Advertisement

ಗೋವಾ-ಮಂಗಳೂರು-ಮೈಸೂರು ರೈಲು ಸಂಚಾರಕ್ಕೆ ಮನವಿ

04:25 PM Feb 03, 2021 | Team Udayavani |

ಮೂಡಲಗಿ: ಬೆಳಗಾವಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ಸಾರ್ವಜನಿಕರ ಅನುಕೂಲಕ್ಕಾಗಿ ಗೋವಾ-ಮಂಗಳೂರ ಮತ್ತು ಮೈಸೂರು,
ಈ ಮೂರು ನಗರಗಳಿಗೆ ಶೀಘ್ರ ರೈಲು ಓಡಾಟ ಆರಂಭಿಸಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕೇಂದ್ರ ರೈಲ್ವೆ ಸಚಿವ ಪಿಯೂಷ ಗೋಯಲ್‌ ಅವರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು.

Advertisement

ಕೇಂದ್ರ ರೈಲ್ವೆ ಸಚಿವ ಪಿಯೂಷ ಗೊಯಲ್‌ ಅವರ ನವದೆಹಲಿ ಕಚೇರಿಗೆ ಮಂಗಳವಾರ ಭೇಟಿ ನೀಡಿ ಈ ಭಾಗದ ಸಾರ್ವಜನಿಕರ ಪರ ಮನವಿ ಪತ್ರ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಬೆಳಗಾವಿ-ಬೆಂಗಳೂರು ಸೂಪರ ಫಾಸ್ಟ್‌ ರೈಲು ಸಂಚಾರವನ್ನು ಮೈಸೂರುವರೆಗೆ ವಿಸ್ತರಿಸಬೇಕು, ಮಂಗಳೂರ ರೈಲು ಓಡಾಟದಿಂದ ವಿದ್ಯಾರ್ಥಿಗಳಿಗೆ, ಪ್ರವಾಸಿಗರಿಗೆ ಹಾಗೂ ಗೋವಾ ರೈಲು ಓಡಾಟ ಆರಂಭಿಸುವುದರಿಂದ ಈ ಭಾಗದ ರೈತರ ತರಕಾರಿ, ಹಾಲು ಉತ್ಪಾದಕರಿಗೆ ಬಹಳ ಅನುಕೂಲ ಕಲ್ಪಿಸಿದಂತಾಗುತ್ತದೆ. ಈ ಹಿಂದೆ ಮೀಟರ್‌ ಗೇಜ್‌ ಮಾರ್ಗದಲ್ಲಿ ರೈಲು
ಓಡಾಡುತ್ತಿದ್ದವು. ಈಗ ಬ್ರಾಡ್‌ಗೆಜ್‌ ಮಾರ್ಗ ನಿರ್ಮಾಣವಾಗಿದ್ದರೂ ಕೆಲ ರೈಲುಗಳ ಓಡಾಟ ನಿಲ್ಲಿಸಲಾಗಿದೆ. ಅವುಗಳನ್ನು ಮರಳಿ ಆರಂಭಿಸುವ ಮೂಲಕ ಉತ್ತರ ಕರ್ನಾಟಕದ ಜನರ ಬೇಡಿಕೆಗೆ ಸ್ಪಂದಿಸಬೇಕೆಂದರು.

ಹುಬ್ಬಳ್ಳಿ-ಮೀರಜ್‌ ರೈಲ್ವೆ ಮಾರ್ಗದ ದ್ವಿಪಥ ಕಾಮಗಾರಿ ತ್ವರಿತಗೊಳಿಸುವ ಮೂಲಕ ಹೆಚ್ಚಿನ ರೈಲುಗಳ ಓಡಾಟಕ್ಕೆ ಅನುಕೂಲ ಕಲ್ಪಿಸಬೇಕು. ಈ ಮಾರ್ಗದಲ್ಲಿರುವ ಎಲ್ಲಾ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಿ ಬೇಗನೆ ಕಾಮಗಾರಿ ಪೂರ್ಣಗೊಳಿಸಬೇಕೆಂದರು. ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಿಭಾಗದ ಭೌಗೋಳಿಕ ವ್ಯಾಪ್ತಿ ವಿಜಯನಗರದವರೆಗೆ ಇದ್ದು, ಮೀರಜ್‌ವರೆಗೆ ವಿಸ್ತರಿಸಿ ಹುಬ್ಬಳ್ಳಿ ಮೀರಜ್‌ ಪ್ಯಾಸೆಂಜರ್‌ ರೈಲು ಓಡಾಟ ಆರಂಭಿಸಬೇಕು. ಬೆಂಗಳೂರು ಬಿಟ್ಟು, ಅತಿ ಹೆಚ್ಚು ಜನರ ಸಂಪರ್ಕ ಸೇತುವೆಯಂತಿರುವ ಬೆಳಗಾವಿಗೆ ರೈಲ್ವೆ ಸೌಲಭ್ಯಕ್ಕೆ ವಿಶೇಷ ಗಮನ ನೀಡಬೇಕೆಂದು ಮನವಿ ಮಾಡಿದರು.

ಓದಿ :ಬಾಗಲಕೋಟೆಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ 8 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ಜಪ್ತಿ

 

Advertisement
Advertisement

Udayavani is now on Telegram. Click here to join our channel and stay updated with the latest news.

Next