೆ

Advertisement

Udayavani is now on Telegram. Click here to join our channel and stay updated with the latest news.

Next