Advertisement

Belagavi; ಎರಡು ಮಕ್ಕಳ ತಾಯಿಯನ್ನೇ ಮತಾಂತರಕ್ಕೆ ಯತ್ನಿಸಿದ ದಂಪತಿ ಬಂಧನ

04:44 PM Apr 21, 2024 | Team Udayavani |

ಬೆಳಗಾವಿ: ಹುಬ್ಬಳ್ಳಿಯ ನೇಹಾ ಹತ್ಯೆಯ ಪ್ರಕರಣದ ಪ್ರಮುಖ ಕೇಂದ್ರವಾಗಿರುವ ಸವದತ್ತಿ ತಾಲೂಕಿನ ಮುನವಳ್ಳಿ ಮತ್ತೊಂದು ಆಘಾತಕಾರಿ ಪ್ರಕರಣದಿಂದ ಸುದ್ದಿಯಾಗಿದ್ದು, ಎರಡು ಮಕ್ಕಳ ತಾಯಿಯನ್ನೇ ಮತಾಂತರಕ್ಕೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಈ ಪ್ರಕರಣದ ಹಿಂದೆ ಲವ್ ಜಿಹಾದ್ ಪ್ರಯತ್ನದ ಆರೋಪ ಸಹ ಕೇಳಿಬಂದಿದೆ. ಮತಾಂತರಕ್ಕೆ ಯತ್ನಿಸಿದ ಪ್ರಮುಖ ಅರೋಪಿ ರಫೀಕ್ ಬೇಪಾರಿ ಹಾಗೂ ಆತನ ಪತ್ನಿಯನ್ನು ಬಂಧಿಸಲಾಗಿದೆ.

ಇದಲ್ಲದೆ ಇವರಿಗೆ ಸಾಥ್ ನೀಡಿದ ಆರೋಪದ ಮೇಲೆ ಇನ್ನೂ ಐದು ಜನರ ವಿರುದ್ಧ ದೂರು ದಾಖಲಾಗಿದೆ.

ಸಂತ್ರಸ್ತ ಮಹಿಳೆಯ ಖಾಸಗಿ ಫೊಟೋಗಳನ್ನು ತೆಗೆದುಕೊಂಡ ಆರೋಪಿಯು ನಾನು ಹೇಳಿದ ಹಾಗೆ ಕೇಳದಿದ್ದರೆ ಮತ್ತು ಮತಾಂತರಗೊಳ್ಳದಿದ್ದರೆ ಈ ಪೊಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವದಾಗಿ ಬೆದರಿಕೆ ಹಾಕಿದ್ದಾನೆ.

ಮನೆಯಲ್ಲಿ ದಿನನಿತ್ಯ ಐದು ಬಾರಿ ನಮಾಜ್ ಮಾಡಬೇಕು. ಹಣೆಗೆ ಕುಂಕುಮ ಹಚ್ಚಬಾರದು. ಬುರ್ಖಾ ಹಾಕಿಕೊಳ್ಳಬೇಕು ಎಂದು ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ ಎಷ್ಟು ಸಲ ಹೇಳಿದರೂ ಕೇಳದೆ ನನ್ನ ತಾಳಿಯನ್ನೂ ಕಿತ್ತುಹಾಕಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

ಮುನವಳ್ಳಿಯಲ್ಲಿ ವರ್ಷದ ಹಿಂದೆ ಸಂತ್ರಸ್ತ ಮಹಿಳೆಯ ಜೊತೆಗೆ ಸಂಪರ್ಕ ಬೆಳೆಸಿಕೊಂಡಿದ್ದ ಆರೋಪಿಯು ಮಹಿಳೆಯ ಮೊಬೈಲ್ ನಂಬರ್ ಪಡೆದುಕೊಂಡು ಹಲವಾರು ರೀತಿಯ ಆಮಿಷಗಳನ್ನು ಒಡ್ಡಿದ್ದಾನೆ. ಕೆಲಸ ಕೊಡಿಸುವದಾಗಿ ಹೇಳಿದ್ದಲ್ಲದೆ ಆಕೆಯನ್ನು ಬೆಳಗಾವಿಗೆ ಕರೆತಂದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತ ಮಹಿಳೆಯು ದೂರಿದ್ದಾಳೆ.

ಪ್ರಮುಖ ಆರೋಪಿ ರಫೀಕಗೆ ಐವರು ಬೆಂಬಲವಾಗಿ ನಿಂತಿದ್ದಲ್ಲದೆ ಲೈಂಗಿಕ ದೌರ್ಜನ್ಯದ ಪೊಟೊಗಳನ್ನು ಸೆರೆಹಿಡಿದು ಮುಸ್ಲಿಂ ಧರ್ಮಕ್ಕೆ ಮತಾಂತರವಾಗದಿದ್ದರೆ ಈ ಪೋಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುವದಾಗಿ ಬೆದರಿಕೆ ಹಾಕಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬುರ್ಖಾ ಧರಿಸಬೇಕು. ಕುಂಕುಮ ಹಚ್ಚಬಾರದು ಎಂದು ಬೆದರಿಕೆ ಹಾಕಿದ ಆರೋಪದ ಮೇಲೆ ಪ್ರಮುಖ ಆರೋಪಿ ರಫೀಕ ಬೇಪಾರಿ ಮತ್ತು ಆತನ ಪತ್ನಿಯನ್ನು ಬಂದಿಸಿದ್ದಾರೆ. ಹೆಚ್ಚಿನ ತನಿಖೆ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next